ಅಂತೂ ಇಂತೂ ಬಂದ್ರು ಅಮ್ಮಮ್ಮ: ಬಂದ ಕೂಡ ಟ್ವಿಸ್ಟ್ ಮೇಲೆ ಟ್ವಿಸ್ಟ್: ಈಗ ಮತ್ತೊಂದು ಮಹಾ ಟ್ವಿಸ್ಟ್ ಗೆ ಸ್ಕೆಚ್. ಏನು ಗೊತ್ತೇ??

27

ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕನ್ನಡತಿ ಧಾರವಾಹಿ ಹಲವಾರು ವಿಚಾರಗಳಿಗಾಗಿ ಪ್ರೇಕ್ಷಕರ ನೆಚ್ಚಿನ ಧಾರಾವಾಹಿ ಯಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ತಿರುವುಗಳಿಂದ ಪ್ರೇಕ್ಷಕರನ್ನು ದಿನಾಲು ಈ ಧಾರಾವಾಹಿ ನೋಡುವಂತೆ ಆಕರ್ಷಿಸಿದೆ ಎಂದರೆ ತಪ್ಪಾಗಲಾರದು.

ಅದರಲ್ಲಿ ನಿಮಗೆ ತಿಳಿದಿರುವ ಹಾಗೆ ಹರ್ಷ ಹಾಗೂ ಭುವಿ ಮದುವೆ ಆದ ನಂತರ ಹಾಗೂ ರತ್ನಮಾಲ ರವರು ಚಿಕಿತ್ಸೆಗಾಗಿ ವಿದೇಶಕ್ಕೆ ಹೋದ ನಂತರ ಧಾರವಾಹಿಯ ಚಿತ್ರಣವೆ ಬದಲಾಗಿ ಹೋಗಿಬಿಟ್ಟಿದೆ. ರತ್ನಮಾಲ ಅವರ ಬಳಿ ಹೋಗಿ 10 ಕರೆದು ಅವರ ಕಂಪನಿಯ ಎಂಡಿ ಆಗಿ ಸಾನಿಯಾ ಅಧಿಕಾರವನ್ನು ಪಡೆದುಕೊಂಡಿದ್ದಾಳೆ. ಇತ್ತ ಹರ್ಷ ಭುವಿಯನ್ನು ಮದುವೆಯಾಗಿರುವುದು ಕೂಡ ಆಕೆಗೆ ಸಹಿಸಲಾಗದಾಗಿದೆ. ಇನ್ನೊಂದು ಕಡೆ ತನ್ನ ಪ್ರಿಯಕರ ಹರ್ಷನನ್ನು ಭುವಿ ಮದುವೆ ಆಗಿರುವುದು ವರುದಿನಿ ಗೂ ಕೂಡ ಸಹಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಇದೇ ಕಾರಣಕ್ಕಾಗಿ ಭೂಮಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಶಾಲೆಯಿಂದಲೂ ಕೂಡ ಸಾನಿಯಾ ಕೆಲಸದಿಂದ ತೆಗೆದುಹಾಕಿದ್ದಾಳೆ. ಆದರೆ ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಿರುವ ಪ್ರೊಮೋ ಪ್ರಕಾರ ದೊಡ್ಡ ಆಶ್ಚರ್ಯಕರ ಘಟನೆಯೊಂದು ಧಾರವಾಹಿಯಲ್ಲಿ ಅತಿ ಶೀಘ್ರದಲ್ಲಿ ನಡೆಯಲಿದೆ ಎಂಬುದಾಗಿ ಕನ್ಫರ್ಮ್ ಆಗಿದೆ.

ಹೌದು ಸ್ನೇಹಿತರೆ, ರತ್ನಮಾಲ ರವರು ವಿದೇಶದಿಂದ ಈಗ ಮತ್ತೊಮ್ಮೆ ಮನೆಗೆ ಬಂದಿದ್ದಾರೆ ಎಂಬುದಾಗಿ ಪ್ರೋಮದಲ್ಲಿ ತಿಳಿಸಲಾಗಿದೆ. ಅವರು ಮನೆಗೆ ಬಂದರೆ ಈಗಾಗಲೇ ಅವರು ಭುವಿಯ ಹೆಸರಿಗೆ ಆಸ್ತಿಯನ್ನೆಲ್ಲ ಬರೆದಿದ್ದಾರೆ ಮುಂದಿನ ದಿನಗಳಲ್ಲಿ ಅವರನ್ನು ಕಂಪನಿಯ ಎಂಡಿ ಆಗಿ ನೇಮಿಸಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಹೀಗಾಗಿ ಇದು ಸಾನಿಯಾ ಸೇರಿದಂತೆ ಮನೆಯವರ ತಳ ಬುಡವನ್ನು ಅಲ್ಲಾಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇದು ಧಾರವಾಹಿಯಲ್ಲಿ ದೊಡ್ಡಮಟ್ಟದ ತಿರುವನ್ನು ನೀಡುವುದು ಪಕ್ಕ ಆಗಿದ್ದು ಪ್ರೇಕ್ಷಕರಿಗೆ ಖಂಡಿತವಾಗಿ ಒಂದೊಳ್ಳೆ ಮನರಂಜನೆ ಸಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಲಾಗುತ್ತಿದೆ.