ಮೊನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡ ಕನ್ನಡದ ಇಂದಿನ ಸ್ಯಾಂಡೆಲ್ವುಡ್ ಕ್ವೀನ್ ಆಶಿಕಾ ರವರ ವಯಸ್ಸು ಎಷ್ಟು ಗೊತ್ತೇ?? ತಿಳಿದರೆ ನೀವು ನಂಬುವುದಿಲ್ಲ. ಯಾಕೆ ಗೊತ್ತೇ?

29

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಮತ್ತು ತಮ್ಮ ಸೌಂದರ್ಯದ ಮೂಲಕ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿಯಾಗಿರುವ ಕನ್ನಡತಿ ಎಂದರೆ ಅದು ಆಶಿಕಾ ರಂಗನಾಥ್ ಎಂದು ಹೇಳಬಹುದಾಗಿದೆ. 2016ರಲ್ಲಿ ಕ್ರೇಜಿಬಾಯ್ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಆಶಿಕಾ ರಂಗನಾಥ್ ಮತ್ತೆ ಹಿಂದಿರುಗಿ ತಮ್ಮ ಸಿನಿಮಾ ಜೀವನದಲ್ಲಿ ನೋಡಿದ್ದೇ ಇಲ್ಲ.

ಅದರಲ್ಲೂ ಯಾವ ದೊಡ್ಡ ಮಟ್ಟದ ಸ್ಟಾರ್ ನಟನ ಜೊತೆಗೆ ನಾಯಕಿಯಾಗಿ ನಟಿಸದಿದ್ದರೂ ಕೂಡ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ನಟಿಯರಲ್ಲಿ ಅಗ್ರಗಣ್ಯರಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ದ್ವಿತ್ವ ಸಿನಿಮಾದಲ್ಲಿ ಕೂಡ ಅವರಿಗೆ ನಟಿಸುವ ಆಯ್ಕೆ ಒದಗಿ ಬಂದಿತ್ತು ಎಂಬುದನ್ನು ಕೂಡ ಇತ್ತೀಚಿಗಷ್ಟೇ ಅವರು ಹೇಳಿಕೊಂಡಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾದಲ್ಲಿ ಕೂಡ ಐಟಂ ಡ್ಯಾನ್ಸಿನಲ್ಲಿ ಸ್ಟೆಪ್ ಹಾಕಿ ಪಟಾಕಿ ಪೋರಿ ಎನ್ನುವುದಾಗಿ ಖ್ಯಾತಿಯನ್ನು ಪಡೆದುಕೊಂಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಚಿತ್ರರಂಗಕ್ಕೆ ಕಾಲಿಟ್ಟು ಆರೇಳು ವರ್ಷಗಳಲ್ಲಿಯೇ ಇಂದಿನ ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದಾರೆ ಎಂದರೆ ಕೂಡ ತಪ್ಪಾಗಲಾರದು. ಇಷ್ಟೊಂದು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿರುವ ಆಶಿಕಾ ರಂಗನಾಥ್ ರವರು ನಿನ್ನೆಯಷ್ಟೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಯಪ್ಪಾ ಮಿಲ್ಕಿ ಬ್ಯೂಟಿ ಆಗಿರುವ ಆಶಿಕಾ ರಂಗನಾಥ್ ರವರು ಎಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ನಮ್ಮ ಕಣ್ಣ ಮುಂದೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಅವರ ವಯಸ್ಸು ಎಷ್ಟು ಇರಬಹುದು ಎನ್ನುವುದಾಗಿ ನಿಮಗೆ ಗೊಂದಲವಿರಬಹುದು, ಬನ್ನಿ ನಾವು ನಿಮ್ಮ ಗೊಂದಲವನ್ನು ಪರಿಹರಿಸುತ್ತೇವೆ. ಹೌದು ಗೆಳೆಯರೇ, ನಿನ್ನೆಯಷ್ಟೇ ಆಶಿಕಾ ರಂಗನಾಥ್ ರವರು ತಮ್ಮ 26ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ತಡ ಆಗಿದ್ರೂ ಪರವಾಗಿಲ್ಲ ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಆಶಿಕಾ ರಂಗನಾಥ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಬಹುದಾಗಿದೆ.