ದಿನೇಶ್ ರವರ ಮೊದಲನೇ ಪತ್ನಿ ಜೊತೆ ಮದುವೆ ಮಾಡಿಕೊಂಡಿದ್ದ ವಿಜಯ್ ಪರಿಸ್ಥಿತಿ ಏನಾಗಿದೆ ಗೊತ್ತೇ? ಮೈದಾನದಲ್ಲಿ ಕೈ ಮುಗಿದು ನಿಂತಿದ್ದು ಯಾಕೆ ಗೊತ್ತೇ??

109

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರಾಗಿರುವ ದಿನೇಶ್ ಕಾರ್ತಿಕ್ ಹಾಗೂ ಮುರಳಿ ವಿಜಯ್ ಇಬ್ಬರೂ ಕೂಡ ವೈಯಕ್ತಿಕ ಜೀವನದ ಕಾರಣದಿಂದಾಗಿ ತಮ್ಮ ಸ್ನೇಹವನ್ನು ಮುರಿದುಕೊಂಡಿದ್ದು ನಿಮಗೆಲ್ಲ ತಿಳಿದಿದೆ. ದಿನೇಶ್ ಕಾರ್ತಿಕ್ ಅವರ ಪತ್ನಿ ನಿಕಿತ ಅವರೊಂದಿಗೆ ಮುರಳಿ ವಿಜಯ್ ರವರು ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದನ್ನು ತಿಳಿದು ದಿನೇಶ್ ಕಾರ್ತಿಕ್ ತಮ್ಮ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು. ನಂತರ ಮುರಳಿ ವಿಜಯ್ ನಿಖಿತ ಅವರನ್ನು ಮದುವೆಯಾಗಿದ್ದರು.

ಈ ಕಡೆ ಹಲವಾರು ವರ್ಷಗಳ ಡಿಪ್ರೆಶನ್ ನಿಂದ ಬಳಲಿದ್ದ ದಿನೇಶ್ ಕಾರ್ತಿಕ್ ರವರು ಭಾರತೀಯ ಕ್ರಿಕೆಟ್ ತಂಡದಿಂದ ಕೂಡ ಅವಕಾಶ ವಂಚಿತರಾಗಿದ್ದರು. ನಂತರ ಕ್ರೀಡಾಪಟು ದೀಪಿಕಾ ಪಳ್ಳಿಕಲ್ ಅವರನ್ನು ಮದುವೆಯಾಗುತ್ತಾರೆ. ಹಲವಾರು ವರ್ಷಗಳ ಪರಿಶ್ರಮದ ನಂತರ ದಿನೇಶ್ ಕಾರ್ತಿಕ್ ರವರು ಈಗ ಮತ್ತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿದ್ದು ಪ್ರಮುಖ ಆಟಗಾರನಾಗಿ ಮಿಂಚುತ್ತಿರುವುದು ನಿಮ್ಮ ಕಣ್ಣಮುಂದಿದೆ. ಇನ್ನು ಮುರಳಿ ವಿಜಯ್ ರವರು ಸಂಪೂರ್ಣವಾಗಿ ಭಾರತೀಯ ಕ್ರಿಕೆಟ್ ತಂಡದಿಂದ ವಿಫಲರಾಗಿ ಸದ್ಯ ತಮಿಳುನಾಡು ಪ್ರೀಮಿಯರ್ ಕ್ರಿಕೆಟ್ ಲೀಗ್ ನಲ್ಲಿ ತ್ರಿಚಿ ರೂಬಿ ವಾರಿಯರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಅವರ ಕುರಿತಂತೆ ಒಂದು ವೈರಲ್ ಆಗಿರುವ ವಿಡಿಯೋ ಸಾಕಷ್ಟು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮುರಳಿ ವಿಜಯ್ ರವರು ತಮ್ಮ ತಂಡದ ಪರವಾಗಿ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಪ್ರೇಕ್ಷಕರು ಡಿಕೆ ಡಿಕೆ ಎನ್ನುವುದಾಗಿ ದಿನೇಶ್ ಕಾರ್ತಿಕ್ ರವರ ಬಗ್ಗೆ ಜಯಘೋಷ ವನ್ನು ಕೂಗುತ್ತಾರೆ. ಇದರಿಂದಾಗಿ ಮುಜುಗರಕ್ಕೆ ಒಳಗಾದ ಮುರಳಿ ವಿಜಯ್ ರವರು ಪ್ರೇಕ್ಷಕರಿಗೆ ಸುಮ್ಮನಿರುವಂತೆ ಕೈಮುಗಿದು ಪರೋಕ್ಷವಾಗಿ ಕೇಳುತ್ತಾರೆ. ಈಗಾಗಲೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಷನಲ್ ಸುದ್ದಿಯನ್ನು ಮಾಡುತ್ತಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ನಿಮ್ಮ ಅಭಿಪ್ರಾಯವನ್ನು ತಪ್ಪದೆ ವ್ಯಕ್ತಪಡಿಸಿ.