ರೋಹಿತ್ ಶರ್ಮ ರವರ ಬಳಿಕ ಮುಂದಿನ ನಾಯಕ ಯಾರು ಆಗಬಹುದು ಗೊತ್ತೇ?? ರೇಸ್ ನಲ್ಲಿ ನಾಲ್ವರು ಯುವ ಆಟಗಾರರು. ಯಾರ್ಯಾರು ಗೊತ್ತೇ?
ನಮಸ್ಕಾರ ಸ್ನೇಹಿತರೇ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮೆಟ್ಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ ರವರು ಕಾಣಿಸಿಕೊಂಡಿದ್ದಾರೆ ನಿಜ ಆದರೆ, ಈಗಾಗಲೇ ಅವರಿಗೆ 35 ವರ್ಷ ವಯಸ್ಸಾಗಿದೆ ಹೀಗಾಗಿ ಹೆಚ್ಚು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರು ನಾಯಕನಾಗಿ ಉಳಿದುಕೊಳ್ಳುವುದು ಅನುಮಾನವೇ ಸರಿ. ಹೀಗಿದ್ದರೆ ಭವಿಷ್ಯದ ನಾಯಕರಾಗಿ ಆಯ್ಕೆ ಆಗಬಲ್ಲಂತಹ ನಾಲ್ಕು ಸಂಭಾವ್ಯ ಆಟಗಾರರು ಯಾರು ಎಂಬುದನ್ನು ತಿಳಿಸುತ್ತೇವೆ ಬನ್ನಿ.

ರಿಷಬ್ ಪಂತ್; ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಹಲವಾರು ಪಂದ್ಯಗಳನ್ನು ಮುನ್ನಡೆಸಿರುವ ಅನುಭವ ರಿಷಬ್ ಪಂತ್ ರವರಿಗೆ ಈಗಾಗಲೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ತಂಡದ ಜವಾಬ್ದಾರಿಯನ್ನು ಮುನ್ನಡೆಸಬಲ್ಲ ಚಾಣಾಕ್ಷತೆ ಅವರಲ್ಲಿದೆ ಈಗಾಗಲೇ ಅದನ್ನು ಐಪಿಎಲ್ ನಲ್ಲಿ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಸಾಬೀತುಪಡಿಸಿದ್ದಾರೆ.

ಶುಭಮನ್ ಗಿಲ್; ಭಾರತೀಯ ಕ್ರಿಕೆಟ್ ತಂಡದ ಯುವ ಉದಯೋನ್ಮುಖ ಬ್ಯಾಟ್ಸ್ಮನ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿರುವ ಗಿಲ್ ಮೂರನೇ ಕ್ರಮಾಂಕದಲ್ಲಿ ತಂಡದ ಪ್ರಮುಖ ಆಟಗಾರನಾಗಿ ಸದ್ಯದ ಮಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಹೀಗಾಗಿ ಮುಂದಿನ ದಿನಗಳಲ್ಲಿ ಭವಿಷ್ಯದ ನಾಯಕನಾಗುವ ರೇಸಿಂಗ್ ನಲ್ಲಿ ಇವರು ಕೂಡ ಯಾರಿಗೇನು ಕಮ್ಮಿ ಇಲ್ಲದಂತಿದ್ದಾರೆ.

ಕೆ ಎಲ್ ರಾಹುಲ್; ರೋಹಿತ್ ಶರ್ಮಾ ತಂಡದ ನಾಯಕನಾಗಿದ್ದರೆ ಉಪನಾಯಕನಾಗಿ ಕೆಎಲ್ ರಾಹುಲ್ ರವರು ಆಯ್ಕೆಯಾಗಿರುವುದು ನಿಮಗೆಲ್ಲ ತಿಳಿದಿದೆ. ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರಗೆ ಇರಬಹುದು ಆದರೆ ತಂಡದ ಭವಿಷ್ಯದ ನಾಯಕ ಇವರೇ ಎನ್ನುವುದಾಗಿ ಎಲ್ಲಾ ಕಡೆ ಸುದ್ದಿ ಚಾಲ್ತಿಯಲ್ಲಿ ಇರುವುದು ನಿಜ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಸೇರಿದಂತೆ ಐಪಿಎಲ್ ನಲ್ಲಿ ಪಂಜಾಬ್ ಹಾಗೂ ಲಕ್ನೋ ತಂಡದ ನಾಯಕನಾಗಿ ಕೂಡ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ; ಇಂಜುರಿಯಿಂದ ವಾಪಸ್ ಆದ ಬಳಿಕ ಆಡಿದ ಮೊದಲ ಐಪಿಎಲ್ ಟೂರ್ನಮೆಂಟಿನಲ್ಲಿಯೇ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಮೊದಲ ಆವೃತ್ತಿಯಲ್ಲಿಯೇ ಕಪ್ಪನ್ನು ಗೆದ್ದಿದ್ದಾರೆ. ಇನ್ನು ಅದಾದ ಬಳಿಕ ಅಂತರಾಷ್ಟ್ರೀಯ ಸರಣಿಗಳಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಇತ್ತೀಚಿಗಷ್ಟೇ ಅಪಾರವಾದ ಯಶಸ್ಸನ್ನು ಗಳಿಸಿದ್ದಾರೆ ಹಾಗಾಗಿ ಇವರು ಕೂಡ ಭವಿಷ್ಯದ ನಾಯಕನಾಗುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿವೆ.