ಕೊಹ್ಲಿ,ಸೂರ್ಯ,ಪಂತ್, ಹಾರ್ದಿಕ ಇವರ್ಯಾರು ಅಲ್ಲ, ಭಾರತ ತಂಡ ಏಷ್ಯಾ ಕಪ್ ಗೆಲ್ಲಬೇಕು ಆತನೊಬ್ಬ ಇರಲೇ ಬೇಕಂತೆ. ಯಾರು ಗೊತ್ತೇ??

44

ನಮಸ್ಕಾರ ಸ್ನೇಹಿತರೆ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ 2 ಹಾಗೂ 1 ಪಂದ್ಯಗಳ ಗೆಲುವಿನ ಅಂತರವನ್ನು ಕಾಯ್ದುಕೊಂಡಿದ್ದು ಕೊನೆಯ ಉಳಿದ ಎರಡು ಪಂದ್ಯಗಳನ್ನು ಕೂಡ ಗೆಲ್ಲುವ ಹವಣಿಕೆಯಲ್ಲಿದೆ.

ಅದರಲ್ಲೂ ವಿಶೇಷವಾಗಿ ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ದೃಷ್ಟಿಯಲ್ಲಿ ಈಗ ನಡೆಯುತ್ತಿರುವ ವಿದೇಶಿ ಸರಣಿಗಳು ನಿಜಕ್ಕೂ ಕೂಡ ಮಹತ್ವದ ಪಾತ್ರವನ್ನು ವಹಿಸಲಿವೆ ಎಂಬುದು ನಿಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇನ್ನು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿರುವ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ರಿಷಬ್ ಪಂತ್ ಸೂರ್ಯ ಕುಮಾರ್ ಯಾದವ್ ಮುಂಬರುವ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ತಂಡಕ್ಕೆ ಪ್ರಮುಖ ಆಟಗಾರರಾಗಿ ಆಯ್ಕೆ ಆಗಬೇಕು ಎಂಬುದಾಗಿ ನೀವು ಭಾವಿಸಿರಬಹುದು ಆದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಗಿರುವ ದಾನಿಶ್ ಕನೇರಿಯಾ ಹೇಳುವಂತೆ ಈ ಒಬ್ಬ ಆಟಗಾರ ಖಂಡಿತವಾಗಿ ತಂಡದಲ್ಲಿ ಇರಲೇಬೇಕು ಎಂಬುದಾಗಿ ಹೇಳಿದ್ದಾರೆ.

ಆ ಆಟಗಾರ ಇನ್ಯಾರು ಅಲ್ಲ ತಂಡದ ನಾಯಕ ಆಗಿರುವ ರೋಹಿತ್ ಶರ್ಮಾ. ದಾನಿಶ್ ಕನೇರಿಯಾ ಹೇಳುವಂತೆ ಈಗಾಗಲೇ ಅವರು ಇಂಜುರಿಗೆ ತುತ್ತಾಗಿದ್ದಾರೆ ಹೀಗಾಗಿ, ಅವರು ಉಳಿದ ಎರಡು ಪಂದ್ಯಗಳಿಂದ ಹೊರಗುಳಿದು ವಿಶ್ರಾಂತಿಯನ್ನು ಪಡೆದುಕೊಂಡರು ಪರವಾಗಿಲ್ಲಾ ಆದರೆ ಏಷ್ಯಾ ಕಪ್ ಹಾಗೂ ವಿಶ್ವಕಪ್ ಗಳಂತಹ ಟೂರ್ನಮೆಂಟ್ ಗೆ ಅವರು ಭಾರತೀಯ ಕ್ರಿಕೆಟ್ ತಂಡ ಬೇಕೇ ಬೇಕು ಎಂಬುದಾಗಿ ಹೇಳಿದ್ದಾರೆ. ಅವರು ವಿಶ್ರಾಂತಿ ಪಡೆಯಲು ಬಯಸಿದರೆ ಅವರ ಬದಲಿಗೆ ಸಂಜು ಸ್ಯಾಮ್ಸಂಗ್ ಅಥವಾ ಬೇರೆ ಆಟಗಾರರನ್ನು ನಾಯಕನನ್ನಾಗಿ ನೇಮಿಸಿ ಸರಣಿಯನ್ನು ಮುಗಿಸಿ ವಿಶ್ವಕಪ್ ಹಾಗೂ ಏಷ್ಯಾ ಕಪ್ ಗೆ ರೋಹಿತ್ ಶರ್ಮಾ ರವರು ಸಿದ್ಧವಾಗಬಹುದು ಎಂಬುದಾಗಿ ದಾನಿಶ್ ಕನೇರಿಯಾ ಹೇಳಿದ್ದಾರೆ.