ಕೊನೆಗೂ ಫ್ಯಾನ್ಸ್ ಗೆ ಸಿಕ್ತು ಉತ್ತರ: ಎಂಜಾಯ್ ಮಾಡಲು, ಯಶ್ ಹಾಗೂ ರಾಧಿಕಾ ರವರು ಹೋಗಿರುವುದು ಯಾವ ದೇಶಕ್ಕೆ ಗೊತ್ತೇ??

17

ನಮಸ್ಕಾರ ಸ್ನೇಹಿತರೆ ಕನ್ನಡಚಿತ್ರರಂಗದಲ್ಲಿ ಇದುವರೆಗೂ ಹಲವಾರು ಜೋಡಿಗಳು ಪ್ರೀತಿಸಿ ಮದುವೆಯಾಗಿ ಆದರ್ಶ ದಾಂಪತ್ಯ ಜೀವನ ವನ್ನು ನಡೆಸಿರುವ ಉದಾಹರಣೆಗಳು ಇವೆ. ಅದರಲ್ಲೂ ಇತ್ತೀಚೆಗೆ ಎಲ್ಲರೂ ಮೆಚ್ಚಿರುವ ಜೋಡಿ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ಎಂದರೆ ಅತಿಶಯೋಕ್ತಿಯಲ್ಲ. ಚಿತ್ರರಂಗದಲ್ಲಿದ್ದರೂ ಕೂಡ ತಮ್ಮ ಪ್ರೀತಿಯ ವಿಚಾರ ಎಲ್ಲೂ ಕೂಡ ಬಹಿರಂಗಪಡಿಸದೆ ಸಿನಿಮಾ ಕ್ಷೇತ್ರದಲ್ಲಿ ಒಂದು ಹಂತಕ್ಕೆ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ ನಂತರ ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾದವರು ಇವರಿಬ್ಬರು.

ಆಗಾಗ ರಾಧಿಕಾ ಪಂಡಿತ್ ರವರು ತಮ್ಮಿಬ್ಬರ ಹಾಗೂ ಕುಟುಂಬದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಇಬ್ಬರು ಕೂಡ ವಿದೇಶಕ್ಕೆ ಪ್ರವಾಸ ಹೋಗಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಎಲ್ಲಾ ಕಡೆ ಈ ಫೋಟೋ ವೈರಲ್ ಆಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಇಬ್ಬರೂ ಕೂಡ ಮಾಲ್ಡಿವ್ಸ್ ಗೆ ಪ್ರವಾಸಕ್ಕೆ ಹೋಗಿದ್ದರು. ಹೀಗಾಗಿ ಈ ಫೋಟೋಗಳಲ್ಲಿ ಇವರಲ್ಲಿ ಹೋಗಿದ್ದಾರೆ ಎಂಬುದಾಗಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು ಕೊನೆಗೂ ಉತ್ತರ ಸಿಕ್ಕಿದೆ.

ಹೌದು ಗೆಳೆಯರೇ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಇಬ್ಬರು ಕೂಡ ಪ್ರವಾಸಕ್ಕೆ ಹೋಗಿರುವುದು ಸ್ಲೋವೇನಿಯಾ ಗೆ. ಹೌದು ಗೆಳೆಯರೇ ಇಬ್ಬರೂ ಕೂಡ ಈ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡಿದ್ದು ಫೋಟೋಗಳಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಫೋಟೋವನ್ನು ನೋಡಿ ಮೇಡ್ ಫಾರ್ ಈಚ್ ಅದರ್ ಎನ್ನುವುದಾಗಿ ಕಾಮೆಂಟ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ನಂತರ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.