ಕೊನೆಗೂ ಮುಗಿಯಿತು ನಿಮ್ಮ ಸಂಕಷ್ಟ: 37 ವರ್ಷಗಳ ನಂತರ ಶುರುವಾಗಿದ್ದ ಯೋಗಕ್ಕೆ ಕೊನೆ: ಮೂರು ರಾಶಿಗಳಿಗೆ ಶುಭ ಸಮಯ. ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹವನ್ನು ಕೆಟ್ಟ ಗ್ರಹ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಮಂಗಳ ಗ್ರಹವನ್ನು ಅಗ್ನಿ ಗ್ರಹ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳು ಕೂಡ ಯಾವುದೋ ಒಂದು ರಾಶಿಯಲ್ಲಿ ಜೊತೆ ಸೇರಿದಾಗ ಅಂಗಾರಕ ಯೋಗ ಪ್ರಾರಂಭವಾಗುತ್ತದೆ ಇದನ್ನು ಅಶುಭ ಯೋಗ ಎಂಬುದಾಗಿ ಕರೆಯಲಾಗುತ್ತದೆ.
ಈಗಾಗಲೇ ಅಂದರೆ ಜೂನ್ 27ರಂದು ಮಂಗಳ ಗ್ರಹ ಮೇಷ ರಾಶಿಗೆ ಕಾಲಿಟ್ಟಿತ್ತು ಹಾಗೂ ಈಗಾಗಲೇ ರಾಹು ಮೇಷ ರಾಶಿಯಲ್ಲಿ ಇದ್ದಾನೆ. ಮುಂದಿನ ವರ್ಷದ ತನಕ ರಾಹು ಮೇಷ ರಾಶಿಯಲ್ಲಿಯೇ ಕುಳಿತುಕೊಳ್ಳಲಿದ್ದಾನೆ ಹಾಗೂ ಆಗಸ್ಟ್ 10ರ ತನಕ ಮಂಗಳ ಮೇಷ ರಾಶಿಯಲ್ಲಿ ಉಳಿದುಕೊಳ್ಳಲಿದ್ದಾನೆ. ಅಂದರೆ ಆಗಸ್ಟ್ ಹತ್ತರವರೆಗೆ ಮೇಷ ರಾಶಿಯಲ್ಲಿ ಅಂಗಾರಕ ಯೋಗ ಇರುತ್ತದೆ. ಈ ಅಂಗಾರಕ ಯೋಗದಿಂದಾಗಿ ಪ್ರಮುಖವಾಗಿ ವೃಷಭ ಸಿಂಹ ಹಾಗೂ ತುಲಾ ರಾಶಿಯವರು ಅತ್ಯಂತ ಕೆಟ್ಟ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯು ಕೂಡ ಮೂಡಿ ಬರಬಹುದು. ರಾಹು ಈಗ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮೇಷ ರಾಶಿಯವರ ಜೀವನದಲ್ಲಿ ಹಠಾತ್ ಘಟನೆಗಳು ನಡೆಯುವ ಸಂಭವ ಹೆಚ್ಚಾಗಿರುತ್ತದೆ.

ರಾಹು ಪಾಪಮಯ ಗ್ರಹ ಆಗಿರುವ ಕಾರಣದಿಂದಾಗಿ ನಷ್ಟಗಳು ಹೆಚ್ಚಾಗುತ್ತವೆ ಲಾಭವು ಕೂಡ ಸಡನ್ನಾಗಿ ಆದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಸಿಂಹ ಮಿಥುನ ಧನು ಹಾಗೂ ವೃಶ್ಚಿಕ ರಾಶಿಯವರು ಅಂಗಾರಕ ಯೋಗದ ಪರಿಣಾಮವನ್ನು ಎದುರಿಸಿದ್ದು ಇವರು ಈ ಪರಿಣಾಮದಿಂದ ಮುಕ್ತಿಯನ್ನು ಹೊಂದಲಿದ್ದಾರೆ. ಮೇಷ ರಾಶಿಯಲ್ಲಿ ಈಗಾಗಲೇ ರೂಪ ಗೊಂಡಿರುವ ಅಂಗಾರಕ ಯೋಗ 37 ವರ್ಷಗಳ ನಂತರ ಕೊನೆಗೊಳ್ಳುತ್ತದೆ. ಆಗಸ್ಟ್ 10ರಂದು ಅಪಾಯಕಾರಿ ಪರಿಣಾಮಗಳು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೂರವಾಗುವ ಸಾಧ್ಯತೆ ಹೆಚ್ಚಾಗಿದೆ.