ರೋಹಿತ್ vs ಕೊಹ್ಲಿ ರವರ ನಡುವೆ ಸೃಷ್ಟಿಯಾಗುತ್ತಿರುವ ಚರ್ಚೆ ಖುದ್ದು ಬಿಸಿಸಿಐ ಅಧಿಕಾರ ಕೊಟ್ಟ ಸ್ಪಷ್ಟನೆ ಏನು ಗೊತ್ತೇ??

12

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಹಲವಾರು ಬದಲಾವಣೆಗಳೊಂದಿಗೆ ಮುಂದಕ್ಕೆ ಸಾಗುತ್ತಿದೆ. ಕಳೆದ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ ಎಂಬ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಅವರನ್ನು 3 ಫಾರ್ಮ್ಯಾಟ್ ಗಳಿಂದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ವಿರಾಟ್ ಕೊಹ್ಲಿ ರವರ ನಂತರ ನಾಯಕನಾಗಿ ಭಾರತ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮ ರವರು ಆಯ್ಕೆಯಾಗುತ್ತಾರೆ.

ಈಗಾಗಲೇ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಹಲವಾರು ಸರಣಿಗಳನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದುಕೊಂಡಿದೆ ಈಗ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿಯೂ ಕೂಡ ಭಾರತೀಯ ಕ್ರಿಕೆಟ್ ತಂಡ ಗೆಲುವಿನ ಸರಮಾಲೆಯನ್ನೇ ಆರಂಭಿಸಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಹಲವಾರು ಕಡೆಗಳಲ್ಲಿ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳ ನಡುವೆ ನಮ್ಮ ನೆಚ್ಚಿನ ಆಟಗಾರ ಮೇಲು ನಿಮ್ಮ ನೆಚ್ಚಿನ ಆಟಗಾರ ಕೀಳು ಎಂಬ ವಾಗ್ವಾದಗಳು ಆರಂಭವಾಗಿವೆ. ಕ್ರಿಕೆಟ್ ಲೋಕಕ್ಕೆ ಇದೇನು ಹೊಸತಲ್ಲ ಎಂಬುದು ನಿಮಗೆ ಹೆಚ್ಚಾಗಿ ಹೇಳಬೇಕಾಗಿ. ಇದರ ಕುರಿತಂತೆ ಬಿಸಿಸಿಐ ಕೋಶಾಧಿಕಾರಿ ಅರುಣ್ ಧುಮಾಲ್ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಇಬ್ಬರು ಕೂಡ ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ಅಭಿಮಾನಿಗಳು ಇವರನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿರುವ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಚರ್ಚೆಗಳು ನಡೆಯುತ್ತವೆ, ಆದರೆ ಇಬ್ಬರೂ ಕೂಡ ತಂಡಕ್ಕಾಗಿ ತಮ್ಮ ಪ್ರಮುಖ ಯೋಗ ದಾನವನ್ನು ನೀಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಅದರಲ್ಲೂ ಇಬ್ಬರೂ ಕೂಡ ಜೊತೆಯಾಗಿ ಹಲವಾರು ಇನ್ನಿಂಗ್ಸ್ ಗಳನ್ನು ಆಡಿದ್ದು ಅದರಲ್ಲಿ ಹೆಚ್ಚಿನ ಇನ್ನಿಂಗ್ಸ್ ಗಳಲ್ಲಿ ಜೊತೆಯಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಗೆಲ್ಲಿಸಿ ಕೊಟ್ಟಿದ್ದಾರೆ ಎಂಬುದನ್ನು ಕೂಡ ಇಲ್ಲಿ ನೆನಪಿಸಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆ ಚಿಂತೆ ಇದೆ ನಿಜ ಆದರೆ ಅವರು ಮರಳಿ ಫಾರ್ಮ್ ಗೆ ಬರುತ್ತಾರೆ ಅವರೊಬ್ಬ ಲೆಜೆಂಡರಿ ಆಟಗಾರ ಎಂಬುದಾಗಿ ಹೇಳಿದ್ದಾರೆ. ಇನ್ನು ಅವರ ಆಯ್ಕೆಯನ್ನುವುದು ಆಯ್ಕೆಗಾರರಿಗೆ ಬಿಟ್ಟಿದ್ದು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿದ್ದಾರೆ.