ಮನೆಯಲ್ಲಿ ಅದೊಂದು ದಿಕ್ಕಿನಲ್ಲಿ ಬೆಳಕು ಇದ್ದು, ಸ್ವಚ್ಛವಾಗಿದ್ದರೆ ಹಣದ ಕೊರತೆ ಹೋಗಿ, ಸಂಪತ್ತು ನಿಮ್ಮದಾಗುತ್ತದೆ. ಯಾವ ಜಾಗ ಗೊತ್ತೇ??
ನಮಸ್ಕಾರ ಸ್ನೇಹಿತರೇ ವಾಸ್ತು ಶಾಸ್ತ್ರದ ಪ್ರಕಾರ ಮನೆ ಇರುವುದು ಪ್ರಮುಖವಾಗಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿತವಾಗಿರುವಂತೆ ಮನೆಯ ಕೆಲವೊಂದು ದಿಕ್ಕುಗಳು ಕೆಲವೊಂದು ಆಯಾಯ ದಿಕ್ಕುಗಳಿಗೆ ಹೊಂದಿದಂತೆ ಇದ್ದರೆ ಮನೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಇಲ್ಲದಿದ್ದರೆ ಇದರಿಂದಾಗಿ ಮನೆಯವರು ಆಯಾಯ ಸಮಸ್ಯೆಗಳಿಗೆ ಈಡಾಗಬೇಕಾದ ಪರಿಸ್ಥಿತಿ ಹೆಚ್ಚಾಗಿರುತ್ತದೆ.
ಸಾಮಾನ್ಯವಾಗಿ ಇದರಲ್ಲಿ ಉಲ್ಲೇಖವಾಗಿರುವಂತೆ ಮಲಗುವ ಕೋಣೆಯಲ್ಲಿ ಹಣದ ತಿಜೋರಿಯನ್ನು ಇಡಬಾರದು. ಹಣದ ತಿಜೋರಿಯನ್ನು ಮನೆಯಲ್ಲಿ ಪೂರ್ವ ಹಾಗೂ ಉತ್ತರ ದಿಕ್ಕುಗಳಿಗೆ ಮುಖ ಮಾಡಿ ನಿಲ್ಲಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ದಿಕ್ಕುಗಳಿಗೆ ಇಟ್ಟರೂ ಕೂಡ ಅದು ಶುಭಪ್ರದವಾಗಿರುತ್ತದೆ.
ನಿಮ್ಮ ಮಲಗುವ ಕೋಣೆ ವಾಸು ಶಾಸ್ತ್ರದ ಪ್ರಕಾರ ನೈರುತ್ಯ ಮೂಲೆಯಲ್ಲಿ ಇದ್ದರೆ ಆ ಕೋಣೆಯಲ್ಲಿ ಭಾರಿ ವಸ್ತುಗಳನ್ನು ಇಡಬೇಕು. ಅಂದರೆ ಬಟ್ಟೆ ಇಡುವ ಬೀರುವನ್ನು ಇಟ್ಟರೂ ಕೂಡ ಪರವಾಗಿಲ್ಲ. ಇದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಾಗಿರುತ್ತದೆ. ಲಕ್ಷ್ಮೀದೇವಿ ಮನೆಗೆ ಯಾವತ್ತೂ ಕೂಡ ಉತ್ತರ ಹಾಗೂ ಪೂರ್ವ ದಿಕ್ಕಿನಿಂದ ಕಾಲಿಡುತ್ತಾಳೆ ಹೀಗಾಗಿ ಮನೆಯ ಈ ದಿಕ್ಕಿನ ಭಾಗಗಳನ್ನು ಅತ್ಯಂತ ಶುಚಿಯಾಗಿ ಇಟ್ಟುಕೊಳ್ಳಬೇಕು.

ಮನೆಯ ಉತ್ತರ ಹಾಗೂ ಪೂರ್ವ ದಿಕ್ಕುಗಳಲ್ಲಿ ಬೆಳಕು ಬೀರುತ್ತಿರಬೇಕು ಹಾಗೂ ಅತ್ಯಂತ ಶುಚಿಯಾಗಿರಬೇಕು ಇಲ್ಲದಿದ್ದರೆ ಮನೆಯಲ್ಲಿ ಹಣದ ಅಭಾವ ಹಾಗೂ ಮನೆಯ ಸದಸ್ಯರ ನಡುವೆ ಪರಸ್ಪರ ಆಂತರಿಕ ಜಗಳಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ದಿಕ್ಕು ಎನ್ನುವುದು ಯಮರಾಜನ ಪ್ರವೇಶವಾಗಿರುತ್ತದೆ ಹೀಗಾಗಿ ಇಲ್ಲಿ ಯಾವುದೇ ತಿಜೋರಿ ಅಥವಾ ಯಾವುದೇ ಬಾಗಿಲುಗಳನ್ನು ಕೂಡ ಇಡಬಾರದು. ನಿಮ್ಮ ಮನೆಯಲ್ಲಿ ಈ ಎಲ್ಲಾ ವಾಸ್ತುಶಾಸ್ತ್ರಗಳ ನಿಯಮಗಳನ್ನು ಅಳವಡಿಸಿಕೊಂಡರೆ ಮನೆ ಶಾಂತಿ ಸಮೃದ್ಧಿಯ ಸಂಕೇತವಾಗಿರುತ್ತದೆ.