ಮತ್ತೊಂದು ವಿವಾದ ಸೃಷ್ಟಿ ಮಾಡಿಕೊಂಡ ದರ್ಶನ್: ಬೆದರಿಕೆ ಪ್ರಕರಣ ದಾಖಲು. ಮತ್ತೆ ಜೈಲಿಗೆ ಹೋಗುತ್ತಾರಾ?? ಇದೀಗ ಏನಾಗಿದೆ ಗೊತ್ತೇ??

19

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದರೆ ಖಂಡಿತವಾಗಿ ಅವರ ಬಗ್ಗೆ ಒಂದಲ್ಲ ಒಂದು ದಿನ ಒಂದಲ್ಲ ಒಂದು ಸುದ್ದಿ ಓಡಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಅವರ ವಿರುದ್ಧ ಅಘೋಷಿತ ಬಹಿಷ್ಕಾರವನ್ನು ಹಾಕಿದ್ದು ಅವರ ಸಿನಿಮಾನು ಅಂದರೆ ಕ್ರಾಂತಿ ಸಿನಿಮಾವನ್ನು ಅವರ ಅಭಿಮಾನಿಗಳೆ ಪ್ರಚಾರ ಮಾಡುತ್ತಿದ್ದುದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆದರೆ ನೆನ್ನೆ ಮೊನ್ನೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರಿತಂತೆ, ಇನ್ನಷ್ಟು ದೊಡ್ಡ ಮಟ್ಟದ ಆರೋಪದ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದೆ. ಭರತ್ ವಿಷ್ಣುಕಾಂತ್ ಎನ್ನುವ ನಿರ್ಮಾಪಕ ಕೆಂಗೇರಿ ಪೊಲೀಸ್ ಠಾಣೆಗೆ ದರ್ಶನರದ್ದೆ ಎಂದು ಹೇಳಲಾಗುವ ಆಡಿಯೋ ಅನ್ನು ನೀಡಿ ಅವರ ವಿರುದ್ಧ ದೂರನ್ನು ದಾಖಲಿಸಿದ್ದಾನೆ.

ಇದರ ಹಿನ್ನೆಲೆಯನ್ನು ತಿಳಿಯುವುದಾದರೆ 2020ರಲ್ಲಿ ಧ್ರುವ ಎನ್ನುವವನನ್ನು ಇಟ್ಟುಕೊಂಡು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಎನ್ನುವ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಲಾಗಿತ್ತು. ಕೆಲವು ದಿನಗಳ ನಂತರ ದರ್ಶನ್ ರವರು ಬೇರೆ ಕಥೆಯನ್ನು ನೀಡಿ ಅದನ್ನು ಸಿನಿಮಾ ಮಾಡುವಂತೆ ಹೇಳಿದಾಗ ಇಬ್ಬರೂ ಕೂಡ ಒಪ್ಪಿಕೊಂಡು ನಿರ್ದೇಶಕನನ್ನು ಕೂಡ ಬದಲಾಯಿಸಿದ್ದರು. ಅದಾದ ನಂತರ ಲಾಕ್ ಡೌನ್ ಕಾರಣದಿಂದಾಗಿ ಸಿನಿಮಾದ ಚಿತ್ರೀಕರಣ ನಿಂತಿತ್ತು. ಆಗಸ್ಟ್ ತಿಂಗಳ ಸಂದರ್ಭದಲ್ಲಿ ದರ್ಶನ್ ರವರು ಕರೆ ಮಾಡಿ ಭರತ್ ವಿಷ್ಣುಕಾಂತ್ ಅವರಿಗೆ ನೋಡಿಕೊಳ್ಳುತ್ತಾನೆ ಸಿನಿಮಾ ಮಾಡಬೇಕು ಈಗ ಅವನ ಭವಿಷ್ಯ ಹಾಳಾದರೆ ನೀನು ನೋಡುತ್ತೀಯಾ. ಈಗ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದೆ ಅದನ್ನು ಮುಗಿಸಬೇಕು ಇಲ್ಲಾಂದ್ರೆ ನೀನೇ ಇರಲ್ಲ. ನಾನು ಯಾವುದನ್ನೇ ಆದರೂ ಹೇಳಿನೇ ಮಾಡೋದು.

ಎಲ್ಲಾದ್ರೂ ಕಂಡ್ರೆ ಏನಪ್ಪಾ ಅಂತ ಮಾತನಾಡಿಕೊಳ್ಳೋತರ ಇಟ್ಕೋ ಇಲ್ಲ ಅಂದ್ರೆ ನೀನೇ ಇರಲ್ಲ ಕಣ್ಮರೆ ಹಾಕ್ತೀಯ ಎಂಬುದಾಗಿ ಭರತ್ ವಿಷ್ಣುಕಾಂತ್ ಅವರಿಗೆ ದರ್ಶನ್ ರವರದ್ದೆ ಎನ್ನುವ ವಾಯ್ಸ್ ವಾರ್ನಿಂಗ್ ನೀಡಿರುವುದು ಈಗ ಲೀಕ್ ಆಗಿರುವ ಆಡಿಯೋದಲ್ಲಿ ಕೇಳಿ ಬರುತ್ತಿದೆ. ದೂರಿನಲ್ಲಿ ನಿರ್ಮಾಪಕ ಹೇಳಿರುವಂತೆ ಲಾಕ್ ಡೌನ್ ಮುಗಿದ ನಂತರ 10 ದಿನಗಳ ಚಿತ್ರಿಕರಣವನ್ನು ಕೂಡ ನಾವು ಮಾಡಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ದರ್ಶನ ರವರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣವನ್ನು ದರ್ಶನರವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.