ಲಕ್ಷಾಂತರ ಕೋಟಿಯ ಆಸ್ತಿ ಇದ್ದರೂ ಕೂಡ ಅಂಬಾನಿ ಹೆಂಡತಿ ನೀತು ಅಂಬಾನಿ 1 ಗ್ರಾಂ ಚಿನ್ನ ಕೂಡ ಹಾಕಲ್ಲ. ಯಾಕೆ ಗೊತ್ತೇ??

65

ನಮಸ್ಕಾರ ಸ್ನೇಹಿತರೆ ನೀತಾ ಅಂಬಾನಿ ಅವರ ಕುರಿತಂತ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೇವಲ ಭಾರತ ಮಾತ್ರವಲ್ಲದ ಇಡೀ ಏಷ್ಯಾ ಖಂಡದಲ್ಲಿ ಅತ್ಯಂತ ದೊಡ್ಡ ಶ್ರೀಮಂತ ಹಾಗೂ ಬಿಸಿನೆಸ್ ಮ್ಯಾನ್ ಆಗಿರುವ ರಿಲಯನ್ಸ್ ಕಂಪನಿಯ ಒಡೆಯ ಆಗಿರುವ ಮುಕೇಶ್ ಅಂಬಾನಿ ಅವರ ಪತ್ನಿ ಆಗಿರುವ ನೀತಾ ಅಂಬಾನಿಯವರಿಗೆ ಶ್ರೀಮಂತಿಕೆಯಲ್ಲಿ ಏನು ತಾನೆ ಕಮ್ಮಿ ಇದೆ ಹೇಳಿ.

ನೀತಾ ಅಂಬಾನಿಯವರು ಕೇವಲ ಮುಖೇಶ್ ಅಂಬಾನಿ ಅವರ ಪತ್ನಿಯಾಗಿ ಮಾತ್ರವಲ್ಲದೆ ಸಮಾಜದಲ್ಲಿ ಸ್ವಾವಲಂಬಿ ಬಿಸಿನೆಸ್ ಮಹಿಳೆ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ನೀತು ಅಂಬಾನಿ ಅವರ ಕುರಿತಂತೆ ಮಾತನಾಡುವುದಾದರೆ ಮುಂಬೈ ಇಂಡಿಯನ್ಸ್ ಸೇರಿದಂತೆ ಹಲವಾರು ಟ್ರಸ್ಟ್ ಪ್ರೀತಿಯ ಕೆಲಸಗಳನ್ನು ಕೂಡ ತಾವೇ ಮುಂದೆ ನಿಂತು ನಿರ್ವಹಿಸುತ್ತಾರೆ. ಇನ್ನು ಇವರು ಚಿನ್ನವನ್ನು ಧರಿಸುವುದಿಲ್ಲ ಎಂಬುದಾಗಿ ಒಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇವರ ಹಲವಾರು ಫೋಟೋಗಳನ್ನು ನೀವು ಸೋಶಿಯಲ್ ಮೀಡಿಯಾ ಗಳಲ್ಲಿ ಗಮನಿಸಬಹುದು ಆದರೆ ಇವರು ಯಾವುದೇ ಚಿನ್ನದ ಆಭರಣಗಳನ್ನು ತೊಟ್ಟಿಲ್ಲ. ಇವರು ಸಾಮಾನ್ಯವಾಗಿ ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಮುತ್ತು ಹಾಗೂ ಹವಳದ ಆಭರಣಗಳನ್ನು ಹೆಚ್ಚಾಗಿ ತೊಡುತ್ತಾರೆ.

ಇದಕ್ಕೆ ಪ್ರಮುಖವಾಗಿ ತಿಳಿದು ಬಂದಿರುವ ವಿಚಾರವೆಂದರೆ ನೀತು ಅಂಬಾನಿಯವರು ಚಿನ್ನದ ಆಭರಣಗಳನ್ನು ತೊಡಲು ಇಷ್ಟಪಡುವುದಿಲ್ಲವಂತೆ. ಇದಕ್ಕೆ ಜ್ಯೋತಿಷ್ಯದ ಕಾರಣ ಇದ್ದರೂ ಕೂಡ ಇರಬಹುದು ಎಂಬುದಾಗಿ ಕೆಲವೊಂದು ಮೂಲಗಳು ಹೇಳುತ್ತವೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಇದುವರೆಗೂ ಯಾರು ಕೂಡ ದೃಢಪಡಿಸಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ ಬಿಲಿಯನ್ಗಟ್ಟಲೆ ಸಂಪತ್ತನ್ನು ಹೊಂದಿರುವ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯ ಪತ್ನಿಯು ಕೂಡ ಚಿನ್ನದ ಆಭರಣಗಳನ್ನು ತೊಡುತ್ತಿಲ್ಲ ಎಂಬುದು ಆಶ್ಚರ್ಯಕರ ವಿಚಾರ.