ಎಲ್ಲಾ ಸ್ಪರ್ದಿಗಳಿಗೆ ಒಮ್ಮೆ ಸರಿಯಾಗಿ ಡಿಚ್ಚಿ ನೀಡಿದ ಆರ್ಯವರ್ಧನ್: ಎಲ್ಲಾ ಸ್ಪರ್ಧಿಗಳಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಕಿರುತೆರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಎಂಬ ಖ್ಯಾತಿಗೆ ಪಾತ್ರವಾಗಿರುವ ಬಿಗ್ ಬಾಸ್ ಈಗ ಓ ಟಿ ಟಿ ಎನ್ನುವ 24 ಗಂಟೆಗಳ ಹೊಸ ಪ್ರಸಾರದ ರೂಪವನ್ನು ಪಡೆದುಕೊಂಡು ಪ್ರಾರಂಭವಾಗಿದೆ. ಬಿಗ್ ಬಾಸ್ ಎನ್ನುವುದು ಅತ್ಯಂತ ಮನೋರಂಜನಾತ್ಮಕ ಹಾಗೂ ಸೆಲೆಬ್ರೆಟಿಗಳ ನಿಜವಾದ ಜೀವನವನ್ನು ಪಾರದರ್ಶಕವಾಗಿ ಪ್ರೇಕ್ಷಕರ ಎದುರು ಇಡುವಂತಹ ಕಾರ್ಯಕ್ರಮ ಆಗಿದ್ದರೂ ಕೂಡ ಕೆಲವರಿಗೆ ಇಷ್ಟ ಇದ್ದರೆ ಕೆಲವರು ಅದರ ಕುರಿತಂತೆ ಮೂಗು ಮುರಿಯುತ್ತಾರೆ. ಇನ್ನು ಈಗಾಗಲೇ ಬಿಗ್ ಬಾಸ್ ಓ ಟಿ ಟಿ ಸೀಸನ್ 1 ಪ್ರಾರಂಭವಾಗಿದ್ದು ಆರಂಭಿಕ ದಿನಗಳಲ್ಲೇ ಬಿಗ್ ಬಾಸ್ ವಿಶೇಷವಾಗಿ ಹೆಸರಾಗಿರುವ ಜಗಳಗಳು ಪ್ರಾರಂಭವಾಗಿವೆ.
ಮೊದಲಿಗೆ ಸೋನು ಗೌಡ ಹಾಗೂ ಸ್ಪೂರ್ತಿಗೌಡ ಅವರ ನಡುವೆ ಪ್ರಾರಂಭವಾಗಿದ್ದ ಜಗಳ ಈಗ ಸಂಖ್ಯಾಶಾಸ್ತ್ರದ ಪರಿಣಿತ ಆಗಿರುವ ಆರ್ಯವರ್ಧನ್ ಗುರೂಜಿ ಅವರ ತನಕ ಬಂದು ತಲುಪಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದು ಬಿಗ್ ಬಾಸ್ ಮನೆಗೆ ತಲುಪಿರುವ ಲೋಕೇಶ್ ರವರು ತಮ್ಮ ಜೀವನದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಮೊದಲಿಗೆ ಅತ್ಯಂತ ಬಡತನದ ಮನೆಯಲ್ಲಿ ಜನಿಸಿದ ಇವರು ನಂತರ ಮನೆ ಬಿಟ್ಟು ಬಂದು ಭಿಕ್ಷೆ ಬೇಡಿ ಅದರಲ್ಲೂ ಭಿಕ್ಷೆ ಬೇಡುವ ಸಂದರ್ಭದಲ್ಲಿ ಮೂಕನಂತೆ ನಟಿಸುತ್ತಿದ್ದರಂತೆ. ಅದಾದ ನಂತರ ನಿರಾಶ್ರಿತರ ಕೇಂದ್ರಕ್ಕೆ ಸೇರಿದ ನಂತರ ಬದುಕು ಕಂಡು ಎಂಬುದಾಗಿ ಲೋಕೇಶ್ ಈ ಸಂದರ್ಭದಲ್ಲಿ ಹೇಳಿದಾಗ ಆರ್ಯವರ್ಧನ್ ಗುರೂಜಿ ಅವರು ಹೇಳಿರುವ ಮಾತು ಈಗ ಮನೆಯ ಪ್ರತಿಯೊಂದು ಕೋಣೆಗಳಲ್ಲಿ ಪ್ರತಿದ್ವನಿಸುತ್ತಿದೆ.

ಈ ಸಂದರ್ಭದಲ್ಲಿ ಅವರು ಇಂತಹ ಎಮೋಷನಲ್ ಕಥೆಯನ್ನು ಹೇಳಿ ಸಿಂಪತಿ ಗಿಟ್ಟಿಸಿಕೊಳ್ಳಬೇಡಿ ಎಂಬುದಾಗಿ ನೇರವಾಗಿಯೇ ಕುಟುಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಲೋಕೇಶ್ ಹಾಗಾದರೆ ನಮ್ಮ ಜೀವನದ ಕಥೆಯನ್ನು ಹೇಳುವುದು ವೋಟ್ ಪಡೆದುಕೊಳ್ಳುವುದಕ್ಕಾಗಿಯೇ ಎಂಬುದಾಗಿ ಮತ್ತೆ ಮರು ಪ್ರಶ್ನೆ ಹಾಕಿದ್ದಾರೆ. ಆದರೆ ಹಲವಾರು ಸೀಸನ್ ಗಳಿಂದ ನೋಡಿಕೊಂಡು ಬಂದಿರುವ ಪ್ರಕಾರ ಹಲವಾರು ಜನರು ಇಂತಹ ಎಮೋಷನಲ್ ಕಥೆಯನ್ನು ಹೇಳಿ ಜನರ ಮನಸ್ಸಿನಲ್ಲಿ ಕರುಣೆ ಮಾಡುವಂತೆ ಮಾಡುತ್ತಿರುವುದಂತೂ ಸುಳ್ಳಲ್ಲ, ಇದು ಈ ವರ್ಷವೂ ಕೂಡ ಮುಂದುವರಿದುಕೊಂಡು ಬಂದಿದೆ.