ನೀವು ಇದೊಂದು ಸಸ್ಯ ಬಳಸಿ, ಶನಿ ದೇವರ ಕೃಪೆ ಪಡೆದು ಸುಲಭವಾಗಿ ಕಷ್ಟದಿಂದ ಪಾರಾಗಬಹುದು. ಯಾವ ಸಸ್ಯ ಗೊತ್ತೇ??

27

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಕೆಲವೊಂದು ಕಾಲಘಟ್ಟದಲ್ಲಿ ಸಹಿಸಲಾಗದಂತಹ ದುಃಖದ ಮಳೆಯೇ ಬೀಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವ ಕೆಲವರ ಮೇಲೆ ಕೋಪಗೊಳ್ಳುವ ಕಾರಣದಿಂದಾಗಿ ಅವರ ಜೀವನ ಕಷ್ಟದಿಂದ ನರಕ ಆಗುವಂತೆ ಮಾಡುತ್ತಾನೆ ಎಂಬುದಾಗಿ ಹೇಳಲಾಗುತ್ತದೆ. ಇನ್ನು ಶನಿದೇವನನ್ನು ಪ್ರಸನ್ನಗೊಳಿಸಲು ಕೂಡ ಕೆಲವೊಂದು ವಿಧಾನಗಳಿವೆ ಅದರಲ್ಲೂ ಕೂಡ ಒಂದು ಸಸ್ಯದ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ರಾವಣನ ವಿರುದ್ಧ ಶ್ರೀರಾಮ ವಿಜಯ ಸಾಧಿಸಿದಾಗ ತನ್ನ ಕುಟುಂಬದೊಡನೆ ಈ ವೃಕ್ಷದ ಪೂಜೆಯನ್ನು ಮಾಡಿದ್ದ.

ನವರಾತ್ರಿಯ ಸಂದರ್ಭದಲ್ಲಿ ದುರ್ಗಾಮಾತೆಯನ್ನು ಈ ವೃಕ್ಷದ ಎಲೆಗಳಿಂದ ಪೂಜೆ ಕೂಡ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಶಮಿ ವ್ರಕ್ಷದ ಕುರಿತಂತೆ. ಮಹಾಭಾರತದ ಸಂದರ್ಭದಲ್ಲಿ ಕೂಡ ಪಾಂಡವರು ತಮ್ಮ ಶಾಸ್ತ್ರಗಳನ್ನು ಶಮಿ ವೃಕ್ಷದಲ್ಲಿ ಬಚ್ಚಿಟ್ಟಿದ್ದರು ಎಂಬುದಾಗಿ ತಿಳಿದು ಬಂದಿದ್ದು ಶಮಿ ವೃಕ್ಷದ ಎಲೆಯಲ್ಲಿ ಲಕ್ಷ್ಮಿ ದೇವಿ ವಾಸವಾಗಿದ್ದಾಳೆ ಎಂಬುದಾಗಿ ಕೂಡ ಶಾಸ್ತ್ರಗಳಲ್ಲಿ ಪ್ರತೀತಿ ಇದೆ. ಕೇವಲ ಇಷ್ಟು ಮಾತ್ರವಲ್ಲದೆ ಶನಿ ದೇವನಿಗೂ ಕೂಡ ಪ್ರಿಯವಾಗಿರುವ ಈ ವೃಕ್ಷವನ್ನು ಪುರಾಣಗಳಲ್ಲಿ ಅತ್ಯಂತ ಪವಿತ್ರವಾದ ವೃಕ್ಷಗಳಲ್ಲಿ ಒಂದು ಎಂಬುದಾಗಿ ಸ್ಥಾನವನ್ನು ನೀಡಲಾಗುತ್ತಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನ ಕೆಟ್ಟ ದೃಷ್ಟಿಯಿಂದ ಪಾರಾಗಲು ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಶಮಿ ವೃಕ್ಷವನ್ನು ನೆಟ್ಟು ದಿನಾಲು ಬೆಳಗ್ಗೆ ಬೇಗ ಎದ್ದು ಅದರ ಪೂಜೆಯನ್ನು ಮಾಡಬೇಕು ಇದರಿಂದಾಗಿ ಶನಿದೇವನ ಕೆಟ್ಟ ದೃಷ್ಟಿಯಿಂದ ದೂರಾಗಿ ಆತನ ಕೃಪೆಗೆ ಒಳಗಾಗಲಿದ್ದೀರಿ ಎಂಬುದಾಗಿ ತಿಳಿದು ಬಂದಿದೆ. ಇದನ್ನು ದೈನಂದಿನ ವಾಗಿ ನಿರ್ವಹಿಸುತ್ತಾ ಬಂದರೆ ಜೀವನದ ಎಲ್ಲಾ ಕಷ್ಟಗಳು ನೀರಿನಂತೆ ಕರಗಿ ಹೋಗುತ್ತವೆ