ಅಹಂಕಾರದಿಂದ ವರ್ತನೆ ಮಾಡಿದ ಒಬ್ಬ ದೊಡ್ಡ ವಿಜ್ಞಾನಿಗೆ ಭಿಕ್ಷುಕ ಬುದ್ದಿ ಕಳಿಸಿದ್ದು ಹೇಗೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಒಬ್ಬ ವಿಜ್ಞಾನಿ ಗಾಡಿಯಲ್ಲಿ ಒಬ್ಬನೇ ಎಲ್ಲಿಇಗೋ ಹೊರಟಿದ್ದ ಈ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ಗಾಡಿಗಳು ಓಡಾಟ ಮಾಡುತ್ತಿರಲಿಲ್ಲ ಹೀಗಾಗಿ ಹೆಚ್ಚಾಗಿ ಆತ ರಸ್ತೆಯ ಮೇಲೆ ಗಮನ ನೀಡಿರಲಿಲ್ಲ ಇದೇ ಕಾರಣ ದಿಂದಾಗಿ ಆತನ ಟೈರ್ ಗೆ ಮೊಳೆ ಚುಚ್ಚಿ ಪಂಕ್ಚರ್ ಆಗುತ್ತದೆ. ಆಗ ಆತ ಕಾರ್ ನಿಲ್ಲಿಸಿ ಸುತ್ತ ನೋಡಿದ ಯಾರೂ ಕೂಡ ಇಲ್ಲದ ಕಾರಣ ಆತನೇ ಟೈರ್ ಅನ್ನು ಬದಲಾವಣೆ ಮಾಡಲು ಪ್ರಾರಂಭಿಸುತ್ತಾನೆ. ಹಳೇ ಟೈರನ್ನು ಬಿಚ್ಚಿ ಸ್ಟೆಪನೀ ಟೈರನ್ನು ತರಬೇಕೆಂದು ಹೋಗುವಾಗ ಆತನ ಕೈಯಲ್ಲಿದ್ದ ಟೈರ್ ಬೋಲ್ಟ್ ಆತ ಬಿದ್ದು ಅವೂ ಕೂಡ ಮೋರಿಗೆ ಬೀಳುತ್ತವೆ.
ಆ ಮೋರಿ ಗಬ್ಬಾಗಿದ್ದ ಕಾರಣ ಆ ವಿಜ್ಞಾನಿಗೆ ಏನು ಮಾಡುವುದು ಎಂಬುದಾಗಿ ತಿಳಿಯದಾಯಿತು.ಆಗ ಅದೇ ರಸ್ತೆಯಲ್ಲಿ ಒಬ್ಬ ಹರಿದ ಬಟ್ಟೆಯನ್ನು ಹಾಕಿಕೊಂಡ ಬಿಕ್ಷುಕನೊಬ್ಬ ಬರ್ತಾ ಇದ್ದ. ಆಗ ಆತನಿಗೆ 500 ರೂಪಾಯಿ ನೀಡಿದರೆ ಮೋರಿಗೆ ಇಳಿದು ಬೋಲ್ಟ್ ತೆಗೆದುಕೊಡುತ್ತಾನೆ ಎಂಬುದಾಗಿ ಭಾವಿಸಿ ಆತನನ್ನು ಕರೆದು ಬೋಲ್ಟ್ ತೆಗೆದು ಕೊಡಲು ಹೇಳುತ್ತಾನೆ. ಆಗ ಬಿಕ್ಷುಕ ನಕ್ಕು ಇದೇ ನಿಮ್ಮ ಸಮಸ್ಯೆನಾ ಸರ್ ಅದಕ್ಕೆ ನನ್ನ ಬಳಿ ಪರಿಹಾರ ಇದೆ ಉಳಿದ ಟೈರ್ ಗಳ ಒಂದೊಂದು ಬೋಲ್ಟ್ ಗಳನ್ನು ತೆಗೆದು ಸ್ಟೆಪನೀ ಟೈರ್ ಗೆ ಅಳವಡಿಸಿ. 5 ಕಿಲೋಮೀಟರ್ ದೂರ ಹೋದರೆ ನಿಮಗೆ ಮೆಕಾನಿಕಲ್ ಶಾಪ್ ಸಿಗುತ್ತದೆ ಅಲ್ಲಿ ಎಲ್ಲಾ ಟೈರ್ ಗಳಿಗೂ ಒಂದೊಂದು ಕಡಿಮೆಯಾಗಿರುವ ಬೋಲ್ಟ್ ಗಳನ್ನು ಹಾಕಿಸಿಕೊಳ್ಳಿ ಎಂಬುದಾಗಿ ಭಿಕ್ಷುಕ ವಿಜ್ಞಾನಿಗೆ ಹೇಳುತ್ತಾನೆ.

ಆಗ ವಿಜ್ಞಾನಿ ಇದರ ಬಗ್ಗೆ ನಾನು ಯೋಚಿಸಲೇ ಇಲ್ಲ ಅಲ್ವಾ ಎಂಬುದಾಗಿ ಹೇಳುತ್ತಾನೆ. ನಿನ್ನನ್ನು ನಿನ್ನ ಬಟ್ಟೆಯಿಂದಾಗಿ ಏನೂ ತಿಳಿಯದ ದಡ್ಡ ಎಂಬುದಾಗಿ ಅಂದುಕೊಂಡಿದ್ದೆ ಕ್ಷಮೆ ಇರಲಿ ಎಂಬುದಾಗಿ ವಿಜ್ಞಾನಿ ಭಿಕ್ಷುಕನ ಬಳಿ ಕ್ಷಮೆ ಕೇಳುತ್ತಾನೆ. ಮುಖ ನೋಡಿ ಮಣೆ ಹಾಕಬಾರದು ಎನ್ನುವುದನ್ನು ನಾವು ಈ ಕಥೆಯಿಂದ ಕೇಳಿ ಅರ್ಥೈಸಿಕೊಳ್ಳ ಬಹುದಾಗಿದೆ.