ಬಿಗ್ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಡೆಯಿಂದ ಬಂತು ಸಿಹಿ ಸುದ್ದಿ, ಕುಣಿದು ಕುಪ್ಪಳಿಸಿದ ಅಭಿಮಾನಿಗಳು. ಏನಂತೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರಾಂತಿ ಸಿನಿಮಾ ಸಾಕಷ್ಟು ಸುದ್ದಿಯಲ್ಲಿದೆ ಎಂದು ಹೇಳಬಹುದಾಗಿದೆ. ಮಾಧ್ಯಮಗಳು ಸಿನಿಮಾದ ಕುರಿತು ಅಷ್ಟೊಂದು ಪ್ರಚಾರ ನೀಡುತ್ತಿಲ್ಲ ವಾದರೂ ಕೂಡ ಅಭಿಮಾನಿಗಳು ಸಿನಿಮಾದ ಕುರಿತಂತೆ ತಾವೇ ಸ್ವತಹ ಪ್ರಚಾರ ನೀಡುತ್ತಿರುವುದು ನಿಜಕ್ಕೂ ಕೂಡ ಒಳ್ಳೆಯ ಬೆಳವಣಿಗೆಯಾಗಿದೆ. ಈಗಾಗಲೇ ಅಭಿಮಾನಿಗಳು ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಸಿನಿಮಾ ಶಿಕ್ಷಣದಲ್ಲಿ ನಡೆಯುವ ಅನ್ಯಾಯದ ಕುರಿತಂತೆ ಅದರ ವಿರುದ್ಧ ಧ್ವನಿಯೆತ್ತುವ ನಾಯಕನೊಬ್ಬನ ಕಥೆ ಎಂಬುದಾಗಿ ತಿಳಿದುಬಂದಿದೆ. ಯಜಮಾನ ಚಿತ್ರದ ಯಶಸ್ಸಿನ ನಂತರ ಅದೇ ಚಿತ್ರತಂಡ ಕ್ರಾಂತಿ ಸಿನಿಮಾವನ್ನು ನಿರ್ಮಿಸುತ್ತಿದೆ. ಡಿ ಬಾಸ್ ರವರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡರೆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಸುಮಲತಾ ಅಂಬರೀಶ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶನವನ್ನು ವಿ ಹರಿಕೃಷ್ಣ ಹಾಗೂ ನಿರ್ಮಾಣವನ್ನು ಶೈಲಜಾ ನಾಗ್ ವಹಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಡಿಬಾಸ್ ವಿದೇಶಿ ಭಾರತೀಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಸಿನಿಮಾದ ಡಬ್ಬಿಂಗ್ ಕಾರ್ಯವನ್ನು ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿಗಷ್ಟೇ ಚಿತ್ರತಂಡ ಪೋಲೆಂಡ್ ದೇಶಕ್ಕೆ ಹೋಗಿ ಸಾಂಗ್ ಚಿತ್ರೀಕರಣವನ್ನು ಮುಗಿಸಿಕೊಂಡು ಬಂದಿತ್ತು. ಇನ್ನು ಚಿತ್ರದ ಕುರಿತಂತೆ ಅಭಿಮಾನಿಗಳಿಗೆ ಇನ್ನೊಂದು ಸಂತೋಷದ ಸುದ್ದಿ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸಿನಿಮಾ ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಮುಂದಿನ ಸಿನಿಮಾ ದಲ್ಲಿ ಡಿ ಬಾಸ್ ತರುಣ್ ಸುಧೀರ್ ನಿರ್ದೇಶನದಲ್ಲಿ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿಬರುತ್ತಿವೆ.