ಒಬ್ಬರಲ್ಲ ಇಬ್ಬರಲ್ಲ 9 ಜನ ನಾಮಿನೇಟ್: ಈ ಬಾರಿಯ ಎಲಿಮಿನೇಷನ್ ಲಿಸ್ಟ್ ನಲ್ಲಿ ಇರುವವರು ಯಾರ್ಯಾರು ಗೊತ್ತೇ??

20

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಓಟಿಟಿ ಕನ್ನಡ ಸೀಸನ್ 1 ಈಗಾಗಲೇ ಪ್ರಾರಂಭವಾಗಿದ್ದು ಮೊದಲ ದಿನದಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಸನ್ನಿವೇಶಗಳನ್ನು ಈಗಾಗಲೇ ಪ್ರಸಾರದ ಮೂಲಕ ತೋರಿಸುತ್ತಿದೆ. ಪ್ರತಿಬಾರಿಯಂತೆ ಈ ಬಾರಿ ಕೂಡ ಪ್ರೇಕ್ಷಕರು ಆರಂಭದಲ್ಲಿ ಇವರ ಬದಲು ಬೇರೆಯವರನ್ನು ಹಾಕಿಕೊಳ್ಳಬಹುದಾಗಿತ್ತು ಎಂಬುದಾಗಿ ಸ್ಪರ್ಧಿಗಳ ಆಯ್ಕೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಸೋಶಿಯಲ್ ಮೀಡಿಯಾದಾದ್ಯಂತ ಪ್ರತಿಯೊಬ್ಬರೂ ಕೂಡ ಅಸಮಾಧಾನವನ್ನು ಹೊರ ಹಾಕುತ್ತಿರುವ ಏಕೈಕ ಹೆಸರು ಎಂದರೆ ಅದು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರ ಆಯ್ಕೆ.

ಈಗಾಗಲೇ ಈ ಹಿಂದೆ ವೈಯಕ್ತಿಕ ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಾಗಿದ್ದ ಸೋನು ಶ್ರೀನಿವಾಸ ಗೌಡ ರವರನ್ನು ಯಾಕೆ ಆಯ್ಕೆ ಮಾಡಿದ್ದೀರಿ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದು ಬಿಗ್ ಬಾಸ್ ಮನೆಯಿಂದ ಹೊರಹೋಗುವ ಮೊದಲ ಕಂಟೆಸ್ಟೆಂಟ್ ಅವರೇ ಆಗಲಿದ್ದಾರೆ ಎಂಬುದಾಗಿ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ನಿರೀಕ್ಷೆಯಂತೆ ಈಗಾಗಲೇ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಈಗಾಗಲೇ ಗೌಪ್ಯವಾಗಿ ಮುಗಿದಿದ್ದು ಸ್ಪರ್ಧಿಗಳು ಮನೆಯಿಂದ ಹೊರ ಹೋಗುವ ಹೆಸರುಗಳನ್ನು ತಮ್ಮ ಮನಸ್ಸಿಗೆ ಬಂದ ಹಾಗೆ ಸೂಚಿಸಿದ್ದಾರೆ. ಮೊದಲ ವಾರದಲ್ಲಿ ಸೋನು ಶ್ರೀನಿವಾಸ ಗೌಡ ಅವರು ಎಲಿಮಿನೇಟ್ ಆಗುವುದಕ್ಕೆ ಆಯ್ಕೆಯಾಗಿದ್ದಾರೆ. ಅವರನ್ನು ಸೇರಿಸಿ ಒಟ್ಟಾರೆಯಾಗಿ 9 ಜನ ಸ್ಪರ್ಧಿಗಳು ಮೊದಲ ವಾರದಲ್ಲಿ ಎಲಿಮಿನೇಟ್ ಆಗುವುದಕ್ಕೆ ನಾಮಿನೇಟ್ ಆಗಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರನ್ನು ಹೊರತುಪಡಿಸಿ ಮೊದಲ ವಾರದಲ್ಲಿ ಎಲಿಮಿನೇಟ್ ಆಗಲು ನಾಮಿನೇಟ್ ಆಗಿರುವ ಉಳಿದ ಎಂಟು ಸ್ಪರ್ಧಿಗಳೆಂದರೆ, ಸ್ಪೂರ್ತಿ ಗೌಡ ಆರ್ಯ ವರ್ಧನ್ ಗುರೂಜಿ ಜಯಶ್ರೀ ಆರಾಧ್ಯ ನಂದಿನಿ ಜಶ್ವಂತ್ ಕಿರಣ್ ಯೋಗೇಶ್ವರ್ ಹಾಗೂ ಅಕ್ಷತಾ ಕುಕ್ಕಿ. ಹೀಗಾಗಿ ಮೊದಲ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿರುವ ಆ ನತದೃಷ್ಟ ಸ್ಪರ್ಧಿ ಯಾರು ಎನ್ನುವುದರ ಕುರಿತಂತೆ ಪ್ರೇಕ್ಷಕರ ಚಿತ್ತ ನೆಟ್ಟಿದೆ. ನಿಮ್ಮ ಪ್ರಕಾರ ಮೊದಲ ವಾರದಿಂದ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿರುವ ಸ್ಪರ್ಧಿ ಯಾರು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.