ದರ್ಶನ್ ವಿರುದ್ಧ ಒಂದು ಕಡೆ ಮೀಡಿಯಾ ಗಳು. ಮತ್ತೊಂದು ಕಡೆ ಕಾಣದ ಕೈ. ಅಪ್ಪು ಅಭಿಮಾನಿಗಳ ತಂದಿಟ್ಟಿದ್ದು ಯಾಕೆ ಗೊತ್ತೇ?? ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ವಿರುದ್ಧ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸಿ’ಡಿದೆದ್ದು ನಿಂತಿದ್ದಾರೆ. ಕ್ರಾಂತಿ ಸಿನಿಮಾದ ವಿಚಾರವಾಗಿ ಇತ್ತೀಚಿಗಷ್ಟೇ ದರ್ಶನ್ ರವರು ಯೌಟ್ಯೂಬ್ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಅಪ್ಪು ಅವರ ಕುರಿತಂತೆ ಮಾತನಾಡಿದ್ದರು.
ಮರಣ ಹೊಂದಿದ ಮೇಲೆ ಅಭಿಮಾನಿಗಳು ಏನು ಎಂದು ಅರ್ಥವಾಗುತ್ತದೆ ಪುನೀತ್ ರಾಜಕುಮಾರ್ ಅವರದ್ದೇ ಸಾಕು. ಆದರೆ ನಾನು ಬದುಕಿದ್ದಾಗಲೇ ನನ್ನ ಅಭಿಮಾನಿಗಳು ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಅಷ್ಟೇ ಸಾಕು ಎಂಬುದಾಗಿ ಅಭಿಮಾನಿಗಳ ಕುರಿತಂತೆ ಪ್ರೀತಿಯ ಮಾತುಗಳನ್ನು ದರ್ಶನ್ ರವರು ಆಡಿದ್ದರು ಆದರೆ ಈ ಮಾತುಗಳನ್ನು ಕೇವಲ ಆ ಭಾಗದಲ್ಲಿ ಮಾತ್ರ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದರ್ಶನ್ ರವರ ವಿರುದ್ಧ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಕ್ರೋಶ ಗೊಳ್ಳುವಂತೆ ಕೆಲವೊಂದು ಕಾಣದ ಕೈಗಳು ಮಾಡಿವೆ ಎಂಬುದಾಗಿ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಡಿಯೋದಲ್ಲಿ ಅವರು ಅಪ್ಪು ಅವರು ಮರಣ ಹೊಂದಿರುವ ಕಾರಣದಿಂದಾಗಿ ಕ್ರಾಂತಿ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಿ ಅವರ ಮನೆಯಿಂದಲೇ ಚಿತ್ರರಂಗಕ್ಕೆ ಬಂದಂತಹವನು ನಾನು ನಮಗೂ ಕೂಡ ಸೂತಕ ಇದ್ದ ಹಾಗೆ ಎಂಬುದಾಗಿ ಅಪ್ಪು ಅವರ ಕುರಿತಂತೆ ಕಾಳಜಿಯ ಮಾತುಗಳನ್ನು ಕೂಡ ಆಡಿದ್ದರೂ ಆದರೆ ಆ ವಿಡಿಯೋ ಮಾತ್ರ ಎಲ್ಲಿಯೂ ಹೊರ ಬಂದಿಲ್ಲ.

ಎಡಿಟ್ ಮಾಡಿರುವ ವಿಡಿಯೋ ಈಗ ಹೊರಬಂದಿದ್ದು ದರ್ಶನ್ ರವರ ಕ್ರಾಂತಿ ಸಿನಿಮಾದ ಬಿಡುಗಡೆಗೆ ನಾವು ಅವಕಾಶ ಮಾಡಿಕೊಡುವುದಿಲ್ಲ ದರ್ಶನ್ ರವರು ಕ್ಷಮೆ ಕೇಳಬೇಕು ಎಂಬುದಾಗಿ ಅಪ್ಪು ಅಭಿಮಾನಿಗಳು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಈಗಾಗಲೇ ಮಾಧ್ಯಮಗಳು ಹಾಗೂ ದರ್ಶನ್ ಅವರ ನಡುವೆ ಶೀತಲ ಸಮರ ನಡೆಯುತ್ತಿದ್ದು ಈಗ ಅಪ್ಪು ಅಭಿಮಾನಿಗಳನ್ನು ಕೂಡ ಕ್ರಾಂತಿ ಸಿನಿಮಾದ ಬಿಡುಗಡೆಗೆ ಮುನ್ನವೇ ದರ್ಶನ್ ರವರ ವಿರುದ್ಧ ಎತ್ತಿ ಕಟ್ಟಿದ್ದಾರೆ ಕೆಲವರು ಎಂಬುದಾಗಿ ದರ್ಶನ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದು ಆ ಕಾಣದ ಕೈಗಳು ಯಾರದ್ದು ಎಂಬುದು ಇದುವರೆಗೂ ಕೂಡ ತಿಳಿದುಬಂದಿಲ್ಲ.