ಸ್ಥಾನ ಪಡೆಯುವುದು ಅಲ್ಲವೇ ಅಲ್ಲ, ನನಗೆ ಒಂದು ಗುರಿಯಿದೆ ಅದನ್ನು ತಲುಪಬೇಕು ಎಂದ ದಿನೇಶ್: ಏನು ಆ ಗುರಿ ಅಂತೇ ಗೊತ್ತೇ??

36

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ದಿನೇಶ್ ಕಾರ್ತಿಕ್ ರವರು ಭಾರತೀಯ ಕ್ರಿಕೆಟ್ ತಂಡದಿಂದ ಹೊರಗೆ ಬಿದ್ದು ಕಾಮಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ತಮ್ಮ ಪರಿಶ್ರಮ ಹಾಗೂ ಹಾರ್ಡ್ವರ್ಕ್ ಕಾರಣದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ನಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ತೋರ್ಪಡಿಸಿ ಮೂರು ವರ್ಷಗಳ ನಂತರ ಮತ್ತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಈಗಾಗಲೇ ಆಡಿರುವ ಬಹುತೇಕ ಎಲ್ಲಾ ಅಂತರಾಷ್ಟ್ರೀಯ ಸರಣಿಗಳಲ್ಲಿ ದಿನೇಶ್ ಕಾರ್ತಿಕ್ ರವರ ಸ್ಥಿರ ಪ್ರದರ್ಶನ ಎದ್ದು ಕಾಣುತ್ತಿದೆ ಎಂದು ಹೇಳಬಹುದಾಗಿದೆ. ಕ್ರಿಕೆಟ್ ಜೀವನದಲ್ಲಿ ಸಿಕ್ಕಿರುವ ಎರಡನೇ ಅವಕಾಶವನ್ನು ಅತ್ಯಂತ ಜವಾಬ್ದಾರಿಯುತವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈಗಾಗಲೇ ದಿನೇಶ್ ಕಾರ್ತಿಕ್ ರವರು ಭಾರತೀಯ ಕ್ರಿಕೆಟ್ ತಂಡದ ಫಿನಿಶರ್ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಯಾವುದೇ ಚ್ಯುತಿ ಬರದಂತೆ ನಿರ್ವಹಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ತಮ್ಮ ಜೀವನದ ಗುರಿಯನ್ನು ಎಲ್ಲರ ಎದುರು ಬಹಿರಂಗಪಡಿಸಿದ್ದಾರೆ ದಿನೇಶ್ ಕಾರ್ತಿಕ್ ರವರು.

ಹೌದು ಸ್ನೇಹಿತರೆ ದಿನೇಶ್ ಕಾರ್ತಿಕ್ ರವರು ಅತಿ ಶೀಘ್ರದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ತಂಡಕ್ಕೆ ಕೊಡುವಂತಹ ಪ್ರದರ್ಶನವನ್ನು ನೀಡುವ ಮಹಾದಾಸೆಯನ್ನು ಹೊಂದಿದ್ದಾರೆ ಎಂಬುದಾಗಿ ಬಹಿರಂಗಪಡಿಸಿದ್ದಾರೆ. ತಂಡದಲ್ಲಿ ನನ್ನ ಜವಾಬ್ದಾರಿಯನ್ನು ಮುಕ್ತವಾಗಿ ನಿರ್ವಹಿಸುವ ಸ್ವಾತಂತ್ರ್ಯವನ್ನು ನನಗೆ ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ನೀಡಿದ್ದಾರೆ ಇದರಿಂದಾಗಿ ನಾನು ಅತ್ಯುತ್ತಮವಾಗಿ ಆಟವಾಡಲು ಸಾಧ್ಯವಾಗುತ್ತಿದೆ ಎಂಬುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ದಿನೇಶ್ ಕಾರ್ತಿಕ್ ರವರ ಕನಸು ಎಷ್ಟರ ಮಟ್ಟಿಗೆ ನನಸಾಗುತ್ತದೆ ಎಂಬುದನ್ನು ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಇನ್ನೇನು ಕೆಲವೇ ತಿಂಗಳುಗಳಲ್ಲಿ ಹೇಳಲಿದೆ.