ಆತ ಭಾರತ ತಂಡದಲ್ಲಿ ಇದ್ದರೇ ಸಾಕು,ಎದುರಾಳಿಗಳು ನಡುಗುವುದರಲ್ಲಿ ಅನುಮಾನವಿಲ್ಲ ಎಂದ ರಿಕ್ಕಿ ಪಾಂಟಿಂಗ್. ಯಾರಂತೆ ಗೊತ್ತೇ??

20

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಅಕ್ಟೋಬರ್ ಹಾಗೂ ನವಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ಗಾಗಿ ಬಹಳಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಯಾಕೆಂದರೆ ಕಳೆದ ಬಾರಿ ಯುಎಇ ನಲ್ಲಿ ನಡೆದಿರುವಂತಹ ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತಕ್ಕೆ ತೇರ್ಗಡೆ ಆಗುವಲ್ಲಿ ವಿಫಲವಾಗಿತ್ತು. ಭಾರತದಂತಹ ಶ್ರೇಷ್ಠ ಕ್ರಿಕೆಟ್ ತಂಡ ಇಂತಹ ಕಳಪೆ ಪ್ರದರ್ಶನವನ್ನು ನೀಡಿದರು ಯಾರಿಗೆ ತಾನೇ ಅಸಹನೆ ಮೂಡುವುದಿಲ್ಲ ಹೇಳಿ. ಅದಕ್ಕಾಗಿಯೇ ಈ ಬಾರಿ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನದಲ್ಲಿ ಈ ಬಾರಿಯ ವಿಶ್ವಕಪ್ ಗಾಗಿ ಬಲಿಷ್ಠ ತಂಡ ಸಿದ್ಧವಾಗುತ್ತಿದೆ.

ಅದಕ್ಕೆ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಕೂಡ ಸಂಪೂರ್ಣ ಬೆಂಬಲವನ್ನು ನೀಡಿ ದ್ದಾರೆ ಎಂದು ತಿಳಿದುಬರುತ್ತದೆ. ಅದರಲ್ಲೂ ಆಸ್ಟ್ರೇಲಿಯಾ ಕ್ರಿಕೆಟ್ ಕಂಡಂತಹ ಹಾಗೂ ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ರಿಕಿ ಪಾಂಟಿಂಗ್ ಅವರು ಭಾರತೀಯ ಕ್ರಿಕೆಟ್ ತಂಡದ ಕುರಿತಂತೆ ಒಂದು ಮಾತನಾಡಿದ್ದಾರೆ. ಹೌದು ಗೆಳೆಯರೇ ಅದೇನೆಂದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬ ಆಟಗಾರ ಇದ್ದರೆ ಎದುರಾಳಿ ತಂಡಗಳು ಭಾರತೀಯ ಕ್ರಿಕೆಟ್ ತಂಡದ ಎದುರು ಆಡಲು ಹಿಂದೇಟು ಹಾಕುತ್ತಾರೆ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ ನಾನು ಕೂಡ ಎದುರಾಳಿ ತಂಡದಲ್ಲಿದ್ದರೆ ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಆ ಆಟಗಾರನ ಇದು ಹಾಡಲು ನಾನು ಹಿಂಜರಿಯುತ್ತಿದ್ದೆ ಎಂಬುದಾಗಿ ಹೇಳಿದ್ದಾರೆ.

ಹೌದು ಗೆಳೆಯರೇ ಆಟಗಾರ ಇನ್ಯಾರು ಅಲ್ಲ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ವಿರಾಟ್ ಕೊಹ್ಲಿ. ಹೌದು ಅವರಿಗಿರುವ ಅನುಭವ ಹಾಗೂ ಸ್ಕಿಲ್ಸ್ ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಸಾಕಷ್ಟು ನೆರವಿಗೆ ಬರಲಿದೆ ಎಂಬುದಾಗಿ ಹೇಳಿದ್ದಾರೆ. ಅವರಿಗೆ ಈಗ ಫಾರ್ಮ್ ಚಿಂತೆ ಇರಬಹುದು ಆದರೆ ಈ ಮ್ಯಾನೇಜ್ಮೆಂಟ್ ಅವರಿಗೆ ಇನ್ನಷ್ಟು ಅವಕಾಶವನ್ನು ನೀಡಿದರೆ ಖಂಡಿತವಾಗಿ ಅವರು ಲಯಕ್ಕೆ ವಾಪಸ್ಸು ಮರಳಿ ಬರಲಿದ್ದಾರೆ ಎಂಬುದಾಗಿ ರಿಕಿ ಪಾಂಟಿಂಗ್ ಹೇಳಿದ್ದಾರೆ. ಅವರು ವಾಪಸ್ಸು ಉತ್ತಮ ಲಯಕ್ಕೆ ಮರಳಿ ಬರಲು ಒಂದು ಉತ್ತಮ ಇನ್ನಿಂಗ್ಸ್ ಸಾಕು ಎಂಬುದಾಗಿ ಕೂಡ ರಿಕಿ ಪಾಂಟಿಂಗ್ ಹೇಳಿದ್ದಾರೆ.