ಬಿಗ್ ಬಾಸ್ ನಲ್ಲಿ ಶುರುವಾಯಿತು ಪ್ರೇಮ: ಮೊದಲ ವಾರದಲ್ಲಿ ಸದ್ದು ಮಾಡಲು ಆರಂಭಿಸಿದ ಪ್ರೀತಿ: ಜೋಡಿ ನೋಡಿ, ಫಿದಾ ಆಗ್ತೀರಾ.

45

ನಮಸ್ಕಾರ ಸ್ನೇಹಿತರೆ ಪ್ರತಿಬಾರಿಯಂತೆ ಈ ಬಾರಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭದಿಂದಲೇ ಪ್ರೇಕ್ಷಕರಿಗೆ ಮನರಂಜನೆಗಳ ಸುರಿಮಳೆಯೇ ನೀಡುತ್ತಿದೆ. ಈಗ ಬಿಗ್ ಬಾಸ್ ಮನೆ ಮತ್ತೊಂದು ವಿಚಾರಕ್ಕಾಗಿ ಪ್ರಾರಂಭದಿಂದಲೇ ಸದ್ದಾಗುತ್ತಿದೆ. ಪ್ರತಿ ಬಿಗ್ ಬಾಸ್ ಸೀಸನ್ ನಲ್ಲಿ ಕೂಡ ನೀವು ಹಲವಾರು ಜೋಡಿಗಳ ನಡುವೆ ಪ್ರೀತಿ ಪ್ರೇಮ ನಡೆಯುವುದನ್ನು ನೀವು ನೋಡಿರುತ್ತೀರಿ.

ಇದಕ್ಕೆ ಈ ಹಿಂದೆ ಬಿಗ್ ಬಾಸ್ ಅನ್ನು ನೋಡಿದ್ದರೆ ಹಲವಾರು ಜೋಡಿಗಳ ಉದಾಹರಣೆ ನಿಮಗೆ ಸಿಗುತ್ತದೆ. ಇನ್ನು ಈ ಬಾರಿ ಬಿಗ್ ಬಾಸ್ ಪ್ರಾರಂಭ ಆಗಿದ್ದಷ್ಟೇ ಆಗಲೇ ಮತ್ತೊಮ್ಮೆ ಪ್ರೀತಿ ಪ್ರೇಮದ ವಿಚಾರ ಬಿಗ್ ಬಾಸ್ ನಲ್ಲಿ ಈಗ ಪ್ರಾರಂಭವಾಗಿದೆ. ಈಗ ಸದ್ಯಕ್ಕೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಲವ್ ಸ್ಟೋರಿ ಪ್ರಾರಂಭ ಆಗಿರುವುದು ರಾಕೇಶ್ ಅಡಿಗ ಹಾಗೂ ಸ್ಪೂರ್ತಿ ಅವರ ನಡುವೆ ಎಂಬುದಾಗಿ ಪ್ರೇಕ್ಷಕರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ನಟ ರಾಕೇಶ್ ಅಡಿಗ ನಿಮಗೆಲ್ಲರಿಗೂ ಮುಖ ಪರಿಚಯ ಇರುವ ವ್ಯಕ್ತಿ. ಅವರು ಕೂಡ ಬಿಗ್ ಬಾಸ್ ಮನೆಗೆ ಆಗಮಿಸಿದ್ದು ಬಿಗ್ ಬಾಸ್ ಮನೆಯಲ್ಲಿ ಅವರು ಊಟಕ್ಕೆ ಕುಳಿತಿದ್ದ ಸಂದರ್ಭದಲ್ಲಿ ಸ್ಪೂರ್ತಿ ಅವರು ಬಂದು ರಾಕೇಶ್ ಅಡಿಗ ಅವರ ಕೈಯನ್ನು ಹಿಡಿದುಕೊಂಡು ಭವಿಷ್ಯ ಹೇಳುತ್ತೇನೆ ಎಂಬುದಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ರೂಪೇಶ್ ಕೂಡ ಅವರ ಪಕ್ಕದಲ್ಲೇ ಇದ್ದರು.

ಮೊದಲಿಗೆ ಸ್ಪೂರ್ತಿ ರಾಕೇಶ್ ಅವರ ಕೈಯನ್ನು ಹಿಡಿದುಕೊಂಡು ಹಣ ಅರ್ಧಂಬರ್ಧವಾಗಿ ಬರುತ್ತದೆ, ಮದುವೆಯಾದ ಮೇಲೆ ನಿಮ್ಮ ಹೆಂಡತಿಯ ಜೊತೆಗೆ ಚೆನ್ನಾಗಿ ಇರುತ್ತೀರಿ ಎಂಬುದಾಗಿ ಹಾಸ್ಯಸ್ಪದವಾಗಿ ಭವಿಷ್ಯ ನುಡಿದಿರುತ್ತಾರೆ. ಈ ಸಂದರ್ಭದಲ್ಲಿ ರಾಕೇಶ್ ಅಡಿಗ ಕೂಡ ಸ್ಪೂರ್ತಿಯವರ ಕೈ ಹಿಡಿದುಕೊಂಡು ಬಿಗ್ ಬಾಸ್ ಮನೆಯಲ್ಲಿ ನಿಮಗೆ ಒಬ್ಬರ ಮೇಲೆ ಲವ್ ಆಗುತ್ತದೆ ಹಾಗೂ ಅವರು ನಿಮ್ಮ ಕೈಯನ್ನು ಹಿಡಿದುಕೊಂಡಿದ್ದಾರೆ ಎಂಬುದಾಗಿ ಫ್ಲರ್ಟ್ ಮಾಡಲು ಪ್ರಾರಂಭಿಸುತ್ತಾರೆ. ಈ ದೃಶ್ಯವನ್ನು ನೋಡಿದ ನಂತರ ಬಿಗ್ ಬಾಸ್ ಪ್ರೇಕ್ಷಕರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ಮತ್ತೊಂದು ಲವ್ ಕಹಾನಿ ಪ್ರಾರಂಭವಾಗುವ ಸೂಚನೆ ಎದ್ದು ಕಾಣುತ್ತಿದೆ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.