ತೆಲುಗಿನಲ್ಲಿ ನಡೆದ ಕಹಿ ಘಟನೆ ಬಳಿಕ ಖಡಕ್ ನಿರ್ಧಾರ ತೆಗೆದುಕೊಂಡ ಚಂದನ್: ತೆಲುಗಿನವರಿಗೆ ಶಾಕ್ ನೀಡಲು ಏನು ಮಾಡಿದ್ದಾರೆ ಗೊತ್ತೇ??

107

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ತೆಲುಗು ಸೀರಿಯಲ್ ಚಿತ್ರೀಕರಣದ ಸೆಟ್ನಲ್ಲಿ ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಖ್ಯಾತ ನಟ ಆಗಿರುವ ಚಂದನ್ ಕುಮಾರ್ ಅವರಿಗೆ ಅವಮಾನ ಆಗುವಂಥ ಘಟನೆ ನಡೆದಿದೆ. ಇದು ಇತ್ತೀಚಿಗಷ್ಟೇ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವಂತಹ ವಿಚಾರ. ಹೌದು ಗೆಳೆಯರೇ ತೆಲುಗಿನ ಶ್ರೀಮತಿ ಶ್ರೀನಿವಾಸ ಎನ್ನುವ ಧಾರಾವಾಹಿಯ ಚತ್ರಿಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಚಂದನ್ ಕುಮಾರ್ ರವರಿಗೆ ಇಂತಹ ಕಹಿ ಘಟನೆಯಾಗಿದೆ.

ಅಲ್ಲಿ ಆ ಕಡೆಯಿಂದ ಬಂದಿರುವ ಸುದ್ದಿ ಏನೆಂದರೆ ಚಂದನ್ ಕುಮಾರ್ ಅವರು ನನ್ನ ಮೇಲೆ ಹ’ಲ್ಲೆ ಮಾಡಿದ್ದಾರೆ ಎನ್ನುವುದಾಗಿ. ಆದರೆ ಈ ಬಗ್ಗೆ ಚಂದನ್ ಕುಮಾರ್ ರವರ ಸ್ಪಷ್ಟೀಕರಣ ನೀಡುತ್ತ, ” ರಂಜಿತ್ ಎನ್ನುವ ಹುಡುಗ ನನ್ನನ್ನು ಪದೇ ಪದೇ ಕರೆಯುತ್ತಿದ್ದ ನನಗೆ 30 ನಿಮಿಷ ವಿರಾಮ ನೀಡು ಎನ್ನುವುದಾಗಿ ಹೇಳಿದ್ದೆ ಆದರೆ ಆತ ಪದೇ ಪದೇ ಬಂದು ನನ್ನನ್ನು ನಿರ್ದೇಶಕರು ಕರೆಯುತ್ತಿದ್ದಾರೆ ಎಂಬುದಾಗಿ ಡಿಸ್ಟರ್ಬ್ ಮಾಡುತ್ತಲೇ ಇದ್ದ. ನಂತರ ನನ್ನ ಅಸಿಸ್ಟೆಂಟ್ ಗೆ ಐದು ನಿಮಿಷ ಎಂದು ಹೇಳಿ 30 ನಿಮಿಷ ಆದ್ರೂ ಮಲ್ಕೊಂಡೆ ಇದ್ದಾನಲ್ಲೋ ಅವನು ಎಂಬುದಾಗಿ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾನೆ. ಇದಾದ ನಂತರ ನಾನು ಹೊರಗೆ ಬಂದು ಏನು ಎಂದು ಕೇಳಿದಾಗ ಡೈರೆಕ್ಟರ್ ಎಂಬುದಾಗಿ ಹೇಳಿದಾಗ ನಾನು ತಮಾಷೆಯಿಂದಲೇ ಸುಮ್ಮನೆ ಹೋಗಪ್ಪ ಎಂಬುದಾಗಿ ತಳ್ಳಿದೆ ಆದರೆ ಅದನ್ನೇ ಆತ ಅಲ್ಲಿಗೆ ಹೋಗಿ ಸುಳ್ಳು ರೂಪದಲ್ಲಿ ಹೇಳಿದ್ದಾನೆ ಹಾಗೂ ಕಣ್ಣೀರು ಹಾಕಿದ್ದಾನೆ” ಎಂಬುದಾಗಿ ಚಂದನ್ ಹೇಳಿದ್ದಾರೆ.

ಅಲ್ಲಿ ಯಾರೂ ಕೂಡ ನನ್ನ ಪರವಾಗಿ ಮಾತನಾಡಲಿಲ್ಲ ನಿರ್ದೇಶಕರ ಸಂಘದಿಂದ ಎಂದು ಹೇಳಿಕೊಂಡು ಬಂದವರು ಕೂಡ ಅವರ ಪರವಾಗಿಯೇ ನಿಂತಿದ್ದರು. 3 ಗಂಟೆಗಳ ಕಾಲ ನನ್ನನ್ನು ಎಲ್ಲಿಯೂ ಹೋಗಲು ಬಿಡಲಿಲ್ಲ, ಕನ್ನಡ ನನ್ನಮ್ಮ ತೆಲುಗು ದೊಡ್ಡಮ್ಮ ತಮಿಳು ಚಿಕ್ಕಮ್ಮ ಎಂದು ಬದುಕಿದವನು ನಾನು. ಆದರೆ ಈ ರೀತಿಯ ಅನ್ಯಾಯ ನಡೆದಿದ್ದು ನಿಜಕ್ಕೂ ಕೂಡ ನನಗೆ ದುಃಖವಾಗಿದೆ, ಧಾರವಾಹಿಯ ನಿರ್ದೇಶಕರು ಈಗಲೂ ಕೂಡ ನನ್ನ ಜೊತೆಗೆ ಚೆನ್ನಾಗಿದ್ದಾರೆ ನನ್ನ ಗ್ರಹ ಪ್ರವೇಶ ನಡೆದಾಗ ಕೂಡ ಅವರಿಗೆ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ ಅಲ್ಲಿಯೇ ಊಟ ಹಾಕಿಸಿದೆ ಆದರೆ ಇಂದು ಅವರು ನನ್ನೊಂದಿಗೆ ನಡೆದುಕೊಂಡ ರೀತಿ ನಿಜಕ್ಕೂ ಕೂಡ ಬೇಸರವಾಯಿತು ಇನ್ನು ಮುಂದೆ ನಾನು ಈ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಧಾರಾವಾಹಿಯಿಂದ ಹೊರ ಬಂದಿದ್ದೇನೆ ಎಂಬುದಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ತಪ್ಪದೇ ಶೇರ್ ಮಾಡಿಕೊಳ್ಳಿ.