ಕ್ರಾಂತಿ ಸಿನಿಮಾಗಾಗಿ ಎಲ್ಲಾ ಮಾಧ್ಯಮಗಳಿಗೂ ಖಡಕ್ ತಿರುಗೇಟು ಕೊಟ್ಟ ದರ್ಶನ್, ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟನ ಮಗನಾಗಿದ್ದರೂ ಕೂಡ ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡಮಟ್ಟದ ಹೆಸರು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟ. ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎಂಬುದಾಗಿ ಕರೆಯಲ್ಪಡುತ್ತಾರೆ ಆದರೆ ಒಂದು ಕಾಲದಲ್ಲಿ ಅವರಿಗೆ ಅವಮಾನಗಳ ಮೇಲೆ ಅವಮಾನವನ್ನು ಚಿತ್ರರಂಗದ ತೆಲುಗು ಸೆಲೆಬ್ರಿಟಿಗಳು ಮಾಡಿದ್ದರು ಕೂಡ ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿ ಎಂದು ಕಷ್ಟ ಹಾಗೂ ಅವಮಾನಗಳನ್ನು ಮೆಟ್ಟಿನಿಂತು ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಆಗಿ ಎದ್ದು ನಿಂತಿದ್ದಾರೆ.
ಇನ್ನು ನಿಮಗೆಲ್ಲ ತಿಳಿದಿರಬಹುದು ಹಲವಾರು ಬಾರಿ d-boss ರವರು ಮಾಧ್ಯಮಗಳಲ್ಲಿ ವಿವಾದಾತ್ಮಕ ವಿಚಾರಗಳಿಗಾಗಿ ಸುದ್ದಿಯಾಗಿದ್ದು ಕೂಡ ಉಂಟು. ಇತ್ತೀಚಿನ ದಿನಗಳಲ್ಲಿ ಡಿ ಬಾಸ್ ರವರು ಮಾಧ್ಯಮದವರಿಗೆ ಬೈದಿದ್ದರು ಎನ್ನುವ ಆಡಿಯೋ ವೈರಲ್ ಆಗಿ ಎಲ್ಲಾ ಮಾಧ್ಯಮದವರು ಸೇರಿಕೊಂಡು ಡಿ ಬಾಸ್ ರವರ ಸುದ್ದಿಯನ್ನು ತಮ್ಮ ಚಾನೆಲ್ಗಳಲ್ಲಿ ತೋರಿಸಬಾರದು ಎನ್ನುವ ಅಘೋಷಿತ ಬ್ಯಾನ್ ಅನ್ನು ವಿಧಿಸಿದ್ದರು. ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ ಡಿ ಬಾಸ್ ಅಭಿಮಾನಿಗಳು ತಮ್ಮ ಆರಾಧ್ಯ ದೈವ ನ ಫಿಲಂ ಅನ್ನು ಯಾವ ನ್ಯೂಸ್ ಚಾನೆಲ್ ಗಳು ಪ್ರಮೋಷನ್ ಮಾಡಬೇಕಾಗಿಲ್ಲ ನಾವೇ ನಮ್ಮ ಸಿನಿಮಾವನ್ನು ಪ್ರಮೋಷನ್ ಮಾಡುತ್ತೇವೆ ಎಂಬುದಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.

ಇದಕ್ಕೆ ಡಿ ಬಾಸ್ ರವರು ಪ್ರತಿಕ್ರಿಯೆ ನೀಡುತ್ತಾ ನಾ ನಡೆಯುತ್ತಿರುವ ಹಾದಿಯಲ್ಲಿ ನನಗೆ ಸಾತ್ ನೀಡುತ್ತಿರುವ ಎಲ್ಲಾ ಅಭಿಮಾನಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ ನಿಮ್ಮ ಬೆಂಬಲ ಹಾಗೂ ಪ್ರೀತಿ ಗೌರವಗಳನ್ನು ವರ್ಣಿಸಲು ಪದಗಳೇ ಸಾಲದು ಎಂಬುದಾಗಿ ತಮ್ಮ ಅಭಿಮಾನಿಗಳ ಅಭಿಮಾನಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ ಮಾಧ್ಯಮಗಳು ಇಲ್ಲದಿದ್ದರೂ ಕೂಡ ಕೇವಲ ಅಭಿಮಾನಿಗಳ ಅಭಿಮಾನವೇ ಸಿನಿಮಾದ ಗೆಲುವಿಗೆ ಮೂಲ ದಾರಿಯಾಗಲಿದೆ ಎಂಬುದಾಗಿ ಡಿ ಬಾಸ್ ಪರೋಕ್ಷವಾಗಿ ಹೇಳಿದ್ದಾರೆ ಎಂಬುದನ್ನು ಇಲ್ಲಿ ನಾವು ಗಮನಿಸಬಹುದಾಗಿದೆ.