ಮತ್ತೊಂದು ಕಣ್ಣೀರ ಕಹಾನಿ: ಮದುವೆಯಾದ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಇದ್ದದ್ದು ಯಾಕೆ ಗೊತ್ತೇ?? ಮಾರಿಮುತ್ತು ಮೊಮ್ಮಗಳು ಹೇಳಿದ್ದೇನು ಗೊತ್ತೇ??

43

ನಮಸ್ಕಾರ ಸ್ನೇಹಿತರೆ ಕನ್ನಡ ಕೇಳುತ್ತದೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಈ ಬಾರಿ ಹೊಸ ರೂಪದಿಂದ ವೂಟ್ ಅಪ್ಲಿಕೇಶನ್ ನಲ್ಲಿ 24 ಗಂಟೆಗಳ ಪ್ರಸಾರದ ಹೊಸ ರೂಪದ ಮೂಲಕ ಮತ್ತೊಮ್ಮೆ ಎಂಟ್ರಿ ನೀಡಿದ್ದು ಹಲವಾರು ಕ್ಷೇತ್ರಗಳ ಖ್ಯಾತನಾಮರು ಈ ಬಾರಿ ಕಂಟೆಸ್ಟೆಂಟ್ಗಳಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಕೆಲವರ ಎಂಟ್ರಿ ಎನ್ನುವುದು ಪ್ರೇಕ್ಷಕರಿಗೆ ಅಸಮಾಧಾನವನ್ನು ಮೂಡಿಸಿದ್ದು ಅವರು ಯಾಕೆ ಆಯ್ಕೆಯಾಗಿದ್ದಾರೆ ಎಂಬುದಾಗಿ ತಮ್ಮ ಕೋಪವನ್ನು ಹಾಗೂ ಅಸಮಾಧಾನವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹೊರ ಹಾಕುತ್ತಿದ್ದಾರೆ.

ಅವರ ವಿಚಾರದ ಕುರಿತಂತೆ ನಾವು ಮಾತನಾಡಲು ಹೊರಟಿಲ್ಲ ಬದಲಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಮತ್ತೊಬ್ಬ ಸ್ಪರ್ಧೆ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಅವರು ಇನ್ಯಾರು ಅಲ್ಲ ಜಯಶ್ರೀ ಆರಾಧ್ಯ. ಜಯಶ್ರೀ ಆರಾಧ್ಯ ಎಂದಾಗ ಯಾರಿಗೂ ಕೂಡ ಅವರು ಯಾರು ಎಂಬುದಾಗಿ ಗೊತ್ತಾಗುವುದು ಕಷ್ಟ ಅದರ ಬದಲಿಗೆ ಮಾರಿಮುತ್ತು ಅವರ ಮೊಮ್ಮಗಳು ಎಂದರೆ ಕೂಡ ಅರ್ಥವಾಗುತ್ತದೆ. ಜಯಶ್ರೀ ಆರಾಧ್ಯ ಅವರು ಪುಟ್ಟರಾಜು ಲವರ್ ಆಫ್ ಶಶಿಕಲಾ ಎನ್ನುವ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಬಿಸಿನೆಸ್ ನಲ್ಲಿ ಹೆಚ್ಚಾಗಿ ಯಶಸ್ಸನ್ನು ಕಂಡಿದ್ದಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಅವರು ಬಿಗ್ ಬಾಸ್ ನಲ್ಲಿ ತಮ್ಮ ನಿಜ ಜೀವನದಲ್ಲಿ ನಡೆದಿರುವಂತಹ ಒಂದು ಘಟನೆಯ ಕುರಿತಂತೆ ಎಲ್ಲರಿಗೂ ಬಿಚ್ಚಿಟ್ಟಿದ್ದಾರೆ. ಹೌದು ಜಯಶ್ರೀ ಆರಾಧ್ಯ ರವರು ಮದುವೆ ಆಗಿರುವ ವ್ಯಕ್ತಿಯ ಜೊತೆಗೆ ಎರಡು ವರ್ಷಗಳ ಕಾಲ ರಿಲೇಶನ್ ಶಿಪ್ ನಲ್ಲಿ ಇದ್ದರಂತೆ.

ಅವರಿಂದಾಗಿ ಜೂಜು ಕಲಿತರಂತೆ. ನಂತರ ಕೆಲ ಸಮಯಗಳ ನಂತರ ಅವರಿಗೆ ಅವರ ಜೀವನದ ಮೇಲೆ ಜಿಗುಪ್ಸೆ ಬಂದು ನಾನು ಜೂಜಾಡುವುದನ್ನು ಬಿಟ್ಟೆ ಅವರಿಗೂ ಜೂಜಾಡುವುದನ್ನು ಬಿಡಿ ಎಂಬುದಾಗಿ ಹೇಳಿದೆ. ಅವರಿಗೆ ಕ್ಯಾನ್ಸರ್ ಬಂದರೂ ಕೂಡ ನಾನು ಅವರನ್ನು ಬಿಡಲಿಲ್ಲ ಯಾಕೆಂದರೆ ಪರಸ್ಪರ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಿದ್ದೆವು ಅದು ಬೇಕಾಗಿತ್ತು ಕೂಡ. ನಾನು ಬಿಸನೆಸ್ ಯಶಸ್ಸು ಆದಮೇಲೆ ಕೂಡ ಅವರನ್ನು ಬಿಟ್ಟಿಲ್ಲ ಯಾಕೆಂದರೆ ಅವರಿಗೆ ಕಷ್ಟದ ಸಂದರ್ಭದಲ್ಲಿ ನನ್ನ ನೆರವು ಅಗತ್ಯವಾಗಿತ್ತು ಎಂಬುದಾಗಿ ಜಯಶ್ರೀ ಆರಾಧ್ಯ ಹೇಳಿದ್ದಾರೆ. ಸಿನಿಮಾ ಹಾಗೂ ಉದ್ಯಮ ಎರಡರಲ್ಲಿ ಕೂಡ ಯಶಸ್ಸನ್ನು ಕಂಡಿರುವ ಜಯಶ್ರೀ ಆರಾಧ್ಯ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.