ಸ್ನೇಹಿತನನ್ನು ಮನೆಯ ಬಾಡಿಗೆಗೆ ಕರೆತಂದು, ಈತ ಮಾಡಿದ್ದೇನು ಗೊತ್ತೇ?? ಕೊನೆಗೆ ಅದೇ ಸ್ನೇಹಿತ ಈತನನ್ನು ಏನು ಮಾಡಿದ್ದಾನೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ಬೇಡದ ಸಂಬಂಧಗಳನ್ನು ಇಟ್ಟುಕೊಂಡರೆ ಏನಾಗುತ್ತದೆ ಎಂಬುದನ್ನು ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸುದ್ದಿಗಳನ್ನು ಕೇಳಿದರೆ ನಿಮಗೆ ಗೊತ್ತಾಗಿರಬಹುದು. ಇಂದು ಕೂಡ ಇದೇ ರೀತಿಯ ಒಂದು ವಿಚಾರದ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ಶ್ರೀರಂಗಪಟ್ಟಣದ ಬೆಳಗೊಳದಲ್ಲಿ 32 ವರ್ಷದ ರವಿ ಎಂಬಾತನನ್ನು ಆತನ ಗೆಳೆಯ ಶರತ್ ಎನ್ನುವವನು ಕತ್ತು ಸೀಳಿ ಹಲ್ಲೆ ಮಾಡಿ ಮುಗಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಅವ್ರಿಬ್ರು ಹಲವಾರು ವರ್ಷಗಳ ಸ್ನೇಹಿತರಾಗಿದ್ದರು ಕೂಡ ಯಾಕೆ ಹೀಗೆ ನಡೆಯಿತು ಎಂಬುದನ್ನು ತಿಳಿಯೋಣ ಬನ್ನಿ. ಅದರಲ್ಲೂ ಇಬ್ಬರು ಎಷ್ಟು ಮಟ್ಟಿಗೆ ಕ್ಲೋಸ್ ಎಂದರೆ ರವಿ ತನ್ನ ಮನೆಯ ಪಕ್ಕದ ಮನೆಯನ್ನೇ ಶರತ್ ಗೆ ಎಷ್ಟಾದರೂ ಬಾಡಿಗೆ ಕೊಟ್ಟು ಇಲ್ಲೇ ಇದ್ದುಬಿಡು ಎಂದು ಹೇಳಿದ್ದ. ಇನ್ನು ಶರತ್ ತಂದೆ ತಾಯಿ ಇಲ್ಲದ ಕಾರಣ ತನ್ನ ಸೋದರ ಮಾವ ಹಾಗೂ ಹೆಂಡತಿಯ ಜೊತೆಗೆ ವಾಸವಾಗಿದ್ದ. ಪಕ್ಕದ ಮನೆಗೆ ಶರತ್ ತನ್ನ ಕುಟುಂಬದ ಜೊತೆಗೆ ಬರುತ್ತಿದ್ದಂತೆ ರವಿ ಶರತ್ ನ ಸೋದರತ್ತೆಯಾಗಿರುವ ಶೋಭಾ ಮೇಲೆ ಕಣ್ಣು ಹಾಕಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಇಬ್ಬರೂ ಕೂಡ ಯಾರು ಇಲ್ಲದಿದ್ದ ಸಂದರ್ಭದಲ್ಲಿ ಪಲ್ಲಂಗದಾಟವನ್ನು ಆಡುತ್ತಿದ್ದರಂತೆ ಇದನ್ನು ತಿಳಿಯುತ್ತಿದ್ದಂತೆ ಶರತ್ ರವಿ ಮೇಲೆ ಆಕ್ರೋಶವನ್ನು ಹೊರ ವ್ಯಕ್ತಪಡಿಸಿದ್ದಾನೆ.

ಅಂದು ರಾತ್ರಿ ಶೋಭಾ ಜೊತೆಗೆ ರವಿ ಜಗಳ ಮಾಡಿಕೊಂಡು ಸವಿತಾ ಬಾರ್ ಗೆ ಹೋಗಿದ್ದಾನೆ. ರವಿ ಬಾರ್ ನಲ್ಲಿ ಇರುವ ವಿಚಾರವನ್ನು ತಿಳಿದು ಶರತ್ ಅಸ್ತ್ರ ವನ್ನು ತನ್ನ ಜೊತೆಗೆ ತೆಗೆದುಕೊಂಡು ಬಂದಿದ್ದ. ಬಾರ್ ನಿಂದ ಹೊರ ಬರುತ್ತಿದ್ದಂತೆ ಕಥೆ ಮುಗಿಸಿ ಓಡಿ ಹೋಗಿದ್ದಾನೆ. ರವಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಅಕ್ರ’ಮ ಸಂಬಂಧ ಕೊನೆಗೆ ದುರಂತದಲ್ಲಿಯೇ ಅಂತ್ಯಗೊಳ್ಳುವುದು ಎಂಬುದು ಮತ್ತೊಮ್ಮೆ ಸಾವಿತಾಗಿದೆ. ಶರತ್ ಗಾಗಿ ಪೊಲೀಸರು ಈಗಾಗಲೇ ಬಲೆ ಬೀಸಿದ್ದು ಈ ಪ್ರಕರಣ ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.