ರಾ ರಾ ರಕ್ಕಮ್ಮ ಹಾಡಿನ ಮೂಲಕ ಎಲ್ಲರಿಗೂ ಬಿಸಿ ಮುಟ್ಟಿಸಿದ್ದ ನಟಿ ಜಾಕ್ವೆಲಿನ್ ರವರ ವಯಸ್ಸು ಎಷ್ಟು ಗೊತ್ತೇ?? ಕಾಲೇಜು ಹುಡಿಗಿಯಲ್ಲ ಇವರು.

70

ನಮಸ್ಕಾರ ಸ್ನೇಹಿತರೆ ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ವಿದೇಶಿ ಮೂಲದ ನಟಿಯರು ಕೂಡ ಇದ್ದಾರೆ ಆದರೆ ಇಂದಿಗೂ ಕೂಡ ಅವರು ಭಾರತದಲ್ಲಿ ಹುಟ್ಟಿ ನಟಿಯಾದವರಂತೆ ಕಾಣಿಸಿಕೊಳ್ಳುತ್ತಾರೆ. ಅಂತಹ ಜನಪ್ರಿಯ ಬಾಲಿವುಡ್ ನಟಿಯರಲ್ಲಿ ಜಾಕ್ವಲಿನ್ ಫರ್ನಾಂಡಿಸ್ ರವರು ಕೂಡ ಒಬ್ಬರಾಗಿದ್ದಾರೆ.

ಜಾಕ್ವಲಿನ್ ಫರ್ನಾಂಡಿಸ್ ರವರು ಆಗಸ್ಟ್ 11ರಂದು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಶ್ರೀಲಂಕಾ ಮೂಲದವರಾಗಿರುವ ಇವರು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಬೇಡಿಕೆಯನ್ನು ಹಾಗೂ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ಚಿತ್ರರಂಗಕ್ಕೆ ಬಂದು ಹಲವಾರು ವರ್ಷಗಳಾಗಿದ್ದರೂ ಕೂಡ ಚಿಕ್ಕ ವಯಸ್ಸಿನ ಹುಡುಗಿಯರಂತೆ ಇಂದಿನ ಯುವ ನಟಿಯರಿಗೆ ಕಾಂಪಿಟೇಶನ್ ನೀಡುವ ರೀತಿಯಲ್ಲಿ ಸೌಂದರ್ಯವತಿಯಾಗಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಅವರ ದಿನಾಚರಣೆಯೂ ವಿಶೇಷವಾಗಿ ವರ್ಕೌಟ್ ಹಾಗೂ ಅವರು ಆಹಾರ ಸೇವಿಸುವ ಕ್ರಮ ನಿಜಕ್ಕೂ ಕೂಡ ಆರೋಗ್ಯಕರವಾಗಿದೆ. ಹೀಗಾಗಿ ಅವರ ವಯಸ್ಸನ್ನು ಒಮ್ಮೆಲೇ ಕೇಳಿದರೆ ಯಾರಿಂದಲೂ ಕೂಡ ಸರಿಯಾಗಿ ಉತ್ತರ ನೀಡಲು ಸಾಧ್ಯವಿಲ್ಲ.

ಆದರೆ ಅವರ ವಯಸ್ಸು ಎಷ್ಟು ಎನ್ನುವ ಕುತೂಹಲವನ್ನು ಹಾಗೂ ಗೊಂದಲವನ್ನು ಹೊಂದಿರುವ ಹಲವಾರು ಅಭಿಮಾನಿಗಳ ಕುತೂಹಲವನ್ನು ಪರಿಹರಿಸಲು ನಾವಿದ್ದೇವೆ ಬನ್ನಿ. ಆಗಸ್ಟ್ 11ರಂದು ಜಾಕ್ವಲಿನ್ ಫರ್ನಾಂಡಿಸ್ 37 ವರ್ಷವನ್ನು ಪೂರೈಸಿ 38ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಕ್ಕಮ್ಮ ಸಾಂಗ್ ವೈರಲ್ ಆದ ಮೇಲಿಂದ ಎಲ್ಲರ ನೆಚ್ಚಿನ ರಕ್ಕಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನೀವು ಕೂಡ ಕಾಮೆಂಟ್ ನಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರಬಹುದಾಗಿದೆ.