ಇದ್ದಕ್ಕಿದ್ದಂತೆ ತನ್ನ ಮನೆಯನ್ನು ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್: ಮಾರಿದ್ದು ಎಷ್ಟು ಕೋಟಿಗೆ ಗೊತ್ತೇ??

279

ನಮಸ್ಕಾರ ಸ್ನೇಹಿತರೆ, ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ನಟಿಯರಲ್ಲಿ ನಟಿ ಶ್ರೀದೇವಿ ಕೂಡ ಒಬ್ಬರು. ಇಂದು ಅವರು ನಮ್ಮ ಜೊತೆಗೆ ಇಲ್ಲದಿರಬಹುದು ಆದರೆ ಅವರ ಸ್ವರೂಪವಾಗಿ ಅವರ ಮಗಳು ಜಾಹ್ನವಿ ಕಪೂರ್ ಈಗ ಬಾಲಿವುಡ್ ಚಿತ್ರರಂಗ ದಲ್ಲಿ ಯುವ ಉದಯೋನ್ಮುಖ ನಟಿಯಾಗಿ ಹೆಸರು ಸಂಪಾದಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಭರವಸೆಯ ನಾಯಕನಟಿಯಾಗುವ ಎಲ್ಲಾ ಸಾಧ್ಯತೆಗಳನ್ನು ಕೂಡ ತೋರ್ಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸತತವಾಗಿ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಹ್ನವಿ ಕಪೂರ್ ರವರು ಬಾಲಿವುಡ್ ಚಿತ್ರರಂಗದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ತಾಯಿಯ ಹಾಗೆ ದೊಡ್ಡ ಹೆಸರು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಆದರೆ ಜಾಹ್ನವಿ ಕಪೂರ್ ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕಾಗಿ ಅಲ್ಲ ಬದಲಾಗಿ ವೈಯಕ್ತಿಕ ವಿಚಾರಕ್ಕಾಗಿ. ಹೌದು ಗೆಳೆಯರೇ 2020 ರಲ್ಲಿ ಖರೀದಿಸಿದ್ದ ಆಸ್ತಿಯನ್ನು ಇತ್ತೀಚಿಗಷ್ಟೇ ಖ್ಯಾತ ಬಾಲಿವುಡ್ ನಟನೆಗೆ ಮಾರುವ ಮೂಲಕ ಲಾಭವನ್ನು ಸಂಪಾದಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೌದು ಗೆಳೆಯರೇ 2020ರಲ್ಲಿ ಜುಹುವಿನ ಬೀಚ್ ಬಳಿ ಪ್ರತಿಷ್ಠಿತ ಅಪಾರ್ಟ್ಮೆಂಟ್ ಒಂದರಲ್ಲಿ 14 15 ಹಾಗೂ 16ನೇ ಫ್ಲೋರ್ ಗಳನ್ನು ಖರೀದಿಸಿದ್ದರು ಅದು ಕೂಡ ಬರೋಬ್ಬರಿ 39 ಕೋಟಿ ರೂಪಾಯಿಗಳಿಗೆ.

ಈಗ ಇದೆ ಪ್ರಾಪರ್ಟಿಯನ್ನು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ರಾಜಕುಮಾರ್ ರಾವ್ ರವರಿಗೆ ಬರೋಬ್ಬರಿ 44 ಕೋಟಿ ರೂಪಾಯಿಗೆ ಮಾರಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಐದು ಕೋಟಿ ರೂಪಾಯಿಗಳ ಲಾಭವನ್ನು ಈ ಡೀಲ್ ನಲ್ಲಿ ಜಾಹ್ನವಿ ಕಪೂರ್ ಸಂಪಾದಿಸಿದ್ದಾರೆ ಎಂದು ಹೇಳಬಹುದಾಗಿದೆ. ನಟಿಯಾಗಿ ಯಶಸ್ವಿ ಜೀವನವನ್ನು ನಡೆಸುತ್ತಿದ್ದರು ಕೂಡ ಈ ಪ್ರಾಪರ್ಟಿಯನ್ನು ಮಾರುವ ಅವಶ್ಯಕತೆ ಅವರಿಗೆ ಏನಿತ್ತು ಎಂಬುದಾಗಿ ಇನ್ನೂ ಕೂಡ ತಿಳಿದು ಬಂದಿಲ್ಲ ಎಂದು ಹೇಳಬಹುದು. ಈ ವಿಚಾರದ ಬಗ್ಗೆ ನಿಮಗೇನಾದರೂ ಅಭಿಪ್ರಾಯಗಳಿದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.