ವಿಡಿಯೋ ಬಗ್ಗೆ ಮಾತನಾಡಿ ಸೋನು ಗೌಡ ರವರಿಗೆ ಸರಿಯಾಗಿಯೇ ಟಾಂಗ್ ನೀಡಿದ ರಾಕೇಶ್. ಹೇಳಿದ್ದೇನು ಗೊತ್ತೇ??

13

ನಮಸ್ಕಾರ ಸ್ನೇಹಿತರೇ ಈ ಬಾರಿ ಬಿಗ್ ಬಾಸ್ ಓಟಿಟಿ ಸೀಸನ್ 1 ಈಗಾಗಲೇ ಪ್ರಾರಂಭವಾಗಿದ್ದು 16 ಜನ ಸ್ಪರ್ಧಿಗಳು ಕೂಡ ಬಿಗ್ ಬಾಸ್ ಮನೆಯ ಒಳಗಡೆ ಹೋಗಿ ಈಗಾಗಲೇ ಎಂಟು ಜನ ನಾಮಿನೇಟ್ ಕೂಡ ಆಗಿದ್ದಾರೆ.

ಹೌದು ಸ್ನೇಹಿತರೆ ಮೊದಲ ವಾರದಲ್ಲಿ 16 ಜನ ಸ್ಪರ್ಧಿಗಳಲ್ಲಿ ಮೊದಲನೇ ವಾರದ ಎಲಿಮಿನೇಷನ್ಗಾಗಿ ಎಂಟು ಜನ ನಾಮಿನೇಟ್ ಆಗಿದ್ದಾರೆ. ಇನ್ನು ಆರಂಭದಲ್ಲಿಯ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆದುಹೋಗಿವೆ. ಸ್ಪೂರ್ತಿ ಗೌಡ ಹಾಗೂ ಸೋನು ಗೌಡರವರ ನಡುವಿನ ಜಗಳ ಸೇರಿದಂತೆ ಹಲವಾರು ಮಸಾಲೆಭರಿತ ಘಟನೆಗಳು ಈಗಾಗಲೇ ನಡೆಯಲು ಪ್ರಾರಂಭವಾಗಿದ್ದು ಪ್ರೇಕ್ಷಕರಿಗೆ ಮನೋರಂಜನೆಯ ಮಹಾಪೂರವೇ ಹರಿದು ಬರುತ್ತಿದೆ ಎಂಬುದಾಗಿ ಹೇಳಬಹುದಾಗಿದೆ. ಇತ್ತೀಚಿಗಷ್ಟ ಬಿಗ್ ಬಾಸ್ ನ ಒಂದು ವಿಡಿಯೋ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ ಅದರಲ್ಲಿ, ರಾಕೇಶ್ ಗೌಡ ಮೊದಲಿಗೆ ಆರ್ಯವರ್ಧನ್ ಗುರೂಜಿ ಅವರ ಹಾಗೆ ಮಿಮಿಕ್ರಿ ಮಾಡುತ್ತಾ ಭವಿಷ್ಯ ಕೇಳುವವರ ಬಳಿ ಪನ್ನೀರು ಸೇರಿದಂತೆ ಇತರ ವಸ್ತುಗಳನ್ನು ನೀಡಿ ಎಂಬಂತೆ ಡೈಲಾಗ್ ಹೊಡೆಯುತ್ತಾರೆ.

ಇದಾದ ನಂತರ ಕೂಡಲೇ ರಾಕೇಶ್ ಅಡಿಗ ಅವರು ಮತ್ತೊಬ್ಬ ಸ್ಪರ್ಧಿಯಾಗಿರುವ ಸೋನು ಶ್ರೀನಿವಾಸ ಗೌಡ ಅವರ ಹಾಗೆ ಮಿಮಿಕ್ರಿ ಮಾಡುತ್ತಾ ಮಾತನಾಡುತ್ತಾ ಸೋನು ಗೌಡ ಅವರನ್ನು ರೇಗಿಸುತ್ತಾರೆ. ಈ ವಿಡಿಯೋದ ಪ್ರೋಮಾವನ್ನು ವಾಹಿನಿ ಬಿಡುಗಡೆ ಮಾಡಿದ್ದು ವಿಡಿಯೋವನ್ನು ವೀಕ್ಷಿಸಿರುವ ಎಲ್ಲರೂ ಕೂಡ ರಾಕೇಶ್ ಅಡಿಗ ಅವರ ಮಿಮಿಕ್ರಿ ಸ್ಕಿಲ್ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆ ಎನ್ನುವುದು ಮನರಂಜನೆಯ ಮಹಾಕಣಜವಾಗಿ ಪರಿವರ್ತನೆಗೊಂಡಿದೆ.