ಸಾವಿರಾರು ಕೋಟಿ ಒಡತಿಯಾಗಿರುವ ರಾಮ್ ಚರಣ್ ಪತ್ನಿ ಖರೀದಿಸಿದ ಹೊಸ ಎಲೆಕ್ಟ್ರಿಕ್ ಕಾರ್ ಬೆಲೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೆ ಮೆಗಾಸ್ಟಾರ್ ಚಿರಂಜೀವಿ ರವರ ಪುತ್ರ ಆಗಿರುವ ರಾಮ್ ಚರಣ್ ರವರು ಉಪಾಸನ ಅವರನ್ನು ಪ್ರೀತಿಸಿ ಮದುವೆ ಆಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ ಇತ್ತೀಚಿಗಷ್ಟೇ ತಮ್ಮ 10 ವರ್ಷದ ದಾಂಪತ್ಯ ಜೀವನವನ್ನು ಕೂಡ ವಿದೇಶದಲ್ಲಿ ಆಚರಿಸಿಕೊಂಡಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಇನ್ನು ಈ ವರ್ಷವಷ್ಟೇ ಬಿಡುಗಡೆ ಆಗಿರುವ ಆರ್ ಆರ್ ಆರ್ ರಾಮ್ ಚರಣ್ ರವರಿಗೆ ಯಾವ ಮಟ್ಟದಲ್ಲಿ ಯಶಸ್ಸನ್ನು ದೊರಕಿಸಿ ಕೊಟ್ಟಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.
ಇನ್ನು ರಾಮಚರಣ್ ರವರ ಪತ್ನಿ ಆಗಿರುವ ಉಪಾಸನ ಕೂಡ ಯಾರಿಗೇನು ಕಮ್ಮಿ ಇಲ್ಲ. ಅಪೋಲೋ ಆಸ್ಪತ್ರೆ ಸಮೂಹಗಳ ಒಡೆಯನ ಮಗಳಾಗಿರುವ ಉಪಾಸನ ರವರು ಸ್ವಾವಲಂಬಿ ಮಹಿಳೆಯಾಗಿ ಬಿಸಿನೆಸ್ ಉಮನ್ ಆಗಿ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರ ತಪ್ಪಾಗಲಾರದು ಹಾಗೂ ತಮ್ಮ ಅಪೋಲೋ ಸಂಸ್ಥೆಯ ಮೂಲಕ ಬಡ ಜನರಿಗೆ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಕೂಡ ಕೈಗೆ ದಾರದಲ್ಲಿ ಹಾಗೂ ಉಚಿತವಾಗಿ ನೀಡುವಲ್ಲಿ ಕೂಡ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಹೀಗಾಗಿ ರಾಮಚರಣ್ ಅವರ ಪತ್ನಿ ಎನ್ನುವುದಕ್ಕಿಂತ ಹೆಚ್ಚಾಗಿ ತಮ್ಮ ಸ್ವಂತ ಗುರುತಿನಿಂದ ಕೂಡ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಉಪಸನ ರವರು ಇತ್ತೀಚಿಗಷ್ಟೇ ಆಡಿ ಇ ಟ್ರಾನ್ ಲಕ್ಜುರಿಯಸ್ ಕಾರ್ ಅನ್ನು ಖರೀದಿಸುವ ಮೂಲಕ ಸುದ್ದಿಯ ಚಾಲ್ತಿಯಲ್ಲಿದ್ದಾರೆ.

ಈ ಎಲೆಕ್ಟ್ರಾನಿಕ್ ಕಾರ್ ಅನ್ನು ಖರೀದಿಸುವ ಮೂಲಕ ಈಗ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ ಎಂದರೆ ತಪ್ಪಾಗಲಾರದು. ಹಲವಾರು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಕಾರಿನ ಬೆಲೆ ಬರೋಬ್ಬರಿ 1.20 ಕೋಟಿ ರೂಪಾಯ್ ಬೆಲೆ ಎಂಬುದಾಗಿ ತಿಳಿದು ಬಂದಿದ್ದು ಇದರ ವಿಶೇಷತೆಗಳನ್ನು ಕೂಡ ಉಪಸರ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನೀವು ಸರಿಯಾಗಿ ಗಮನಿಸಿದರೆ ಇತ್ತೀಚಿಗಷ್ಟೇ ಮದುವೆಯಾಗಿ 10 ವರ್ಷಗಳಾಗಿದ್ದರು ಕೂಡ ಇಬ್ಬರು ಮಕ್ಕಳು ಮಾಡಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದೇನೇ ಇರಲಿ ಮೆಗಾ ಫ್ಯಾಮಿಲಿಯ ಸೊಸೆಯಾಗಿ ಕುಟುಂಬ ಮೆಚ್ಚುವಂತಹ ಹಲವಾರು ಕಾರ್ಯಗಳಲ್ಲಿ ಉಪಾಸನ ಭಾಗಿ ಆಗಿರುವುದಂತೂ ಸುಳ್ಳಲ್ಲ.