ನಯನತಾರ ರವರಿಗೆ ಇದ್ದಕ್ಕಿದ್ದಂತೆ ಶುರುವಾಯಿತು ವಾಂತಿ, ಆಸ್ಪತ್ರೆಗೆ ದಾಖಲಾದ ನಟಿ. ಅಸಲಿ ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ, ಇದೇ ಜೂನ್ 9ರಂದು ಮಹಾಬಲಿಪುರಂನ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ನಯನತಾರಾ ರವರು ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ರವರನ್ನು ಹಲವಾರು ವರ್ಷಗಳ ಡೇಟಿಂಗ್ ನಂತರ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರಿಬ್ಬರ ಮದುವೆ ಗೆ ಶಾರುಖ್ ಖಾನ್ ರಜಿನಿಕಾಂತ್ ಸೇರಿದಂತೆ ತಮಿಳು ಹಾಗೂ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರು ನಿರ್ಮಾಪಕರು ನಟಿಯರು ಸೇರಿದಂತೆ ಹಲವಾರು ಸೆಲಬ್ರೆಟಿಗಳು ಮತ್ತು ರಾಜಕೀಯ ಗಣ್ಯರು ಕೂಡ ಭಾಗಿಯಾಗಿದ್ದಾರೆ. ಮದುವೆ ಆದ ನಂತರ ಇವರಿಬ್ಬರೂ ಕೂಡ ಹಲವಾರು ದೇವಾಲಯಗಳನ್ನು ಸುತ್ತಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಉಚಿತ ಸ್ವಾದಿಷ್ಟವಾದ ಊಟವನ್ನು ವಿತರಿಸಿದ ನಂತರವೇ ಹನಿಮೂನ್ ಗೆ ತೆರಳಿದ್ದರು ಇದು ದೊಡ್ಡ ಮಟ್ಟದಲ್ಲಿ ಪ್ರಶಂಸೆಗೆ ಒಳಗಾಗಿತ್ತು. ಇನ್ನು ಇಬ್ಬರೂ ಕೂಡ ಈಗಾಗಲೇ ಸ್ವದೇಶಕ್ಕೆ ಮರಳಿ ಬಂದಿದ್ದು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಆದರೆ ಇತ್ತೀಚಿಗಷ್ಟೇ ನಯನತಾರ ರವರು ತಮ್ಮ ಪತಿ ವಿಘ್ನೇಶ್ ಅವರ ಕಾರಣದಿಂದಾಗಿ ವಾಂತಿಯನ್ನು ಮಾಡಿಕೊಂಡು ಆಸ್ಪತ್ರೆ ಸೇರಿಕೊಳ್ಳುವಂತಾಗಿದೆ.

ವೀಕೆಂಡ್ ಎನ್ನುವ ಸಂತೋಷದಲ್ಲಿ ವಿಘ್ನೇಶ್ ಅವರು ತಮ್ಮ ಪತ್ನಿ ನಯನತಾರ ರವರಿಗೆ ಸ್ಪೆಷಲ್ ರೆಸಿಪಿಯನ್ನು ಮಾಡಿಕೊಟ್ಟಿದ್ದಾರೆ. ಇದನ್ನು ತಿಂದಿರುವ ನಯನತಾರಾ ಅವರಿಗೆ ವಾಂತಿ ಹಾಗೂ ಸ್ಕಿನ್ ಇನ್ಫೆಕ್ಷನ್ ಆಗಿದೆ. ಈಗಾಗಲೇ ವೈದ್ಯರ ನಿಗಾದಲ್ಲಿ ಇಟ್ಟಿರುವ ನಯನತಾರಾ ರವರಿಗೆ ಅಗತ್ಯ ಚಿಕಿತ್ಸೆಗಳನ್ನು ನೀಡಲಾಗಿದ್ದು ಮನೆಗೆ ಕರೆದುಕೊಂಡು ಬಂದಿದ್ದಾರೆ. ನಯನತಾರಾ ಅವರೇ ಆಗಲಿ ಅಥವಾ ವಿಘ್ನೇಶ್ ಅವರೇ ಆಗಲಿ ಈ ವಿಚಾರದ ಕುರಿತು ಅಧಿಕೃತವಾಗಿ ಎಲ್ಲೂ ಕೂಡ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗಷ್ಟೇ ಮದುವೆಯಾದ ನಂತರ ಪೋಯೆಸ್ ಗಾರ್ಡನ್ ನಲ್ಲಿ ತಮ್ಮ ಪತಿ ವಿಘ್ನೇಶ್ ಅವರ ಹೆಸರಿನಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್ ಒಂದನ್ನು ಖರೀದಿಸುವ ಮೂಲಕ ನಯನತಾರ ಸುದ್ದಿ ಆಗಿದ್ದರು.