ಎಂದಾದರೂ ನನ್ನ ಜೀವನ ಚರಿತ್ರೆ ಸಿನಿಮಾ ಮಾಡಿದರೆ ಭಾರತ ಈ ನಟ ಹೀರೋ ಆಗಲಿ ಎಂದ ಪಾಕ್ ಶೋಯೆಬ್ ಅಕ್ತರ್. ಇಬ್ಬರಿಗೂ ಸರಿಯಾಗಿದೆ ಎಂದ ನೆಟ್ಟಿಗರು. ಆಯ್ಕೆ ಮಾಡಿದ ಹೀರೋ ಯಾರು ಗೊತ್ತೇ?

39

ನಮಸ್ಕಾರ ಸ್ನೇಹಿತರೆ ವಿಶ್ವಕ್ರಿಕೆಟಿನಲ್ಲಿ ಅತ್ಯಂತ ವೇಗದ ಕ್ರಿಕೆಟರ್ ಯಾರು ಎಂಬುದಾಗಿ ನಾವು ಹುಡುಕಲು ಹೊರಟರೆ ನಮಗೆ ಸಿಗುವ ಮೊದಲ ಉತ್ತರ ಅದು ರಾವಲ್ಪಿಂಡಿ ಎಕ್ಸ್ಪ್ರೆಸ್ ಶೋಯಬ್ ಅಕ್ತರ್. ಹೌದು ಗೆಳೆಯರೇ ಅವರ ಕಾಲದ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೇಷ್ಠ ಬೌಲರ್ ಗಳಲ್ಲಿ ಶೋಯಬ್ ಅಖ್ಟರ್ ಅಗ್ರಗಣ್ಯ ರಾಗಿ ಕಾಣಿಸಿಕೊಂಡಿದ್ದರು. ಶೋಯಬ್ ಅಖ್ತರ್ ಅವರ ವೇಗದ ಎಸೆತವನ್ನು ಎದುರಿಸಲು ಬಹುತೇಕ ಎಲ್ಲಾ ಬ್ಯಾಟ್ಸ್ಮನ್ಗಳು ಕೂಡ ಒಂದು ಕಾಲದಲ್ಲಿ ಹಿಂದೇಟು ಹಾಕುತ್ತಿದ್ದರು ಎಂದರೆ ಎಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕಾಗಿರುವ ಅಂಶವಾಗಿದೆ.

ಕೇವಲ ಕ್ರಿಕೆಟ್ ಕುರಿತಂತೆ ಮಾತ್ರವಲ್ಲದೆ ಕೆಲವೊಂದು ವಿವಾದಾತ್ಮಕ ವಿಚಾರಗಳಿಂದಾಗಿ ಯು ಕೂಡ ಆಗಾಗ ಶೋಯಬ್ ಅಕ್ತರ್ ಸುದ್ದಿಯಲ್ಲಿರುತ್ತಾರೆ. ಇನ್ನು ಸಾಮಾನ್ಯವಾಗಿ ನೀವು ನೋಡುವುದಾದರೆ ಈಗಾಗಲೇ ಕ್ರಿಕೆಟಿಗರ ಕುರಿತಂತೆ ಮಹೇಂದ್ರ ಸಿಂಗ್ ಧೋನಿ ಅಜರುದ್ದಿನ್ ಹಾಗೂ ಕಪಿಲ್ ದೇವ್ ರವರ ಕುರಿತಂತೆ 83 ಸೇರಿದಂತೆ ಹಲವಾರು ಸಿನಿಮಾಗಳು ಈಗಾಗಲೇ ಬಾಲಿವುಡ್ ನಲ್ಲಿ ಬಂದಿದೆ. ಇನ್ನು ಶೋಯಬ್ ಅಕ್ತರ್ ರವರ ಬಯೋಪಿಕ್ ಸಿನಿಮಾ ಕೂಡ ಮುಂದಿನ ವರ್ಷ ನವೆಂಬರ್ 16 ರಂದು ಬಿಡುಗಡೆಯಾಗಲಿದೆ ಎಂಬುದಾಗಿ ಅವರು ತಮ್ಮ ಸೋಶಿಯಲ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಅವರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದು ತಿಳಿದಿಲ್ಲ ಆದರೆ ಶೋಯಬ್ ಅಖ್ತರ್ ರವರು ಒಂದು ಸಮಯದಲ್ಲಿ ತಮ್ಮ ಪಾತ್ರವನ್ನು ಸಲ್ಮಾನ್ ಖಾನ್ ರವರು ನಿರ್ವಹಿಸಿದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವುದರಿಂದ ಹೇಳಿದ್ದು ಏಷ್ಯಾ ಕಂಡಂತಹ ಅತ್ಯಂತ ಶ್ರೇಷ್ಠ ಬೌಲರ್ ಗಳ ಪೈಕಿ ಯಲ್ಲಿ ಸೇರುವವರೆಗೂ ಕೂಡ ಶೋಯಬ್ ಪ್ರತಿಯೊಬ್ಬರೂ ಸಿನಿಮಾವನ್ನು ನೋಡಿ ಸ್ಪೂರ್ತಿಗೆ ಒಳಗಾಗುವ ಪ್ರೀತಿಯ ಜೀವನವನ್ನು ನಡೆಸಿದ್ದಾರೆ ಎಂದು ಹೇಳಬಹುದು. ಇದು ಹೇಗಿರಲಿದೆ ಯಾವೆಲ್ಲಾ ಅಂಶಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದಿನ ವರ್ಷ ಬಿಡುಗಡೆಯಾಗುವ ಸಿನಿಮಾವನ್ನು ನೋಡಿಯೇ ತಿಳಿದುಕೊಳ್ಳಬೇಕಾಗಿದೆ.