ಏನು ಇಲ್ಲ ನಮ್ಮಿಬ್ಬರ ನಡುವೆ ಏನು ಇಲ್ಲ ಎನ್ನುತ್ತಿದ್ದ ರಶ್ಮಿಕಾ-ವಿಜಯ್ ನಡುವೆ ಸಂಬಂಧ ಮುರಿದು ಬಿದ್ದದ್ದು ಯಾವಾಗ ಅಂತೇ ಗೊತ್ತೆ??
ನಮಸ್ಕಾರ ಸ್ನೇಹಿತರೇ ಕೊಡಗಿನ ಕುವರಿಯಾಗಿರುವ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ಆಕ್ಟರ್ ಆಗಿರುವ ವಿಜಯ್ ದೇವರುಕೊಂಡ ಇಬ್ಬರು ಕೂಡ ಡಿಯರ್ ಕಾಮ್ರೆಡ್ ಹಾಗೂ ಗೀತ ಗೋವಿಂದಂ ಸಿನಿಮಾದ ನಂತರ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈಗಲೂ ಕೂಡ ಇವರಿಬ್ಬರು ಮುಂಬೈ ರೆಸ್ಟೋರೆಂಟ್ ಗಳಲ್ಲಿ ಹಾಗೂ ಹಲವಾರು ಕಡೆಗಳಲ್ಲಿ ಕ್ಯಾಮರ ಕಣ್ಣಿಗೆ ಕಾಣಿಸಿಕೊಂಡಾಗಲೆಲ್ಲ ಇಬ್ಬರ ನಡುವೆ ಏನೋ ಇದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರು ಕೂಡ ಹಲವಾರು ಸಮಯಗಳಿಂದ ನಾವಿಬ್ಬರೂ ಕೇವಲ ಬೆಸ್ಟ್ ಫ್ರೆಂಡ್ಸ್ ಎಂಬುದನ್ನು ಹೇಳಿಕೊಂಡು ಬರುತ್ತಲೇ ಇದ್ದಾರೆ. ಆದರೆ ಇವರಿಬ್ಬರ ಅಭಿಮಾನಿಗಳು ಸೇರಿದಂತೆ ಯಾರು ಕೂಡ ಈ ಮಾತನ್ನು ನಂಬಲು ಸಿದ್ದರಿಲ್ಲ. ಇವರಿಬ್ಬರ ಜೋಡಿ ಸಿನಿಮಾ ಪರದೆಗಳ ಮೇಲೆ ಒಳ್ಳೆಯ ಕಾಂಬಿನೇಷನ್ ರೂಪದಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಎಲ್ಲರೂ ಕೂಡ ಇವರಿಬ್ಬರೂ ಖಂಡಿತವಾಗಿ ಮುಂದಿನ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದು ನಿರ್ಧಾರಕ್ಕೆ ಕೂಡ ಬಂದಿದ್ದಾರೆ.

ಆದರೆ ಈಗ ಪ್ರತಿಷ್ಠಿತ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿದು ಬಂದಿರುವ ವಿಚಾರದ ಪ್ರಕಾರ ಸುದ್ದಿ ಬೇರೇನೇ ಇದೆ. ಹೌದು ಗೆಳೆಯರೇ ಈ ಸುದ್ದಿಯ ಪ್ರಕಾರ ಇವರಿಬ್ಬರ ನಡುವೆ ಡೇಟಿಂಗ್ ನಡೆದಿದ್ದಂತು ನಿಜವಂತೆ. ಆದರೆ ಈಗ ಇವರಿಬ್ಬರೂ ಬೇರೆ ಆಗಿ ಎರಡು ವರ್ಷಗಳು ಕಳೆದಿವೆಯಂತೆ ಹಾಗೂ ಸದ್ಯಕ್ಕೆ ಇವರಿಬ್ಬರೂ ಪರಸ್ಪರ ಒಳ್ಳೆಯದನ್ನು ಬಯಸುವ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಸುದ್ದಿ ಬಗ್ಗೆ ನಿಮಗೆ ಮೂಡುತ್ತಿರುವ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.