ತನ್ನ ಅಂದ ಚೆಂದ ಹೆಚ್ಚಿಸಿಕೊಳ್ಳಲು ದಿನಕ್ಕೊಂದು ನಿರ್ಧಾರ: ಮತ್ತೊಂದು ಮಹತ್ವದ ನಿರ್ಧಾರಕ್ಕೆ ಕೈ ಹಾಕಿದ ಕನ್ನಡತಿ ಕೃತಿ ಶೆಟ್ಟಿ. ಏನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕಲಾವಿದರೆಲ್ಲ ಕನ್ನಡ ಮೂಲದವರು ಎಂದರು ಕೂಡ ತಪ್ಪಾಗಲಾರದು ಯಾಕೆಂದರೆ ರಶ್ಮಿಕಾ ಮಂದಣ್ಣ ಅವರ ನಂತರ ಈಗ ಕುಡ್ಲ ಮೂಲದ ಮತ್ತೊಬ್ಬ ಚೆಲುವೆ ಆಗಿರುವ ಕೃತಿ ಶೆಟ್ಟಿ ಕೂಡ ಇತ್ತೀಚಿನ ದಿನಗಳಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರರಂಗದಲ್ಲಿ ಬೆಳೆಯುವ ಸೂಚನೆಯನ್ನು ನೀಡುತ್ತಿದ್ದಾರೆ.

ಉಪ್ಪೇನ ಸಿನಿಮಾದ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ಮಂಗಳೂರು ಮೂಲದ ಕೃತಿ ಶೆಟ್ಟಿ ಅವರು ಈಗಾಗಲೇ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವುದರ ಮುಖೇನ ಯಾರಿಗೇನು ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈಗಾಗಲೇ ಉಪ್ಪೇನ ಶಾಮ ಸಿಂಗರಾಯ್ ವಾರಿಯರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಕೃತಿ ಶೆಟ್ಟಿ ಸತತವಾಗಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇನ್ನು ಅವರ ಕೈಯಲ್ಲಿ ಹಲವಾರು ಸ್ಟಾರ್ ನಟರ ಸಿನಿಮಾಗಳು ಕೂಡ ಈಗಾಗಲೇ ಇವೆ. ಈ ಮಧ್ಯೆಯು ಕೂಡ, ಕೃತಿ ಶೆಟ್ಟಿ ಅವರ ಸೌಂದರ್ಯದ ಕುರಿತಂತೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಲವಾರು ಕಡೆಗಳಲ್ಲಿ ಕೆಲವರು ವ್ಯತರಿಕ್ತ ಕಾಮೆಂಟ್ಗಳನ್ನು ಪಾಸ್ ಮಾಡುತ್ತಿದ್ದಾರೆ.

ಇದಕ್ಕೆ ಅವರ ಅಗಲವಾದ ತುಟಿಗೆ ಕಾರಣ ಎಂಬುದಾಗಿ ಅವರ ಭಾವನೆ ಹೀಗಾಗಿ ಅವರ ಒಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಫ್ರೆಂಡ್ಸ್ ನೀವು ಇದನ್ನು ನಂಬಲೇಬೇಕು, ಯಾಕೆಂದರೆ ನಮಗೆ ತಿಳಿದಿರುವ ಸುದ್ದಿಯ ಪ್ರಕಾರ ಕೃತಿ ಶೆಟ್ಟಿ ರವರು ಅತಿ ಶೀಘ್ರದಲ್ಲೇ ತುಟಿಯ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ಡಾಕ್ಟರ್ ಅನ್ನು ಕನ್ಸಲ್ಟ್ ಮಾಡಿರುವ ಕೃತಿ ಶೆಟ್ಟಿ ಈಗಾಗಲೇ ಪ್ಲಾಸ್ಟಿಕ್ ಸರ್ಜರಿಗೆ ದಿನಾಂಕವನ್ನು ಕೂಡ ನಿಗದಿ ಮಾಡಿಕೊಂಡಿದ್ದಾರೆ ಎಂಬುದಾಗಿ ಸುದ್ದಿ ಇದೆ. ಈ ಮೂಲಕ ತಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಲು ಹೋಗುತ್ತಿರುವ ಕೃತಿ ಶೆಟ್ಟಿ ಅವರ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.