ಏನು ಬೇಕಾದರೂ ಮಾಡಲು ಸಿದ್ದ: ಗಟ್ಟಿ ನಿರ್ಧಾರ ತೆಗೆದುಕೊಂಡು ಎಲ್ಲವನ್ನು ಬ್ರೇಕ್ ಮಾಡಲು ಮುಂದಾದ ದರ್ಶನ್: ಏನು ಗೊತ್ತೇ??

1,583

ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ನಟನೆಯ ಕ್ರಾಂತಿ ಸಿನಿಮಾ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕರ್ನಾಟಕ ರಾಜ್ಯದಲ್ಲಿ ಹವಾ ಸೃಷ್ಟಿಸುತ್ತಿದೆ. ಕ್ರಾಂತಿ ಸಿನಿಮಾವನ್ನು ಸಿನಿಮಾ ತಂಡಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ರಾಜ್ಯಾದ್ಯಂತ ಮೂಲೆ ಮೂಲೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಸಿನಿಮಾದಲ್ಲಿ ವಿ ಹರಿಕೃಷ್ಣ ರವರ ನಿರ್ದೇಶಕನಾಗಿ ಕಾಣಿಸಿಕೊಂಡರೆ ಶೈಲಜಾ ನಾಗ್ ರವರು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ನಾಯಕ ನಟನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕೂಡ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸುಮಲದ ಅಂಬರೀಷ್ ದೊಡ್ಡಣ್ಣ ಹೇಗೆ ಹಲವಾರು ಖ್ಯಾತನಾಮ ಕಲಾವಿದರು ಕಾಣಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುಪಾಲು ಮುಗಿದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸೇರಿದಂತೆ ಹಲವಾರು ಕಲಾವಿದರು ತಮ್ಮ ಡಬ್ಬಿಂಗ್ ಕೂಡ ಮುಗಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಚಿತ್ರ ಇದೇ ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿಗಳು ಬಲವಾಗಿ ಓಡಾಡುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಡಿ ಬಾಸ್ ರವರು ಒಂದು ಸಂಪ್ರದಾಯದ ನಿಯಮವನ್ನು ಮುರಿಯಲಿದ್ದಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು ಗೆಳೆಯರೇ ಚಿತ್ರದ ಟ್ರೈಲರ್ ಹಾಗೂ ಸಿನಿಮಾ ಬಿಡುಗಡೆಗಾಗಿ ಸಿನಿಮಾ ತಂಡದವರು ಬೇರೆ ಬೇರೆ ಸ್ಟಾರ್ ಸೆಲೆಬ್ರಿಟಿಗಳನ್ನು ಕರೆಸಿ ಚಿತ್ರದ ಜನಪ್ರಿಯತೆಯನ್ನು ಇನ್ನಷ್ಟು ಬೂಸ್ಟ್ ಮಾಡುತ್ತಾರೆ. ಆದರೆ ಕ್ರಾಂತಿ ಚಿತ್ರದ ವಿಚಾರದಲ್ಲಿ ಡಿ ಬಾಸ್ ಈ ನಿಯಮವನ್ನು ಮುರಿಯಲಿದ್ದಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಸಂಪೂರ್ಣ ಆಗುವ ಬೆನ್ನಲ್ಲೇ ಚಿತ್ರದ ಪ್ರಮೋಷನ್ ಕಾರ್ಯವನ್ನು ಚಿತ್ರತಂಡ ಹಮ್ಮಿಕೊಳ್ಳಲಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಕ್ರಾಂತಿ ಸಿನಿಮಾದ ಬಗ್ಗೆ ನಿಮ್ಮ ನಿರೀಕ್ಷೆಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.