ಬಿಗ್ ಬಾಸ್ ಮನೆಗೆ ಹೋದ ದಿನವೇ ಸೋನು ಸದ್ದು: ಮೊದಲ ದಿನವೇ ಜನರಿಗೆ ಖಡಕ್ ಉತ್ತರ ನೀಡಿದ್ದು ಹೇಗೆ ಗೊತ್ತೇ? ಆದರೆ ಆಮೇಲೆ ಏನಾಗಿದೆ ಗೊತ್ತೇ??

22

ನಮಸ್ಕಾರ ಸ್ನೇಹಿತರೆ ನಿನ್ನೆ ಪ್ರಾರಂಭವಾಗಿರುವ ಬಿಗ್ ಬಾಸ್ ಓಟಿಟಿ ಸೀಸನ್ 1 ಕಾರ್ಯಕ್ರಮದಲ್ಲಿ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ ಗೌಡರವರು ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಅವರ ಆಯ್ಕೆಯ ಕುರಿತಂತೆ ವಾಹಿನಿಯ ವಿರುದ್ಧ ಪ್ರೇಕ್ಷಕರು ಈಗಾಗಲೇ ಸಿ’ಡಿದೆದ್ದಿದ್ದಾರೆ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡರವರ ಬಗ್ಗೆ ಸಾಕಷ್ಟು ವಿವಾದಾತ್ಮಕ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆಯೇ ಸಾಕಷ್ಟು ಸುದ್ದಿಯಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿರುವ ಸೋನು ಗೌಡ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟು ಸಾಕಾಗಿಲ್ಲ ಎಂದು ಈಗ ಸೋನು ಮಾಡಿಕೊಂಡಿರುವ ಮತ್ತೊಂದು ಅವಾಂತರ ಕೂಡ ಪ್ರೇಕ್ಷಕರ ಕೋಪವನ್ನು ಇನ್ನಷ್ಟು ಹೆಚ್ಚಿಸಿದೆ. ಬಿಗ್ ಬಾಸ್ ಮನೆಗೆ ಒಳಗೆ ಹೋದ ನಂತರ ನಟ ರೂಪೇಶ್ ಶೆಟ್ಟಿ ರವರು ನಾನು ಸ್ಮೋಕಿಂಗ್ ಮಾಡುವುದಿಲ್ಲ ಎಂಬುದಾಗಿ ಹೇಳುತ್ತಾರೆ ಆಗ ಸೋನು ಗೌಡ ನೀವು ಸ್ಮೋಕಿಂಗ್ ಮಾಡುದಿಲ್ವಾ ನಾನು ಮಾಡ್ತೇನೆ ಎಂಬುದಾಗಿ ಹೇಳುತ್ತಾಳೆ. ಆಗ ರೂಪೇಶ್ ಶೆಟ್ಟಿ ಆಶ್ಚರ್ಯದಿಂದ ನೀವು ಸ್ಮೋಕಿಂಗ್ ಮಾಡ್ತೀರಾ ಎನ್ನುವುದಾಗಿ ಹೇಳುತ್ತಾರೆ ಅದಕ್ಕೆ ಸೋನು ಗೌಡ ಯಾಕೆ ಮಾಡಬಾರದು ಎನ್ನುವುದಾಗಿ ಮರು ಪ್ರಶ್ನೆ ಹಾಕುತ್ತಾರೆ. ಇದು ಈಗ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕ ವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಸೋನು ಗೌಡ ಅವರ ಈ ಹೇಳಿಕೆಯ ವಿರುದ್ಧ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಅದರಲ್ಲೂ ಸ್ಮೋಕಿಂಗ್ ವಿಚಾರದಲ್ಲಿ ಸೋನು ಗೌಡ ಅವರ ನೇರ ಹೇಳಿಕೆ ಹಲವಾರು ಜನರ ಕೆಂಗಣ್ಣಿಗೆ ಗುರಿಯಾಗಿದ್ದು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮೊದಲ ಅಭ್ಯರ್ಥಿ ನೀವೇ ಆಗಲಿದ್ದೀರಿ ಎಂಬುದಾಗಿ ಕೂಡ ಹೇಳಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೇ ಸೋನು ಗೌಡ ಟ್ರೋಲ್ ಪೇಜ್ ಗಳ ಆಹಾರವಾಗಿ ಕಾಣಿಸಿಕೊಂಡಿರುವುದು ಕೆಲವರಿಗೆ ಮನೋರಂಜನೆ ತಂದು ಕೊಡುತ್ತಿದೆ.