ಬಿಗ್ ನ್ಯೂಸ್: ಬಿಗ್ ಬಾಸ್ ಬಗ್ಗೆ ಮೂಡಿರುವ ಪ್ರಶ್ನೆಗಳಿಗೆ ನೇರಾ ನೇರಾ ಉತ್ತರ ನೀಡಿದ ಸುದೀಪ್, ಪರಮೇಶ್ವರ್ ಗುಂಡ್ಕಲ್. ಏನೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಇದೇ ಆಗಸ್ಟ್ 6ರಿಂದ ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮ ಅತಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿ. ಓ ಟಿ ಟಿ ನಲ್ಲಿ ಸಂಪೂರ್ಣವಾಗಿ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ಇದೇ ಮೊದಲು. ಹೀಗಾಗಿ ಈ ಕಾರ್ಯಕ್ರಮದ ಕುರಿತ ಹಲವಾರು ಗೊಂದಲಗಳಿರಬಹುದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಆಗಿರುವ ಪರಮೇಶ್ವರ್ ಗುಂಡ್ಕಲ್ ಸಂಪೂರ್ಣ ವಿವರವಾಗಿ ಈ ವಿಚಾರದ ಕುರಿತಂತೆ ವಿವರಣೆ ನೀಡಿದ್ದಾರೆ. ಮುಖ್ಯ ಬಿಗ್ ಬಾಸ್ ನಲ್ಲಿ ಕಾಣಿಸುವಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು, ಈ ಓ ಟಿ ಟಿ ಬಿಗ್ ಬಾಸ್ ನಲ್ಲಿಯೂ ಕೂಡ ಶನಿವಾರ ಹಾಗೂ ಭಾನುವಾರ ಪಂಚಾಯತಿ ಕಟ್ಟಿಗೆ ಆಗಮಿಸಲಿದ್ದಾರೆ.
ಇನ್ನು ಇದು 42 ದಿನಗಳ ಕಾಲ ನಡೆಯಲಿದೆ ಎಂಬುದಾಗಿ ಕೂಡ ಅಧಿಕೃತವಾಗಿ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಇದು ಯಾವುದೇ ಟಿವಿ ಚಾನಲ್ ಗಳಲ್ಲಿ ಪ್ರಸಾರ ಆಗುವುದಿಲ್ಲ ಬದಲಾಗಿ, 24 ಗಂಟೆಗಳವರೆಗೂ ಎರಡು ನಿಮಿಷಗಳ ಅಂತರದಲ್ಲಿ ವೂಟ್ ಅಪ್ಲಿಕೇಶನ್ ನಲ್ಲಿ ಪ್ರಸಾರ ಕಾಣಲಿದೆ ಎಂಬುದಾಗಿ ಹೇಳಿದ್ದಾರೆ. ಈ ಬಿಗ್ ಬಾಸ್ ನಲ್ಲಿ ವಿನ್ನರ್ ಇರುವುದಿಲ್ಲ ಬದಲಾಗಿ ವಿನ್ನರ್ಸ್ ಇರುತ್ತಾರೆ. ಈ ಬಿಗ್ ಬಾಸ್ ಮುಗಿದ ನಂತರವೇ ಮುಖ್ಯ ಬಿಗ್ ಬಾಸ್ ಅಂದರೆ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗುತ್ತದೆ. ಇದಾದ ನಂತರ ಮುಂದೇನು ಎನ್ನುವುದರ ಕುರಿತಂತೆ ಕೊನೆಯಲ್ಲಿ ಎಲ್ಲರಿಗೂ ಕೂಡ ಗೊಂದಲಕ್ಕೆ ಪರಿಹಾರ ಸಿಗುವಂತಹ ಉತ್ತರ ಸಿಗಲಿದೆ ಎಂಬುದಾಗಿ ಕೂಡ ಗುಂಡ್ಕಲ್ ಹೇಳಿದ್ದಾರೆ.

ಪ್ರಾರಂಭದಿಂದಲೂ ಕೂಡ ಕಿಚ್ಚ ಸುದೀಪ್ ರವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಲೇ ಇದ್ದಾರೆ, ಕಿಚ್ಚ ಸುದೀಪ್ ರವರು ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂಬುದಾಗಿ ಪರಮೇಶ್ವರ್ ಗುಂಡ್ಕಲ್ ಅವರಿಗೆ ಮಾಧ್ಯಮಗಳು ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿರುವ ಪರಮೇಶ್ವರ್ ಗುಂಡ್ಕಲ್ ರವರು ಬೇರೆ ಭಾಷೆಯವರು ಬೇರೆ ಭಾಷೆಯ ಬಿಗ್ ಬಾಸ್ ನ ನಿರೂಪಕ ನಟರಿಗೆ ಎಷ್ಟು ಸಂಭವನ ನೀಡುತ್ತಾರೆ ಗೊತ್ತಿಲ್ಲ ಆದರೆ ಕಿಚ್ಚ ಸುದೀಪ್ ರವರಿಗೆ ಮಾತ್ರ ನಾವು ಉತ್ತಮವಾದ ಗೌರವ ಧನವನ್ನೇ ನೀಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.