ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಕೊಂಡ ಧೋನಿ: ಕ್ಯಾಪ್ಟನ್ ಕೂಲ್ ಗೆ ಸುಪ್ರೀಂ ಕೋರ್ಟ್ ನೀಡಿತು ಶಾಕ್. ಏನು ಗೊತ್ತೇ??

7

ನಮಸ್ಕಾರ ಸ್ನೇಹಿತರೆ ಮಹೇಂದ್ರ ಸಿಂಗ್ ಧೋನಿ ರವರು ಭಾರತೀಯ ಕ್ರಿಕೆಟ್ ಮಾತ್ರವಲ್ಲದೆ ಕ್ರಿಕೆಟ್ ಜಗತ್ತು ಕಂಡಂತಹ ಶ್ರೇಷ್ಠ ನಾಯಕರಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಮಹೇಂದ್ರ ಸಿಂಗ್ ಧೋನಿ ಅವರವರ ಕ್ರಿಕೆಟ್ ಇನಿಂಗ್ಸ್ ಕುರಿತಂತೆ ಅಲ್ಲ ಬದಲಾಗಿ ಅವರ ಬ್ಯುಸಿನೆಸ್ ಇನ್ನಿಂಗ್ಸ್ ಕುರಿತಂತೆ. ಹೌದು ಗೆಳೆಯರೆ ಮಹೇಂದ್ರ ಸಿಂಗ್ ಧೋನಿ ರವರ ಹಳೆಯ ಒಂದು ವಿಚಾರ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂಬುದಾಗಿ ತಿಳಿದುಬಂದಿದೆ. ಕ್ರಿಕೆಟ್ ಮಾತ್ರವಲ್ಲದೆ ಮಹೇಂದ್ರ ಸಿಂಗ್ ಧೋನಿ ರವರು ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡುವುದರಲ್ಲಿ ಕೂಡ ಸಿದ್ಧಹಸ್ತರು ಎಂಬುದು ನಮಗೆಲ್ಲರಿಗೂ ತಿಳಿದಿರಬಹುದು.

ಹಲವಾರು ದೊಡ್ಡ ದೊಡ್ಡ ಬಿಸಿನೆಸ್ ಗಳಿಂದ ಹಿಡಿದು ನೆನ್ನೆ ಮೊನ್ನೆ ಪ್ರಾರಂಭವಾಗಿರುವ ಹೊಸ ಹೊಸ ಸ್ಟಾರ್ಟಪ್ ಗಳಿಗೂ ಕೂಡ ಮಹೇಂದ್ರ ಸಿಂಗ್ ಧೋನಿ ಅವರು ಹೂಡಿಕೆ ಮಾಡಿದ್ದಾರೆ. ಸದ್ಯಕ್ಕೆ ನಾವು ಮಾತನಾಡಲು ಹೊರಟಿರುವುದು ಆಮ್ರಪಾಲಿ ಸಂಸ್ಥೆಯ ಕುರಿತಂತೆ. ಹೌದು ಗೆಳೆಯರೆ ಆಮ್ರಪಾಲಿ ಗ್ರೂಪ್ ನ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಸಲ್ಲಿಸಿರುವ ದೂರಿನ ಅನ್ವಯ ನಡೆದಿರುವ ತನಿಖೆಯ ಫಲಿತಾಂಶವಾಗಿ ಈಗ ಈ ಸುದ್ದಿ ಹೊರ ಬಂದಿದೆ ಎಂದು ಹೇಳಬಹುದಾಗಿದೆ. 2016 ರ ಹೊತ್ತಿಗೆ ಮಹೇಂದ್ರ ಸಿಂಗ್ ಧೋನಿ ರವರು ಆಮ್ರಪಾಲಿ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಆದರೆ ಆ ವರ್ಷದಲ್ಲಿ ಅವರು ಆ ಸಂಸ್ಥೆಯಿಂದ ಬೇರ್ಪಡುತ್ತಾರೆ ಹಾಗೂ ತಮಗೆ ಸಂಭಾವನೆ ರೂಪದಲ್ಲಿ ಬರಬೇಕಾಗಿದ್ದ 40 ಕೋಟಿ ರೂಪಾಯಿ ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತಾರೆ.

ಆಮ್ರಪಾಲಿ ಯೋಜನೆಯ ಮನೆಗಳನ್ನು ಖರೀದಿಸಿದ ಧೋನಿ ಸೇರಿದಂತೆ 1800 ಜನರಿಗೆ ರಿಸೀವರ್ ನೋಟಿಸನ್ನು ಕಳಿಸಿದ್ದರು. ಎಲ್ಲರಿಗೂ 15 ದಿನಗಳ ಒಳಗೆ ಹಣ ಜಮಾ ಮಾಡುವಂತೆ ಸೂಚಿಸಲಾಗಿತ್ತು. ಧೋನಿ ಅರ್ಜಿಯ ನಂತರ ಆಮ್ರಪಾಲಿ ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು ಎಂಬುದನ್ನು ಕೂಡ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕು.