ರಶ್ಮಿಕಾ ಜೊತೆ ನಟನೆ ಬಳಿಕ, ಇನ್ನು ಮುಂದೆ ಈ ರೀತಿ ಸಿನಿಮಾ ಮಾಡುವುದಿಲ್ಲ ಎಂದದ್ದು ಯಾಕೆ ಗೊತ್ತೇ?? ಸ್ಟೇಜ್ ಮೇಲೆ ಶಾಕ್ ನೀಡಿದ ನಟ ದುಲ್ಕರ್.

47

ನಮಸ್ಕಾರ ಸ್ನೇಹಿತರೆ ನಮ್ಮ ಕೊಡಗಿನ ಕುವರಿ ಆಗಿರುವ ಕಿರಿಕ್ ಪಾರ್ಟಿ ಚೆಲುವೆ ಆಗಿರುವ ರಶ್ಮಿಕ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಈಗ ಭಾರತೀಯ ಚಿತ್ರರಂಗದ ಪ್ರಮುಖ ಎಲ್ಲಾ ಭಾಷೆಗಳಲ್ಲಿಯೂ ಕೂಡ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ. ಇನ್ನು ಸದ್ಯದ ಮಟ್ಟಿಗೆ ಹೇಳುವುದಾದರೆ ನಟಿ ರಶ್ಮಿಕಾ ಮಂದಣ್ಣ ಮಲಯಾಳಂ ಚಿತ್ರರಂಗದ ಯುವ ಉದಯೋನ್ಮುಖ ಸ್ಟಾರ್ ನಟ ಆಗಿರುವ ದುಲ್ಕರ್ ಸಲ್ಮಾನ್ ನಟನೆಯ ಸೀತಾ ರಾಮಂ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ನಾಯಕಿಯಾಗಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಇದೇ ಆಗಸ್ಟ್ 5ರಂದು ಈ ಸಿನಿಮಾ ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಚಿತ್ರತಂಡ ತೊಡಗಿದೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾದ ಕುರಿತಂತೆ ಒಂದು ಶಾಕಿಂಗ್ ಹೇಳಿಕೆಯನ್ನು ದುಲ್ಕರ್ ಸಲ್ಮಾನ್ ಹೇಳಿದ್ದಾರೆ. ಹೌದು ಗೆಳೆಯರೇ ಈ ತರಹದ ಸಿನಿಮಾದಲ್ಲಿ ಇನ್ನು ಮುಂದೆ ತಾನು ನಟಿಸುವುದಿಲ್ಲ ಎಂಬುದಾಗಿ ದುಲ್ಕರ್ ಸಲ್ಮಾನ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಹೇಳಿದ್ದಾರೆ.

ಇದೇನಪ್ಪ ರಶ್ಮಿಕ ಮಂದಣ್ಣ ಇದ್ದಾರೆ ಎನ್ನುವ ಕಾರಣಕ್ಕಾಗಿ ಹೀಗೆ ಎಂದರ ಎನ್ನುವುದಾಗಿ ನೆಟ್ಟಿಗರು ತಮಾಷೆ ಮಾಡಿಕೊಂಡಿದ್ದಾರೆ. ಆದರೆ ನಿಜವಾದ ಕಾರಣ ಏನೆಂದರೆ ದುಲ್ಕರ್ ಸಲ್ಮಾನ್ ರವರು ಯಾವುದೇ ಒಂದೇ ರೀತಿಯ ಸಿನಿಮಾ ಗಳನ್ನು ಮಾಡುವುದಿಲ್ಲ ಹೀಗಾಗಿ ಇನ್ನು ಮುಂದೆ ಲವ್ ಅಥವಾ ರೊಮ್ಯಾಂಟಿಕ್ ಮಾದರಿಯ ಸಿನಿಮಾ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದು ಇದೇ ಅಂದರೆ ಸೀತಾ ರಾಮಂ ಚಿತ್ರವೇ ಲವ್ ಸ್ಟೋರಿ ಸಿನಿಮಾಗಳಲ್ಲಿ ಕೊನೆ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.