ರಶ್ಮಿಕಾ ಜೊತೆ ತನ್ನ ಸಂಬಂಧ ಹೇಗಿದೆ ಎಂದು ವಿವರಣೆ ನೀಡಿದ ವಿಜಯ್: ರಶ್ಮಿಕಾ ನನ್ನ ಡಾರ್ಲಿಂಗ್, ಎಂದು ಹೇಳಿದ್ದೆ ಬೇರೆ.

94

ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಶ್ಮಿಕ ಮಂದಣ್ಣ ಕನ್ನಡ ಚಿತ್ರರಂಗದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭ ಮಾಡಿದರು ಕೂಡ ಅವರಿಗೆ ದೊಡ್ಡ ಮಟ್ಟದ ಗೆಲುವನ್ನು ತಂದು ಕೊಟ್ಟಿದ್ದು ತೆಲುಗು ಚಿತ್ರರಂಗ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅದರಲ್ಲೂ ವಿಜಯ್ ದೇವರಕೊಂಡ ಅವರ ಜೊತೆಗೆ ನಟಿಸಿರುವ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾಗಳು ದೊಡ್ಡ ಮಟ್ಟದ ಗೆಲುವನ್ನು ಅವರ ಸಿನಿಮಾ ಜೀವನದಲ್ಲಿ ನೀಡಿವೆ ಎಂದು ಹೇಳಬಹುದು.

ಹೌದು ಗೆಳೆಯರೇ ಈ ಸಿನಿಮಾಗಳಲ್ಲಿ ಜೊತೆಜೊತೆಯಾಗಿ ನಟಿಸಿದ ದಿನಗಳಿಂದಲೂ ಕೂಡ ಇವರಿಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದಾರೆ ಆದರೆ ಅಂದಿನಿಂದಲೂ ಕೂಡ ಇವರಿಬ್ಬರು ನಾವಿಬ್ಬರು ಕೇವಲ ಉತ್ತಮ ಸ್ನೇಹಿತರು ಮಾತ್ರ ಎಂಬುದಾಗಿ ಹೇಳಿಕೊಂಡು ಬರುತ್ತಲೇ ಇದ್ದಾರೆ. ಆದರೆ ಹೀಗೆ ಹೇಳಿದ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಸಿನಿಮಾ ಪ್ರೇಕ್ಷಕರು ಇವರ ಹೇಳಿಕೆಯನ್ನು ಅನುಮಾನ ದೃಷ್ಟಿಯಿಂದ ನೋಡುತ್ತಲೇ ಬಂದಿದ್ದಾರೆ. ಯಾಕೆಂದರೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿಕೊಳ್ಳಲು ಹಲವಾರು ಸಾಕ್ಷಾಧಾರಗಳು ಈಗಾಗಲೇ ಕ್ಯಾಮರಾ ಕಣ್ಣಿಗೆ ಬಿದ್ದಿರುವುದನ್ನು ನೀವು ನೋಡಿರುತ್ತೀರಿ ಇಲ್ಲವೇ ಕೇಳಿರುತ್ತೀರಿ. ಈ ಬಾರಿಯ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ವಿಜಯ್ ದೇವರುಕೊಂಡ ಬಂದಿದ್ದು ಇಲ್ಲಿಯೂ ಕೂಡ ಅದೇ ರೀತಿಯ ವಿಚಾರಗಳು ಮತ್ತೆ ಹೋಗಿ ಎದ್ದು ನಿಂತಿವೆ. ಹೌದು ಗೆಳೆಯರೇ ಕಾಫಿ ವಿಥ್ ಕರಣ್ ಕಾರ್ಯ ಕ್ರಮದಲ್ಲಿ ರಶ್ಮಿಕಾ ಅವರ ಜೊತೆಗಿನ ಸಂಬಂಧದ ಕುರಿತಂತೆ ಪ್ರಶ್ನೆ ಕೇಳಿ ಬಂದಿತ್ತು.

ಇದಕ್ಕಾಗಿ ವಿಜಯ್ ದೇವರಕೊಂಡ ಇಬ್ಬರೂ ಕೂಡ ತಮ್ಮ ಆರಂಭಿಕ ದಿನಗಳ ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದೇವೆ ಅವಳು ಒಬ್ಬ ಡಾರ್ಲಿಂಗ್. ನಮ್ಮಿಬ್ಬರ ಸ್ನೇಹ ಸಂಬಂಧ ಅತ್ಯಂತ ಗಾಢವಾದದ್ದು ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಂಬಂಧ ಇಲ್ಲ ಎನ್ನುವುದಾಗಿ ವಿಜಯ್ ದೇವರ ಕೊಂಡ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ತಾವು ಯಾಕೆ ತಮ್ಮ ಸಂಬಂಧಗಳ ಕುರಿತಂತೆ ಮುಕ್ತವಾಗಿ ಮಾತನಾಡುವುದಿಲ್ಲ ಎಂಬುದನ್ನು ಕೂಡ ಹೇಳಿದ್ದಾರೆ. ನನ್ನನ್ನು ಇಷ್ಟಪಡುವ ಹಲವಾರು ಅಭಿಮಾನಿಗಳಿಗೆ ನಾನು ಯಾವುದಾದರೂ ಒಂದು ವಿಚಾರವನ್ನು ಹೇಳಿ ಅವರ ಮನಸ್ಸಿಗೆ ನೋವು ಪಡಿಸುವ ಕಾರ್ಯಕ್ಕೆ ನಾನು ಕೈ ಹಾಕುವುದಿಲ್ಲ ಎಂಬುದಾಗಿ ಇಲ್ಲಿ ಹೇಳಿದ್ದಾರೆ.