ಕಿರುತೆರೆಯಲ್ಲಿ ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾ ದಲ್ಲಿ ಟಾಪ್ ನಟಿಯರನ್ನು ಮೀರಿಸುವಂತೆ ಮಿಂಚುತ್ತಿರುವವರು ಯಾರ್ಯಾರು ಗೊತ್ತೇ??

23

ನಮಸ್ಕಾರ ಸ್ನೇಹಿತರೆ ಮೊದಲಿನ ದಿನಗಳಲ್ಲಿ ಕೇವಲ ಸಿನಿಮಾ ನಟರಿಗೆ ಹಾಗೂ ನಟಿಯರಿಗೆ ಮಾತ್ರ ಅಭಿಮಾನಿಗಳು ಇದ್ದರು ಎಂಬುದಾಗಿ ಮಾತನಾಡಿಕೊಳ್ಳ ಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಧಾರವಾಹಿಯ ನಟಿಯರು ಕೂಡ ಸಿನಿಮಾ ನಟಿಯರಿಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಅವುಗಳಲ್ಲಿ ನಾವು ಮೂರು ಕಿರುತೆರೆಯ ನಟಿಯರನ್ನು ಆಯ್ಕೆ ಮಾಡಬಹುದಾಗಿದೆ. ಮೊದಲನೇದಾಗಿ ದೀಪಿಕಾ ದಾಸ್. ನಾಗಿಣಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತರಾದ ಇವರು ನಂತರದ ದಿನಗಳಲ್ಲಿ ಬಿಗ್ಬಾಸ್ ಮೂಲಕವೂ ಕೂಡ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫಿಟ್ನೆಸ್ ಹಾಗೂ ಫ್ಯಾಶನ್ ಕುರಿತಂತೆ ಫೋಟೋಗಳನ್ನು ವಿಡಿಯೋಗಳನ್ನು ಅಪ್ಲೋಡ್ ಮಾಡುವ ಇವರು ಬರೋಬ್ಬರಿ 1.3 ಮಿಲ್ಲಿಯನ್ ಫಾಲವರ್ಸ್ ಗಳಿಗೂ ಅಧಿಕ ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ಎರಡನೆಯದಾಗಿ ವೈಷ್ಣವಿ ಗೌಡ; ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಎಲ್ಲರ ನೆಚ್ಚಿನ ಸನ್ನಿಧಿಯಲ್ಲಿ ಕಾಣಿಸಿಕೊಂಡ ಇವರು ಇದಾದ ನಂತರ ಯಾವುದೇ ಧಾರವಾಹಿ ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಆದರೂ ಕೂಡ ಬಿಗ್ ಬಾಸ್ ಮೂಲಕ ಮತ್ತೆ ಅವರ ಜನಪ್ರಿಯತೆಗೆ ಬರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳ ಸಂಖ್ಯೆ ಒಂದು ಮಿಲಿಯನ್ ಗೂ ಅಧಿಕ. ಇಷ್ಟು ಮಾತ್ರವಲ್ಲದೆ ಇವರು ಯುಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ.

ಮೂರನೇದಾಗಿ ಮೇಘ ಶೆಟ್ಟಿ; ಜೀ ಕನ್ನಡದ ಟಾಪ್ ದಾರವಾಹಿ ಆಗಿರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ಇವರು ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೇಡಿಂಗ್ ಸೇರಿದಂತೆ ಹಲವಾರು ಸಿನಿಮಾಗಳಿಗೆ ನಟಿಸಲು ಕೂಡ ಸಿದ್ದರಾಗಿದ್ದಾರೆ. ಇನ್ನು ಇವರು ಕೂಡ ಒಂದು ಮಿಲಿಯನ್ ಗೂ ಅಧಿಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ಕಿರುತೆರೆಯ ನಟಿಯರು ಚಿತ್ರರಂಗದ ನಟಿಯರಿಗಿಂತ ಹೆಚ್ಚಿನ ಜನಪ್ರಿಯತೆ ಹೊಂದಿದ್ದಾರೆ ಎಂದು ಹೇಳಬಹುದಾಗಿದೆ.