ಅಂಬಾನಿ ಮನೆಯಲ್ಲಿ ಅಡುಗೆ ಕೆಲಸ ಮಾಡುವವರಿಗೆ ನೀಡುವ ಸಂಬಳ ಎಷ್ಟು ಗೊತ್ತೇ?? ಅಡುಗೆ ಮಾಡಲು ಇಷ್ಟೊಂದಾ?

31

ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತರಲ್ಲಿ ಹಲವಾರು ವರ್ಷಗಳಿಂದ ಮೊದಲ ಸ್ಥಾನವನ್ನು ಕಾಯ್ದುಕೊಂಡು ಬಂದಿರುವವರಲ್ಲಿ ಮುಕೇಶ್ ಅಂಬಾನಿ ಕೂಡ ಒಬ್ಬರು ಈಗ ಸದ್ಯಕ್ಕೆ ಎರಡನೇ ಸ್ಥಾನದಲ್ಲಿ ಇರಬಹುದು ಆದರೆ ಯಾವಾಗ ಬೇಕಾದರೂ ಕೂಡ ಮೊದಲ ಸ್ಥಾನಕ್ಕೆ ಬರಲು ಅವರಿಗೆ ಹೆಚ್ಚು ಹೊತ್ತು ಸಮಯ ಬೇಕಾಗಿರುವುದಿಲ್ಲ. ರಿಲಯನ್ಸ್ ಸಮೂಹ ಸಂಸ್ಥೆಗಳ ಒಡೆಯ ಆಗಿರುವ ಮುಖೇಶ್ ಅಂಬಾನಿ ಕೇವಲ ಭಾರತ ದೇಶದ ಮಾತ್ರ ಅಲ್ಲ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಕೂಡ ಕಾಣಿಸಿಕೊಂಡಂತಹ ಧೀಮಂತ ಹಾಗೂ ಬುದ್ಧಿವಂತ ಉದ್ಯಮಿ.

ಇನ್ನು ನಿಮಗೆಲ್ಲರಿಗೂ ತಿಳಿದಿರುವಾಗ ವಿಶ್ವದಲ್ಲಿ ಅತ್ಯಂತ ದುಬಾರಿ ಮನೆ ಆಗಿರುವ ಆಂಟಿಲಾ ವನ್ನು ಒಂದು ಬಿಲಿಯನ್ ಡಾಲರ್ ಖರ್ಚು ಮಾಡಿ ನಿರ್ಮಿಸಿದ್ದಾರೆ ಇದು ಇಡೀ ವಿಶ್ವದಲ್ಲಿ ಅತ್ಯಂತ ದುಬಾರಿ ಮನೆಯೆಂಬುದು ಕೂಡ ನಿಮಗೆ ತಿಳಿದಿರುವ ವಿಚಾರ. ಇನ್ನು ಇವರ ಮನೆಯಲ್ಲಿ ಕೆಲಸ ಮಾಡುವವರಿಗೆ ಅದರಲ್ಲೂ ವಿಶೇಷವಾಗಿ ಇವರ ಮನೆಯ ಅಡಿಗೆ ಮಾಡುವವರಿಗೆ ಎಷ್ಟು ಸಂಬಳ ಇರಬಹುದು ಎಂಬ ಕುತೂಹಲ ನಿಮಗೆ ಇರಬಹುದು. ಈಗ ಈ ವಿಚಾರವೂ ಕೂಡ ತಿಳಿದುಬಂದಿದ್ದು ಮುಕೇಶ್ ಅಂಬಾನಿ ಮನೆಯ ಅಡುಗೆ ಮಾಡುವವರಿಗೆ ಎಷ್ಟು ಸಂಭಾವನೆ ಸಿಗಬಹುದೆಂಬುದನ್ನು ತಿಳಿಸುತ್ತೇವೆ ಬನ್ನಿ.

ಹೌದು ಗೆಳೆಯರೇ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಅಡುಗೆ ಕೆಲಸ ಸಿಗುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ. ಅದಕ್ಕಾಗಿ ಹಲವಾರು ಟೆಸ್ಟ್ ಗಳನ್ನು ಕೂಡ ಪಾಸ್ ಆಗಬೇಕಾಗುತ್ತದೆ. ಸದ್ಯಕ್ಕೆ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಅಡುಗೆ ಮಾಡುತ್ತಿರುವ ವ್ಯಕ್ತಿಗೆ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳ ಮತ್ತು ಅವರಿಗೆ ಎಲ್ಲಾ ವಿಧದ ಸೌಲಭ್ಯಗಳನ್ನು ಕೂಡ ಮುಖೇಶ್ ಅಂಬಾನಿ ಅವರಿಂದಲೇ ಸಿಗುತ್ತದೆ. ಅಡುಗೆ ಮಾಡುವವರ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಮನೆ ಸೇರಿದಂತೆ ಹಲವಾರು ಆರ್ಥಿಕ ಹಾಗೂ ಬೇರೆ ರೀತಿಯ ಸಹಕಾರಗಳು ಕೂಡ ಅಡುಗೆ ಭಟ್ಟರಿಗೆ ಸಿಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಸಂಭಾವನೆ ಮಾತ್ರವಲ್ಲದೆ ಅವರ ಕುಟುಂಬದವರಿಗೂ ಕೂಡ ನೆರವಾಗುವ ಮುಕೇಶ್ ಅಂಬಾನಿ ಅವರ ವ್ಯಕ್ತಿತ್ವ ನಿಜಕ್ಕೂ ಕೂಡ ಗೌರವಾರ್ಹವಾದದ್ದು.