ಜಿಂಬಾಬ್ವೆ ಸರಣಿಯಲ್ಲಿಯೂ ಆಯ್ಕೆಯಾಗದೆ ಇರುವ ವಿರಾಟ್ ಕೊಹ್ಲಿ ರವರಿಗೆ ಶುರುವಾಗಿದೆ ಅಗ್ನಿ ಪರೀಕ್ಷೆ: ಅದೊಂದು ಕೆಲಸ ಮಾಡಿದರೆ ಮಾತ್ರ ಸ್ಥಾನ ಫಿಕ್ಸ್.

16

ನಮಸ್ಕಾರ ಸ್ನೇಹಿತರೆ 2019 ರಿಂದ ವಿರಾಟ್ ಕೊಹ್ಲಿ ರವರ ಫಾರ್ಮ್ ಎನ್ನುವುದು ಇತಿಹಾಸದಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ಸಾಕ್ಷಿಕರಿಸಿದೆ ಎಂದು ಹೇಳಬಹುದು. ಅದಕ್ಕೂ ಮುನ್ನ 70 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ರವರು ಇದುವರೆಗೂ ಮೂರು ವರ್ಷಗಳ ಸಮಯದಲ್ಲಿ ಒಂದೇ ಒಂದು ಬಾರಿ ಕೂಡ ಶತಕದ ಆಸುಪಾಸಿಗೂ ಕೂಡ ಬಂದಿಲ್ಲ.

ಎಷ್ಟಿದ್ದರೂ ಕೂಡ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅವರ ಕಳಪೆ ಫಾರ್ಮ್ ವಿರುದ್ಧ ಕೇಳಿ ಬರುತ್ತಿರುವ ಕೂಗಿನ ಹಿನ್ನೆಲೆಯಲ್ಲಿ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಕೈ ಬಿಡಲಾಗಿತ್ತು. ಇದಾದ ನಂತರ ಭಾರತೀಯ ಕ್ರಿಕೆಟ್ ತಂಡ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡಬೇಕಾಗಿತ್ತು ಇದಾದ ನಂತರ ಯುಎಇ ನಲ್ಲಿ ಏಷ್ಯಾ ಕಪ್ ನಡೆಯೋದಿತ್ತು. ಈ ಹಿನ್ನಲೆಯಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ರವರು ಆಯ್ಕೆಯಾಗುತ್ತಾರೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ರವರು ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ. ಹೀಗಾಗಿ ಮತ್ತೆ ವಿರಾಟ್ ಕೊಹ್ಲಿ ರವರು ಕಂಬ್ಯಾಕ್ ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಸಿಗುವ ಉತ್ತರ ಒಂದೆ ಒಂದು ಎಂದರೆ ಆಗಸ್ಟ್ 28ರಿಂದ ಪ್ರಾರಂಭವಾಗಲಿರುವ ಏಷ್ಯಾಕಪ್ ನಲ್ಲಿ ಎಂಬುದಾಗಿ ತಿಳಿದು ಬರುತ್ತದೆ. ಹೌದು ಗೆಳೆಯರೇ ಯಾಕೆಂದರೆ ಏಷ್ಯಾ ಕಪ್ ನಲ್ಲಿ ಆಡುವ ತಂಡವನ್ನೇ ಅಂದರೆ ಅದೇ ತಂಡದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಲಿರುವ ಆಟಗಾರರನ್ನೇ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.

ಹೀಗಾಗಿ ಯುಎಇ ನಲ್ಲಿ ನಡೆಯಲಿರುವ ಏಷ್ಯಾ ಕಪ್ ವಿರಾಟ್ ಕೊಹ್ಲಿ ರವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಇರುವಂತಹ ಕೊನೆಯ ಅವಕಾಶ ಅಥವಾ ಅಗ್ನಿಪರೀಕ್ಷೆ ಎಂದು ಹೇಳಬಹುದಾಗಿದೆ. ಒಂದು ವೇಳೆ ವಿರಾಟ್ ಕೊಹ್ಲಿ ಇಲ್ಲಿ ವಿಫಲವಾದರೆ ಖಂಡಿತವಾಗಿ ಬಹುತೇಕ ಅವರ ಕ್ರಿಕೆಟ್ ಜರ್ನಿಯ ಕೊನೆಯ ಅಳಿವಿನ ಹಂತ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಕಳಪೆ ಫಾರ್ಮ್ ನಲ್ಲಿರುವ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಡಿ ಎಂಬುದಾಗಿ ಹಲವಾರು ಮಾಜಿ ಕ್ರಿಕೆಟಿಗರು ಈಗಾಗಲೇ ಅಪಸ್ವರವನ್ನು ಏರಿಸಲು ಪ್ರಾರಂಭಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ರವರು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಇದೊಂದು ಅವಕಾಶ ಸಿಕ್ಕಿದೆ ಎಂದು ಹೇಳಬಹುದು.