ಮೊದಲ ದಿನವೇ ಆ ಚೆಲುವೆಗೆ ಫಿದಾ ಆದ ಪ್ರೇಕ್ಷಕರು. ಬಿಗ್ ಬಾಸ್ ನಲ್ಲಿ ಹುಡುಗರ ಮನ ಗೆದ್ದ ಚೆಲುವೆ ಯಾರು ಗೊತ್ತೇ?? ಫೇವರಿಟ್ ಅಂದರು ಜನ.

27

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಕನ್ನಡ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ತನ್ನ ವಿಶೇಷ ಓಟಿಟಿಯ ಮೊದಲ ಸೀಸನ್ ಅನ್ನು ನಿನ್ನೆಯಷ್ಟೇ ವೂಟ್ ಅಪ್ಲಿಕೇಶನ್ ನಲ್ಲಿ ಪ್ರಾರಂಭಿಸಿದೆ.vಈಗಾಗಲೇ ಪ್ರೇಕ್ಷಕರಲ್ಲಿ ನಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬ ಕುರಿತಂತೆ ಅವರವರಲ್ಲೇ ಚರ್ಚೆಗಳು ಹಾಗೂ ಪೈಪೋಟಿ ಪ್ರಾರಂಭವಾಗಿರಬಹುದು. ಅದರಲ್ಲೂ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಈ ಒಬ್ಬ ಸ್ಪರ್ಧಿಯ ಕುರಿತಂತೆ ಪ್ರತಿಯೊಬ್ಬ ಕೂಡ ತಲೆಕೆಡಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಆ ಸ್ಪರ್ಧಿ ಬೇರೆ ಯಾರು ಅಲ್ಲ ಐದನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಪುಟ್ಟಗೌರಿ ಮದುವೆ ಖ್ಯಾತಿಯ ಸಾನಿಯಾ ಅಯ್ಯರ್. ಕಾಲಿಟ್ಟ ಮೊದಲ ದಿನದಿಂದಲೇ ಅವರು ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕ ವರ್ಗದಲ್ಲಿ ಸದ್ದು ಮಾಡುತ್ತಿದ್ದಾರೆ. ಎಂಟನೇ ತರಗತಿಯಲ್ಲಿ ಇರಬೇಕಾದರೆ ಪುಟ್ಟಗೌರಿ ಮದುವೆಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಅವರು ಉನ್ನತ ಶಿಕ್ಷಣದಲ್ಲಿ ಮಾಧ್ಯಮ ಹಾಗೂ ಸಂವಹನ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರುವ ಅವರು ಮಲಯಾಳಂ ಆಲ್ಬಮ್ ಸಾಂಗ್ ನಲ್ಲಿ ಕೂಡ ಕಾಣಿಸಿಕೊಂಡು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಗುಲಾಬ್ ಜಾಮೂನ್ ಯುವರ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿರುವ ಅವರು ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕವೂ ಕೂಡ ಮನೆ ಮಾತಾಗಿದ್ದಾರೆ.

ಇನ್ನು ಬಿಗ್ ಬಾಸ್ ಮನೆಗೆ ಬಂದಿಳಿದ ಮೊದಲ ದಿನದಲ್ಲೇ ಫುಲ್ ಆಕ್ಟಿವ್ ಆಗಿರುವ ಸಾನಿಯಾ ಅಯ್ಯರ್, ಎಲ್ಲರ ಜೊತೆಗೆ ಬೆರೆತು ಲವಲವಿಕೆಯಿಂದ ಇದ್ದಾರೆ. ಎಲ್ಲದಕ್ಕಿಂತ ಪ್ರಮುಖವಾಗಿ ನಾನು ಸೈಲೆಂಟ್ ಆಗಿರುತ್ತೇನೆ ಆದರೆ ನನ್ನ ವಿಷಯಕ್ಕೆ ಬಂದರೆ ಕೆಲವೊಂದು ವಿಚಾರಗಳಲ್ಲಿ ತಾಳ್ಮೆ ಕಳೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ಕುರಿತಂತೆ ಪ್ರೇಕ್ಷಕ ವರ್ಗದಲ್ಲಿ ಕುತೂಹಲವನ್ನು ಹೆಚ್ಚಿಸಿಕೊಂಡಿದ್ದಾರೆ. ಮನೆಯ ಪ್ರತಿಯೊಬ್ಬ ಸದಸ್ಯರ ಜೊತೆಗೆ ಕೂಡ ಮೊದಲ ದಿನದಿಂದಲೇ ಬೆರೆತುಕೊಂಡಿರುವ ಸಾನಿಯಾ ಅಯ್ಯರ್ ಈಗಾಗಲೇ ಪ್ರೇಕ್ಷಕ ವರ್ಗದಲ್ಲಿ ಎಲ್ಲಾ ಕಡೆ ಇವರದೇ ಸದ್ದು ಕೇಳುತ್ತಿದೆ. ಒಟ್ಟಾರೆಯಾಗಿ ಮೊದಲ ದಿನದಿಂದಲೇ ಎಲ್ಲಾ ಹುಡುಗರ ಮನ ಗೆದ್ದ ಚೆಲುವೆಯಾಗಿ ಸಾನಿಯಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದು.