ಕನ್ನಡದ ಸ್ಟಾರ್ ನಟ ಸುದೀಪ್ ರವರ ವಿಕ್ರಾಂತ್ ರೋಣ ಸಿನಿಮಾ ವಿರುದ್ಧ ತೊಡೆ ತಟ್ಟಲು ಮುಂದಾದ ನಟ ಚೇತನ್. ಇವರ ವಾದವೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಜಾಕ್ ಮಂಜುನಾಥ್ ಗೌಡ ನಿರ್ಮಾಣದ ಹಾಗೂ ಅನುಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಯಾವ ಮಟ್ಟದಲ್ಲಿ ಬಿಡುಗಡೆಯಾಗಿ ಯಶಸ್ಸನ್ನು ಕಾಣುತ್ತಿದೆ ಎಂಬುದನ್ನು ನಿಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ ಯಾಕೆಂದರೆ ಚಿತ್ರವನ್ನು ನೋಡಿರುವ ಪ್ರತಿಯೊಬ್ಬ ಪ್ರೇಕ್ಷಕರೇ ಚಿತ್ರದ ಬಗ್ಗೆ ಪ್ರಚಾರವನ್ನು ಮಾಡುತ್ತಿದ್ದಾರೆ.
ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ 150 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ವಿಶ್ವದ್ಯಂತ ಮುಟ್ಟುವ ಕಡೆಗೆ ತನ್ನ ಓಟವನ್ನು ಬೆಳೆಸಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಕನ್ನಡ ಚಿತ್ರರಂಗದ ಅತ್ಯಂತ ಹೆಮ್ಮೆಯ ಸಿನಿಮಾ ಎಂಬುದಾಗಿ ಯಾವುದೇ ಅನುಮಾನವಿಲ್ಲದ ಹೇಳಬಹುದಾಗಿದೆ. ಆದರೆ ಆ ದಿನಗಳು ಸಿನಿಮಾದ ನಾಯಕ ನಟ ಆಗಿರುವ ಚೇತನ್ ಕುಮಾರ್ ರವರು ವಿಕ್ರಾಂತ್ ರೋಣ ಸಿನಿಮಾದ ಕುರಿತಂತೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ಫ್ರೆಂಡ್ಸ್, ಚೇತನ್ ಚಿತ್ರದ ಕುರಿತಂತೆ ಕೆಲವೊಂದು ಅಸಮಾಧಾನಕರ ವಿಚಾರಗಳನ್ನು ಹೊರ ಹಾಕಿದ್ದಾರೆ. ಮೊದಲಿಗೆ ಚಿತ್ರದ ತಾಂತ್ರಿಕ ಅಂಶಗಳ ಕುರಿತಂತೆ ಬೆಳಗಾಗಿದೆ ಎಂಬುದಾಗಿ ಚಿತ್ರದ ಕುರಿತಂತೆ ಹೊಗಳಿಕೆ ಮಾತುಗಳನ್ನು ಹಾಡಿರುವ ಚೇತನ ನಂತರ ಚಿತ್ರದ ಕುರಿತಂತೆ ತಮ್ಮ ಅಸಮಾಧಾನಕರ ವಿಚಾರಗಳನ್ನು ವಿವರವಾಗಿ ಹೇಳಿದ್ದಾರೆ.

ಚಿತ್ರದಲ್ಲಿ ಹಿಂದುಳಿದ ವರ್ಗದ ಜನರನ್ನು ದುಷ್ಟರಂತೆ ತೋರಿಸಿದ್ದಾರೆ ಹಾಗೂ ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಈ ತರಹ ಜಾತಿ ಹಾಗೂ ಧರ್ಮಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿರುವುದು ತಪ್ಪು ಎಂಬುದಾಗಿ ಚೇತನ್ ಹೇಳಿದ್ದಾರೆ. ಬಹುಶಃ ಸಿನಿಮಾದಲ್ಲಿ ಫಕ್ರು ಎನ್ನುವ ಪಾತ್ರ 11 ಮಕ್ಕಳನ್ನು ಹೊಂದಿರುವುದು ಮುಸ್ಲಿಂ ಸಮಾಜದ ಮೇಲೆ ಸ್ಟಿರಿಯೋಟೈಪ್ ದೃಷ್ಟಿಕೋನವನ್ನು ಸಿನಿಮಾದಲ್ಲಿ ಬೀರಲಾಗಿದೆ ಎಂದು ಭಾವಿಸಿರಬಹುದು ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.