ಅಪ್ಪು ಹೆಸರಲ್ಲಿ ಮಹಾನ್ ಕಾರ್ಯ ಮಾಡಲು ಮುಂದಾದ ಪ್ರಕಾಶ್ ರಾಜ್: ಭೇಷ್ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಯಾವ ರೀತಿ ಸಮಾಜಸೇವೆ ಮಾಡಿದ್ದಾರೆ ಎಂಬುದನ್ನು ಎಲ್ಲೂ ಕೂಡ ಹೇಳಿಕೊಂಡವರಲ್ಲ. ತಾನು ಮಾಡಿರುವ ಸಾಮಾಜಿಕ ಸೇವೆಯನ್ನು ಪ್ರಚಾರದ ಗೀಳಿಗಾಗಿ ಬಿಟ್ಟುಕೊಟ್ಟವರಲ್ಲ. ಎಲ್ಲರಿಗೂ ಕೂಡ ಅವರು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಸೇವೆಯನ್ನು ಮಾಡಿದ್ದಾರೆ ಎಂಬುದು ತಿಳಿದಿದ್ದೆ ಅವರ ಮರಣದ ನಂತರ.
ಇನ್ನು ಪವರ್ ಸ್ಟಾರ್ ಬದುಕಿದ್ದರೆ ಖಂಡಿತವಾಗಿ ಇಂದಿಗೂ ಕೂಡ ಯಾರಿಗೂ ತಿಳಿಯದಂತೆ ಅಗತ್ಯ ಜನ ಸೇವೆಗಳನ್ನು ಖಂಡಿತ ಸಮಾಜಕ್ಕಾಗಿ ಮಾಡುತ್ತಿದ್ದರು ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಇಂದು ಅವರ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದ ಆಗಿರುವ ಪ್ರಕಾಶ್ ರಾಜ್ ರವರು ಮೈಸೂರಿನ ಮಿಷನ್ ಆಸ್ಪತ್ರೆಗೆ ಎಕ್ಸ್ಪ್ರೆಸ್ ಎನ್ನುವ ಆಂಬುಲೆನ್ಸ್ ಅನ್ನು ಅಪ್ಪು ಅವರ ಹೆಸರಿನಲ್ಲಿ ನೀಡಿದ್ದಾರೆ. ಈ ಮೂಲಕ ಅಪ್ಪು ಅವರು ಮಾಡಬೇಕೆಂದಿದ್ದ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಹೋಗುವ ಸಾಂಕೇತಿಕ ಸಂದೇಶವನ್ನು ಈ ಮೂಲಕ ಪ್ರಕಾಶ್ ರಾಜ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಪ್ರಕಾಶ್ ರಾಜ್ ರವರು ತಮ್ಮ ಟ್ರಸ್ಟ್ ಮೂಲಕ ಬಡವರಿಗೆ ಅಗತ್ಯ ಸಹಾಯಗಳನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಕೂಡ ಅಪ್ಪು ಅವರು ಧನ ಸಹಾಯ ಮಾಡಿ ಇನ್ನು ಏನಾದರೂ ಸಹಾಯ ಬೇಕಿದ್ದರೆ ಕೇಳಿ ಎಂಬುದಾಗಿ ಪ್ರಕಾಶ್ ರಾಜ್ ರವರ ಕಾರ್ಯವನ್ನು ಬೆಂಬಲಿಸಿದ್ದರಂತೆ.

ಇನ್ನು ಈ ಕಾರ್ಯಕ್ರಮದಲ್ಲಿ ಅಪ್ಪು ಅವರ ನೆಚ್ಚಿನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಉಪಸ್ಥಿತರಿದ್ದರು. ಇನ್ನು ಸದ್ಯಕ್ಕೆ ಮೈಸೂರು ಜಿಲ್ಲೆಗೆ ಆಂಬುಲೆನ್ಸ್ ಅನ್ನು ನೀಡಿದ್ದೇವೆ ಮುಂದಿನ ದಿನಗಳಲ್ಲಿ ಕರ್ನಾಟಕ 31 ಜಿಲ್ಲೆಗೂ ಕೂಡ ಇಂತಹ ಉಚಿತ ಆಂಬುಲೆನ್ಸ್ ಅನ್ನು ವಿತರಣೆ ಮಾಡಲಿದ್ದೇವೆ ಎಂಬುದಾಗಿ ಪ್ರಕಾಶ್ ರಾಜ್ ರವರು ಹೇಳಿಕೆ ನೀಡಿದ್ದಾರೆ. ಇಂತಹ ಒಳ್ಳೆಯ ಕೆಲಸಗಳ ಮೂಲಕ ಆ ಮಹಾನುಭಾವನನ್ನು ನೆನೆಯುತ್ತಿರುವುದು ನಿಜಕ್ಕೂ ಕೂಡ ಅರ್ಥಪೂರ್ಣವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.