ಕೊನೆಗೂ ಬಯಲಾಯ್ತು ಸತ್ಯ, ಸುದೀಪ್ ರವರು ವಿಕ್ರಾಂತ್ ರೋಣ ಗೆ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತೇ??

9

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೆ ಜುಲೈ 28ರಂದು ಭಾರತೀಯ ಪಂಚ ಭಾಷೆಗಳು ಸೇರಿದಂತೆ ಹಲವಾರು ವಿದೇಶಿ ಭಾಷೆಗಳಲ್ಲಿ ಕೂಡ ವಿಶ್ವಾದ್ಯಂತ ಬರೋಬ್ಬರಿ ಏಳು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಹಾಗೂ 30ಕ್ಕೂ ಅಧಿಕ ದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯನ್ನು ಕಾಣಲು ವಿಕ್ರಾಂತ್ ರೋಣ ಸಿದ್ಧವಾಗಿ ನಿಂತಿದೆ. ಹಲವಾರು ವರ್ಷಗಳ ಪರಿಶ್ರಮ ಎನ್ನುವುದು ಇದು ಜುಲೈ 28ರಂದು ದೊಡ್ಡ ಪರದೆ ಮೇಲೆ ಕಾಣುವ ಮೂಲಕ ಎಲ್ಲರ ಮನೆ-ಮನಗಳನ್ನು ತಲುಪಲು ಸಿದ್ಧವಾಗಿದೆ ಎಂದು ಹೇಳಬಹುದಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಕನ್ನಡ ಚಿತ್ರರಂಗದ ಮೂಲಕ ಪಂಚ ಭಾಷೆಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ವಿಶ್ವದ ಸಿನಿಮಾ ಪ್ರಿಯರ ಕಣ್ಣಿಗೆ ಆನಂದವನ್ನು ನೀಡಲು ಸಿದ್ಧವಾಗಿದೆ.

ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಬಹುತೇಕ ಎಲ್ಲರಿಗೂ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಬಾಕ್ಸ್ ಆಫೀಸ್ ನಲ್ಲಿ ಜಾಗತಿಕವಾಗಿ ನೂರಾರು ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಸಾಮರ್ಥ್ಯವನ್ನು ಚಿತ್ರ ಹೊಂದಿದೆ ಎಂಬುದನ್ನು ಈಗಾಗಲೇ ಟೀಚರ್ ನೋಡಿರುವ ನಾವು ತಿಳಿದುಕೊಂಡಿದ್ದೇವೆ. ಇನ್ನು ಈ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿಬಂದಿದೆ ಎಂಬುದಾಗಿ ತಿಳಿದುಬಂದಿದೆ. ಚಿತ್ರ 3d ಯಲ್ಲಿ ಕೂಡ ಮೂಡಿಬಂದಿದ್ದು ಚಿತ್ರ ದೃಶ್ಯದ ಶ್ರೀಮಂತಿಕೆಯನ್ನು ಈ ಮೂಲಕ ನಾವು ಆಸ್ವಾದಿಸಬಹುದಾಗಿದೆ. ಇನ್ನು ಈ ಸಿನಿಮಾಗಾಗಿ ಕಿಚ್ಚ ಸುದೀಪ್ ರವರು ನಾಯಕನಾಗಿ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದಾಗಿ ಎಲ್ಲರಲ್ಲೂ ಕೂಡ ಕುತೂಹಲವಿದೆ.

ಕೆಲವೊಂದು ಮೂಲಗಳ ಪ್ರಕಾರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಸಿನಿಮಾಗಾಗಿ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಈ ಸಿನಿಮಾದ ಲಾಭದಲ್ಲಿ ಕಿಚ್ಚ ಸುದೀಪ್ ರವರು ಪಾಲನು ಪಡೆದುಕೊಳ್ಳುತ್ತಾರೆ ಹೀಗಾಗಿ ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ ಎಂಬ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದಾಗಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಈ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.