ಪ್ರಭಾಸ್ ಧರಿಸಿಕೊಂಡು ಬಂದಿದ್ದ ಈ ಟಿ ಶರ್ಟ್ ಬೆಲೆ ಎಷ್ಟು ಗೊತ್ತೇ?? ನಿಜಕ್ಕೂ ಗೊತ್ತಾದ್ರೆ ದಂಗಾಗ್ತೀರಾ. ಅಂತದ್ದು ಏನಿರುತ್ತೆ ಅಂತ??

14

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತದ ಚಿತ್ರರಂಗದ ಮೊದಲ ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕಾಣಿಸಿಕೊಂಡ ನಟ ಎಂದರೆ ಅದು ಯಾವುದೇ ಅನುಮಾನವಿಲ್ಲದೆ ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಪ್ರಭಾಸ್ ಎಂದು ಹೇಳಬಹುದಾಗಿದೆ. ಬಾಹುಬಲಿ ಸರಣಿ ಚಿತ್ರಗಳ ನಂತರ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಪ್ರತಿಯೊಂದು ಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ ಎಂದು ತಪ್ಪಾಗಲಾರದು. ಕೇವಲ ಭಾರತ ದೇಶವೇ ಯಾಕೆ ಜಪಾನ್ ಚೀನಾ ದೇಶಗಳಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಪ್ರಭಾಸ್ ರವರು ಹೊಂದಿದ್ದಾರೆ.

ಎಲ್ಲದಕ್ಕಿಂತ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಪ್ರಭಾಸ್ ರವರು ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡುವಂತ ಸಿನಿಮಾಗಳನ್ನು ನೀಡಿಲ್ಲ ಎಂದು ಹೇಳಬಹುದು. ಸಾಹೋ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದರೂ ಕೂಡ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಇನ್ನು ರಾಧೇಶ್ಯಾಮ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೂಡ ಸದ್ದು ಮಾಡಲಿಲ್ಲ ಜನರ ಮನಸ್ಸನ್ನು ಗೆಲ್ಲಲು ಕೂಡ ವಿಫಲವಾಯಿತು. ಒಟ್ಟಾರಿಯಾಗಿ ಬಾಹುಬಲಿ ಸರಣಿ ವಿಜಯದ ನಂತರ ಪ್ರಭಾಸ್ ರವರು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಸದ್ಯಕ್ಕೆ ಹಲವಾರು ದಿನಗಳ ನಂತರ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಹೌದು ಗೆಳೆಯರೆ ದುಲ್ಕರ್ ಸಲ್ಮಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸೀತಾರಾಮಂ ಸಿನಿಮಾದ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರಭಾಸ್ ಅವರು ತಮ್ಮ ಹೊಸ ಲುಕ್ ನಿಂದ ಅಭಿಮಾನಿಗಳ ಮನಸೂರೆಗೊಳುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಅವರು ಧರಿಸಿರುವ ಟಿ-ಶರ್ಟ್ ಈಗ ಎಲ್ಲರ ಗಮನವನ್ನು ಸೆಳೆದಿದ್ದು ಇದರ ಬೆಲೆ ಎಷ್ಟು ಎಂಬುದಾಗಿ ಈಗಾಗಲೇ ಚರ್ಚೆ ನಡೆಯುತ್ತಿದೆ. ಈ ಗೊಂದಲವನ್ನು ಕೂಡ ಈಗಾಗಲೇ ನಾವು ಕ್ರ್ಯಾಕ್ ಮಾಡಿದ್ದೇವೆ. ಹೌದು ಗೆಳೆಯರೇ ಸಿನಿಮಾ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಭಾಸ್ ರವರು ಧರಿಸಿರುವ ಟಿ ಶರ್ಟ್ ಡಾಲ್ಸ್ ಗಬ್ಬಾನ ಬ್ರಾಂಡ್ ನದ್ದು ಎಂಬುದಾಗಿ ತಿಳಿದು ಬಂದಿದ್ದು ಈ ಟಿ ಶರ್ಟ್ ಬೆಲೆ ಬರೋಬ್ಬರಿ 20,000 ರೂಪಾಯಿ. ಸದ್ಯಕ್ಕೆ ಆದಿಪುರುಷ್ ಚಿತ್ರಿಕರಣವನ್ನು ಮುಗಿಸಿರುವ ಪ್ರಭಾಸ್ ರವರು ಸಲಾರ್ ಚಿತ್ರದ ಚಿತ್ರೀಕರಣವನ್ನು ಕೂಡ ಬಹುತೇಕ ಮುಗಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ.