ಅಬುದಾಬಿಯಲ್ಲಿ ಫುಲ್ ಖುಷಿಯಲ್ಲಿ ಕಾಣಿಸಿಕೊಂಡ ರಶ್ಮಿಕಾ: ಮುಖದಲ್ಲಿ ಉಕ್ಕಿದ ಸಂತೋಷಕ್ಕೆ ಕಾರಣ ಕೇಳಿದರೆ ನಿಮಗೂ ಖುಷಿ ಫಿಕ್ಸ್.

10

ನಮಸ್ಕಾರ ಸ್ನೇಹಿತರೆ ಭಾರತೀಯ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ನಟಿಯೆಂದರೆ ಅದು ನಮ್ಮ ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಎಂದು ಹೇಳಬಹುದಾಗಿದೆ. ಕನ್ನಡ ತಮಿಳು ತೆಲುಗು ಹಿಂದಿ ಚಿತ್ರರಂಗಗಳಲ್ಲಿ ಕೂಡ ಅತ್ಯಂತ ಬೇಡಿಕೆಯ ನಟಿಯಾಗಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಇನ್ನು ಆಗಾಗ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜೀವನದ ಕುರಿತಂತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ರಶ್ಮಿಕ ಮಂದಣ್ಣ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಇನ್ನು ಇತ್ತೀಚಿಗಷ್ಟೇ ಇನ್ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಅವರು ಅಬುಧಾಬಿಯಲ್ಲಿ ಇರುವಂತಹ ಕೆಲವೊಂದು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು. ಅಷ್ಟಕ್ಕೂ ರಶ್ಮಿಕ ಮಂದಣ್ಣ ವಿದೇಶದಲ್ಲಿರುವ ಕುರಿತಂತೆ ಅಷ್ಟೊಂದು ಸಂತೋಷದಿಂದ ಬರೆದುಕೊಂಡಿದ್ದು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ಈ ಫೋಟೋದ ಕೆಳಗಡೆ ಬರೆದಿರುವ ಕ್ಯಾಪ್ಷನ್ ನಲ್ಲಿ ತಿರುಗಾಡುವುದು ಎಂದರೆ ನನಗೆ ತುಂಬಾನೇ ಇಷ್ಟ. ಅದರಲ್ಲೂ ಚಿತ್ರೀಕರಣಕ್ಕಾಗಿ ಸುತ್ತಾಡುವುದು ಎಂದರೆ ನನಗೆ ಎಲ್ಲಿಲ್ಲದ ಇಷ್ಟ ಎಂಬುದಾಗಿ ರಶ್ಮಿಕ ಮಂದಣ್ಣ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಂದರೆ ಅಬುದಾಬಿಗೆ ರಶ್ಮಿಕಾ ಮಂದಣ್ಣ ಯಾವುದೋ ಚಿತ್ರದ ಚಿತ್ರೀಕರಣಕ್ಕಾಗಿ ಬಂದಿದ್ದಾರೆ ಎಂಬುದಾಗಿ ತಿಳಿದಿದ್ದು ಯಾವ ಸಿನಿಮಾದ ಚಿತ್ರೀಕರಣಕ್ಕಾಗಿ ಎಂಬುದು ಇದುವರೆಗೂ ಕೂಡ ತಿಳಿದುಬಂದಿಲ್ಲ. ರಶ್ಮಿಕ ಮಂದಣ್ಣ ಅವರ ಜೊತೆಗೆ ಅವರ ಸಂತೋಷವನ್ನು ನೋಡಿ ಅಭಿಮಾನಿಗಳು ಕೂಡ ಸಂತೋಷ ಪಟ್ಟಿರುವುದು ಸುಳ್ಳಲ್ಲ. ರಶ್ಮಿಕ ಮಂದಣ್ಣ ಈಗಾಗಲೇ ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಗಳ ಟಾಪ್ ನಟರೊಂದಿಗೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.