ನೀವು ಯಾವಾಗ ಬೇಕಾದ್ರು ಎಷ್ಟು ಬೇಕಾದ್ರು ನಿದ್ದೆ ಮಾಡಿ, ಆದರೆ ಅಪ್ಪಿತಪ್ಪಿಯೂ ಕೂಡ ಈ ಸಮಯದಲ್ಲಿ ಮಲಗಬೇಡಿ, ದಟ್ಟ ದಾರಿದ್ರ್ಯ ಸುತ್ತುಕೊಳ್ಳುತ್ತೆ

417

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನುಷ್ಯನು ಮಾಡುವ ಕೆಲವೊಂದು ಕೆಲಸಗಳು ಕೂಡ ಆತನ ಅದೃಷ್ಟ ಹಾಗೂ ದುರಾದೃಷ್ಟ ಗಳನ್ನು ನಿರ್ಧರಿಸುತ್ತದೆ ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಇನ್ನು ನಾವು ಹೇಳುತ್ತಿರುವ ವಿವರಗಳು ಕೂಡ ಅದಕ್ಕೆ ಸಂಬಂಧಪಟ್ಟಿದ್ದಾಗಿದೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಬ್ಬ ಕೆಲಸ ಮಾಡಿ ಬಂದ ವ್ಯಕ್ತಿಗೆ ಆಯಾಸವಾದಾಗ ನಿದ್ರೆ ಎನ್ನುವುದು ಅತಿ ಮುಖ್ಯವಾಗಿರುತ್ತದೆ. ಒಬ್ಬ ವ್ಯಕ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಸರಿಯಾದ ಸಮಯದ ನಿದ್ರೆ ಅತ್ಯಗತ್ಯವಾಗಿರುತ್ತದೆ.

ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಂದು ಸಮಯಗಳಲ್ಲಿ ನಿದ್ದೆ ಮಾಡಿದರೆ ಅದರಿಂದ ಅಪಾಯ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅದರಲ್ಲೂ ಧಾರ್ಮಿಕ ನಂಬಿಕೆಗಳಲ್ಲಿ ಸೂರ್ಯಾಸ್ತದ ಸಂದರ್ಭದಲ್ಲಿ ದೇವತೆಗಳು ಭೂಲೋಕ ಸಂಚಾರಕ್ಕೆ ಹೊರಟಿರುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಅಂದರೆ ಸೂರ್ಯಸ್ತದ ಸಂದರ್ಭದಲ್ಲಿ ಯಾರು ಕೂಡ ಮಲಗಬಾರದು. ಮಲಗಿದ್ದಾರೆ ಅವರ ಜೀವನದಲ್ಲಿ ದುರದೃಷ್ಟ ಪ್ರಾರಂಭವಾಗುತ್ತದೆ. ಇಷ್ಟು ಮಾತ್ರವಲ್ಲದೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದೇಳುವ ಗುಣ ತುಂಬಾ ಒಳ್ಳೆಯದು ಇದರಿಂದ ಅಭಿವೃದ್ಧಿ ಕಾಣುತ್ತಾರೆ.

ಆದರೆ ಸೂರ್ಯ ಉದಯಿಸಿದ ನಂತರವೂ ಕೂಡ ಹಲವಾರು ಸಮಯಗಳ ಕಾಲ ನಿದ್ರೆ ಮಾಡುವವರಿಗೆ ಲಕ್ಷ್ಮಿ ಮುನಿಯುತ್ತಾಳೆ ಎಂಬುದಾಗಿ ಹೇಳಲಾಗುತ್ತದೆ. ಬ್ರಾಹ್ಮಿ ಮೂರ್ತ ಎಂದರೆ ದೇವತೆಗಳು ಸಭೆ ನಡೆಸುವ ಸಂದರ್ಭ ಈ ಸಂದರ್ಭ ಎದ್ದೇಳಲು ಅತ್ಯುತ್ತಮ ಸಮಯ ಎಂದು ಭಾವಿಸಲಾಗುತ್ತದೆ. ಸೂರ್ಯೋದಯದ ನಂತರ ಇನ್ನು ಕೂಡ ಮಲಗಿದ್ದರೆ ಗಳಿಸಿರುವ ಪುಣ್ಯ ಅಂಶಗಳು ನಷ್ಟವಾಗುತ್ತದೆ ಎಂಬುದಾಗಿ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಿದೆ. ನೀವು ಕೂಡ ಇಂತಹ ಪದ್ಧತಿಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.