ಬಹಳ ನಿರೀಕ್ಷೆ ಹೊಂದಿರುವ ವಿಕ್ರಾಂತ್ ರೋಣ ಚಿತ್ರದ ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಎಲ್ಲಿಗೆ ಬಂದು ನಿಂತಿದೆ ಗೊತ್ತೇ?? ಅಯ್ಯಯೋ ಹೀಗ್ಯಾಕೆ ಆಯಿತು??

15

ನಮಸ್ಕಾರ ಸ್ನೇಹಿತರೆ ಇದೇ ಜುಲೈ 28ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಅದ್ದೂರಿಯಾಗಿ ದೇಶವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಬಿಡುಗಡೆಗೆ ಅದ್ದೂರಿ ತಯಾರಿ ನಡೆದಿದ್ದು ಸುಮಾರು 7000ಕ್ಕೂ ಅಧಿಕ ಸ್ಕ್ರೀನ್ ಗಳ ಮೇಲೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಅನುಪ್ ಬಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ನಲ್ಲಿ ಮೊದಲ ಬಾರಿಗೆ ಮೂಡಿಬರುತ್ತಿರುವ ಈ ಸಿನಿಮಾ ಸಿನಿಮಾ ಪ್ರೇಕ್ಷಕರನ್ನು ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು.

ಈಗಾಗಲೇ ಟೀಸರ್ ನಿಂದ ಕನ್ನಡ ಸೇರಿದಂತೆ ಪರಭಾಷೆಗಳ ಪ್ರೇಕ್ಷಕರನ್ನು ಕೂಡ ಸಿನಿಮಾ ಥಿಯೇಟರ್ ಗಳ ಕಡೆಗೆ ಮುಖಮಾಡುವಂತೆ ಪ್ರೇರೇಪಿಸುತ್ತಿರುವ ವಿಕ್ರಾಂತ್ ರೋಣ ದೊಡ್ಡಮಟ್ಟದಲ್ಲಿ ಬಿಡುಗಡೆಯನ್ನು ಕಾಣುತ್ತಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಕನ್ನಡ ಚಿತ್ರರಂಗದ ಮತ್ತೊಂದು ದೊಡ್ಡ ಬಜೆಟ್ ಸಿನಿಮಾವಾಗಿ ಪ್ಯಾನ್ ಇಂಡಿಯಾ ಬಿಡುಗಡೆಯನ್ನು ಕಾಣುತ್ತಿದೆ. ಇಂಗ್ಲಿಷ್ ಸೇರಿದಂತೆ ಹಲವಾರು ವಿದೇಶಿ ಭಾಷೆಗಳಲ್ಲಿ ಕೂಡ ಚಿತ್ರ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಇನ್ನು ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರ ಈಗಾಗಲೇ ಪ್ರಾರಂಭವಾಗಿದೆ.

ಭಾರತದಲ್ಲಿ ವಿಕ್ರಾಂತ್ ರೋಣ 25ರಿಂದ 50 ಕೋಟಿ ರೂಪಾಯಿ ನಡುವೆ ಮಾಡಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಹಿಂದಿಯಲ್ಲಿ ರಣಬೀರ್ ಕಪೂರ್ ನಟನೆಯ ಶಂಶೇರ ಸಿನಿಮಾ ಬಿಡುಗಡೆ ಕಂಡಿರುವ ಕಾರಣದಿಂದಾಗಿ ನಲ್ಲಿ ಥಿಯೇಟರ್ ಗಳ ಸಂಖ್ಯೆ ಕಡಿಮೆಯಾಗಿದೆ. ಮೊದಲ ದಿನದ ವಿಶ್ವಾದ್ಯಂತ ಕಲೆಕ್ಷನ್ ಲೆಕ್ಕಹಾಕಿದರೆ 50 ಕೋಟಿ ರೂಪಾಯಿ ಮೊದಲ ದಿನವೇ ಗಳಿಸಬಹುದಾದ ಸಾಧ್ಯತೆ ಹೆಚ್ಚಿದೆ ಎಂಬುದಾಗಿ ಸಿನಿಮಾ ಪಂಡಿತರ ಲೆಕ್ಕಾಚಾರ ಹಾಕಿದ್ದಾರೆ.