ನಿಮ್ಮ ಮನೆಯಲ್ಲಿ ಚಪಾತಿ ಬಡಿಸುವಾಗ ಈ ತಪ್ಪು ಮಾಡಬೇಡಿ, ಲಕ್ಷ್ಮಿ ದೇವಿಗೆ ಬರುತ್ತದೆ ಕೋಪ. ಯಾವ್ಯಾವು ಗೊತ್ತೇ?

25

ನಮಸ್ಕಾರ ಸ್ನೇಹಿತರೆ ಚಿಕ್ಕ ಬಡವರಿಂದ ಹಿಡಿದು ದೊಡ್ಡ ಶ್ರೀಮಂತರವರೆಗೂ ಎಲ್ಲರ ಮನೆಯಲ್ಲೂ ಕೂಡ ಚಪಾತಿಯನ್ನು ತಿಂದೇ ತಿನ್ನುತ್ತಿರುತ್ತಾರೆ. ಆದರೆ ಈ ಚಪಾತಿಯನ್ನು ಬಡಿಸುವ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದರೆ ಅದು ಕೂಡ ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗಿದೆ ನಿಮ್ಮ ಜೀವನ ಅದೋಗತಿಗೆ ಹೋಗಬಹುದಾದಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಿದ್ದರೆ ಚಪಾತಿಯನ್ನು ಬಡಿಸುವ ಸಂದರ್ಭದಲ್ಲಿ ಯಾವೆಲ್ಲ ತಪ್ಪುಗಳಿಂದಾಗಿ ಈ ಅನಾಹುತ ಕಾರಣವಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೇದಾಗಿ ಚಪಾತಿಯನ್ನು ಬಡಿಸುವಾಗ ಯಾವತ್ತೂ ಕೂಡ ಒಂದೇ ಬಾರಿ ಮೂರು ಚಪಾತಿಯನ್ನು ಒಟ್ಟಿಗೆ ಬಡಿಸಬಾರದು. ಒಂದು ಅಥವಾ ಎರಡು ಚಪಾತಿಯನ್ನು ಒಟ್ಟಿಗೆ ಹಾಕಬಹುದು ಆದರೆ ಮೂರು ಚಪಾತಿಯನ್ನು ಒಟ್ಟಿಗೆ ಬಡಿಸಬಾರದು. ಎರಡನೆಯದಾಗಿ ಸಾಮಾನ್ಯವಾಗಿ ನೀವು ಚಪಾತಿಯನ್ನು ಎನ್ನುತ್ತಿರಬೇಕಾದರೆ ಚಪಾತಿ ಖಾಲಿಯಾದರೆ ಚಪಾತಿ ಮಾಡುತ್ತಿರುವವರು ಯಾವತ್ತೂ ಕೂಡ ಕೈಯಿಂದ ನಿಮಗೆ ಮತ್ತೊಂದು ಚಪಾತಿಯನ್ನು ಹಾಕಲು ಬರಬಾರದು. ಒಂದು ವೇಳೆ ಚಪಾತಿ ಖಾಲಿಯಾದರೆ ಅದನ್ನು ಯಾವುದಾದರೂ ತಟ್ಟೆಯಲ್ಲಿ ಹಿಡಿದುಕೊಂಡು ತರಬೇಕು ನಂತರವೇ ನಿಮ್ಮ ತಟ್ಟೆಗೆ ಅದನ್ನು ಹಾಕಬೇಕು.

ಬರೀ ಖಾಲಿ ಕೈಯಲ್ಲಿ ಚಪಾತಿಯನ್ನು ತಂದು ನಿಮ್ಮ ತಟ್ಟೆಗೆ ಹಾಕಿದರೇ ಇಬ್ಬರಿಗೂ ಕೂಡ ದಾರಿದ್ರ್ಯವನ್ನು ತರುತ್ತದೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಿದೆ. ಸಾಮಾನ್ಯವಾಗಿ ಚಪಾತಿ ಉಳಿದರೆ ನಾವು ಅದನ್ನು ಇಟ್ಟುಕೊಂಡು ನಂತರ ಸಮಯದಲ್ಲಿ ತಿನ್ನುತ್ತೇವೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಆದರೆ ಅದೇ ರೊಟ್ಟಿಯನ್ನು ಅಥವಾ ಚಪಾತಿಯನ್ನು ಮನೆಗೆ ಬಂದ ಅತಿಥಿಗಳಿಗೆ ಅಥವಾ ಸಾಧು ಸಂತ ಭಿಕ್ಷುಕರಿಗೆ ನೀಡುವುದು ತಪ್ಪಾಗುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಇಂತಹ ಹಳಸಿದ ಆಹಾರವನ್ನು ನೀಡುವುದು ನಿಜಕ್ಕೂ ಕೂಡ ಅತಿಥಿ ಸತ್ಕಾರದಲ್ಲಿ ನೀವು ಮಾಡಿರುವ ತಪ್ಪಾಗುತ್ತದೆ. ಈ ತಪ್ಪನ್ನು ಯಾವತ್ತೂ ಕೂಡ ಮಾಡಲು ಹೋಗಬೇಡಿ ಇಲ್ಲದಿದ್ದರೆ ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗಿ ನಿಮ್ಮ ಜೀವನ ಸಾಕಷ್ಟು ಕಷ್ಟಗಳಿಗೆ ಈಡಾಗಬೇಕಾಗುತ್ತದೆ.